Viral Video: ಸಿಕ್ಸರ್ ಬಾರಿಸಿ ಮೈದಾನದಲ್ಲೇ ಕುಸಿದು ಪ್ರಾಣಬಿಟ್ಟ ಕ್ರಿಕೆಟ್ ಆಟಗಾರ
ಸಾವು ಯಾರಿಗೆ ಯಾವಾಗ ಬರುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಇದ್ದಕ್ಕಿದ್ದಂತೆ ಕುಸಿದು ಬಿದ್ದು ವ್ಯಕ್ತಿಗಳು ಸಾವನ್ನಪ್ಪಿರುವು ಅನೇಕ ಘಟನೆಗಳನ್ನು ನೊಡಿದ್ದೇವೆ. ಅಂತಹ ಸಾಕಷ್ಟು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಲಭ್ಯವಿದೆ. ಈಗೊಂದು ವಿಡಿಯೋ ವೈರಲ್ ಆಗುತ್ತಿದ್ದು, ನೆಚ್ಚಿನ ಆಟ ಆಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಗೆಳೆಯರ ಜೊತೆ ಕ್ರಿಕೆಟ್ ಆಡುವಾಗ ಸಿಕ್ಸರ್ ಬಾರಿಸಿದ ವ್ಯಕ್ತಿ ತಕ್ಷಣ ಕುಸಿದು ಬಿದ್ದು ಮೈದಾನದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಥಾಣೆಯ ಮೀರಾ ರೋಡ್ ಪ್ರದೇಶದಲ್ಲಿ ನಡೆದ ಆಘಾತಕಾರಿ ಘಟನೆ ನಡೆದಿದೆ.

ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗುಲಾಬಿ ಬಣ್ಣದ ಜೆರ್ಸಿಯನ್ನು ಧರಿಸಿರುವ ವ್ಯಕ್ತಿ ಬೌಲರ್‌ನ ತಲೆಯ ಮೇಲೆ ಸರಿಯಾದ ಸಮಯಕ್ಕೆ ಲಾಫ್ಟೆಡ್ ಶಾಟ್ ಅನ್ನು ಹೊಡೆಯುವುದನ್ನು ನೋಡಬಹುದು.
#DisturbingVisuals : On camera, man dies immediately after hitting six in match near mumbai.
— upuknews (@upuknews1) June 3, 2024
In a shocking incident in Thane's Mira Road area in Maharashtra, a man died while playing cricket.
A video of the incident, which has since gone viral on social media, shows the man in… pic.twitter.com/2EAoVY3DEw
ಮುಂದಿನ ಎಸೆತ ಎದುರಿಸಲು ತಯಾರಿ ನಡೆಸುತ್ತಿದ್ದ ಅವರು ಏಕಾಏಕಿ ಕುಸಿದು ಬಿದ್ದರು. ಸಹ ಆಟಗಾರರು ತಕ್ಷಣ ಅವರ ಸಹಾಯಕ್ಕೆ ಧಾವಿಸಿದರು, ಆತನನ್ನು ಎಬ್ಬಿಸಲು ಪ್ರಯತ್ನಿಸಿದರು, ಆದರೆ ಅವರ ಪ್ರಯತ್ನಗಳು ವ್ಯರ್ಥವಾಯಿತು. ಆ ವ್ಯಕ್ತಿ ಅಲುಗಾಡಲೇ ಇಲ್ಲ.
ಕ್ರಿಕೆಟ್ ಆಟಗಾರನ ಗುರುತು ಇನ್ನೂ ಬಹಿರಂಗವಾಗಿಲ್ಲ. ಪೊಲೀಸರ ಪ್ರಕಾರ, ಸಾವಿಗೆ ನಿಖರವಾದ ಕಾರಣವನ್ನು ಕಂಡುಹಿಡಿಯಲು ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications