ಕರ್ನಾಟಕದ ಆರ್‌ಸಿಬಿ ಅಭಿಮಾನಿಗಳ ಕ್ರಶ್ ಲಾರೆನ್ ಬೆಲ್ ಇನ್‌ಸ್ಟಾಗ್ರಾಂ ಫಾಲೋವರ್ಸ್ ಗಣನೀಯ ಏರಿಕೆ
Lauren Bell's: ಐಪಿಎಲ್‌ನಂತೆ ಡಬ್ಲ್ಯೂಪಿಎಲ್‌ನಲ್ಲೂ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು. ಈ ಟೀಮ್‌ಗೆ ಎಂಟ್ರಿ ಕೊಟ್ಟವರ ಲಕ್ ಚೇಂಜ್ ಆಗಿಬಿಡುತ್ತದೆ ಎನ್ನುವುದು ಸಾಬೀತಾಗುತ್ತಲಿರುತ್ತದೆ. ಇದೀಗ ಈ ಸಾಲಿನಲ್ಲಿ ಲಾರೆನ್ ಬೆಲ್ ಕೂಡ ಇದ್ದು, ಆರ್‌ಸಿಬಿ ಸೇರ್ಪಡೆಯಾದ ಬಳಿಕ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ.
ಡಬ್ಲ್ಯೂಪಿಎಲ್‌ನಲ್ಲಿ ಲಾರೆನ್ ಬೆಲ್ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ಬಳಿಕ ಅವರ ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆ ಯಾರೂ ಊಹಿಸಿದಂತೆ ಗಣನೀಯವಾಗಿಗೆ ಏರಿಕೆ ಕಂಡಿದೆ. ಇಂಗ್ಲೆಂಡ್ ವೇಗಿಯಾಗಿರುವ ಇವರು, ಕೇವಲ ಮೈದಾನದಲ್ಲಿ ಅಷ್ಟೇ ಅಲ್ಲ, ಹೊರಗೂ ಭಾರೀ ಗಮನ ಸೆಳೆದರು. ಆರ್‌ಸಿಬಿ ಎರಡನೇ ಟ್ರೋಫಿ ಎತ್ತಿದ್ದ ಬಳಿಕವಂತೂ ಅವರ ಸಮಾಜಿಕ ಜಾಲತಾಣದ ಅನುಯಾಯಿಗಳ ಸಂಖ್ಯೆ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಮೂಲಕ ಅವರು ಈ ಸೀಸನ್‌ನಲ್ಲಿ ಅತೀ ಹೆಚ್ಚು ಚರ್ಚೆಗೊಳಗಾದ ಕ್ರಿಕೆಟಿಗರಲ್ಲಿ ಒಬ್ಬರಾಗಿದ್ದಾರೆ.

ಲಾರೆನ್ ಬೆಲ್ ಹೇಳಿದ್ದೇನು?
ಬೆಂಗಳೂರು ಫ್ರಾಂಚೈಸಿಗೆ ಎಂಟ್ರಿ ಕೊಟ್ಟ ಬಳಿಕ ಬೆಲ್ ಅವರ ಲಕ್ ಬದಲಾಯಿತು. ಮಾರಕ ಬೌಲಿಂಗ್ ದಾಳಿ ಮಾಡುವ ಮೂಲಕ ಗಮನ ಸೆಳದೆದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ಈ ಕುರಿತು ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಬೆಲ್, "ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನುಯಾಯಿಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಇನ್ನೂ ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಆರ್‌ಸಿಬಿ ಪರ ತೋರಿದ ಅದ್ಭುತ ಪ್ರದರ್ಶನದ ಬಳಿಕ ಈ ಬದಲಾವಣೆ ಆಗಿದೆ. ಇಂತಹ ನಿಷ್ಠಾವಂತ ಅಭಿಮಾನಿಗಳು ಇದ್ದಾರಾ ಎಂದು ನನ್ನನ್ನ ಆಶ್ಚರ್ಯಚಕಿತಳನ್ನಾಗಿಸಿದೆ," ಎಂದು ಹೇಳಿದರು.
ಲಾರೆನ್ ಬೆಲ್ ಫಾಲೋರ್ಸ್ ಸಂಖ್ಯೆ ಗಣನೀಯ ಏರಿಕೆ
ಮೊದಲಿಗೆ ಲಾರೆನ್ ಬೆಲ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 8 ಲಕ್ಷ ಫಲೋವರ್ಸ್ ಇದ್ದರು. ಆದರೆ, ಡಬ್ಲ್ಯೂಪಿಎಲ್ ಆರಂಭವಾದ ಮೊದಲ ವಾರದಲ್ಲೇ ಅವರ ಫಾಲೋವರ್ ಸಂಖ್ಯೆ 10,00,000 ಗಡಿ ದಾಟಿತು. ಈಗ ಅಚ್ಚರಿಯ ರೀತಿಯಲ್ಲಿ 23 ಲಕ್ಷಕ್ಕೆ ಏರಿದೆ. "ಮೊದಲ ವಾರದಲ್ಲೇ ನಾನು ಒಂದು ಮಿಲಿಯನ್ ಫಾಲೋವರ್ಸ್ ತಲುಪಿದಾಗ ನನಗೆ ನಿಜವಾಗಿಯೂ ಆಶ್ಚರ್ಯವಾಯಿತು. ಇನ್‌ಸ್ಟಾಗ್ರಾಂನಲ್ಲಿ ಒಂದು ಮಿಲಿಯನ್ ಜನರು ನನ್ನನ್ನು ಹೇಗೆ ಫಾಲೋ ಮಾಡುತ್ತಿದ್ದಾರೆ? ಎಂದು ನಾನು ನನಗೆ ತಾನೇ ಪ್ರಶ್ನೆ ಮಾಡಿಕೊಂಡೆ. ಇದು ನಿಜಕ್ಕೂ ಅಚ್ಚರಿಯ ಸಂಗತಿ," ಎಂದು ಬೆಲ್ ಹೇಳಿದ್ದಾರೆ.
ಇಂಗ್ಲೆಂಡ್ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನ
ಲಾರೆನ್ ಬೆಲ್ ಇದೀಗ ಇನ್‌ಸ್ಟಾಗ್ರಾಂನಲ್ಲಿ ಅತ್ಯಧಿಕ ಅನುಯಾಯಿಗಳನ್ನು ಹೊಂದಿರುವ ಇಂಗ್ಲೆಂಡ್ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಜೋಸ್ ಬಟ್ಲರ್ ಮತ್ತು ಬೆನ್ ಸ್ಟೋಕ್ಸ್ ನಂತರ ಅವರಿದ್ದಾರೆ. ಗಮನಾರ್ಹ ಸಂಗತಿ ಏನೆಂದರೆ, ಜೋ ರೂಟ್ ಮತ್ತು ಜೋಫ್ರಾ ಆರ್ಚರ್ ಅವರಿಬ್ಬರ ಒಟ್ಟು ಫಾಲೋವರ್ಸ್ ಸಂಖ್ಯೆಯನ್ನು ಸಹ ಅವರು ಮೀರಿಸಿದ್ದಾರೆ. ಇದು ಅವರ ಜನಪ್ರಿಯತೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ.
'ಆರ್‌ಸಿಬಿ ಅಭಿಮಾನಿಗಳಿಂದ ಅಪಾರ ಬೆಂಬಲ ಸಿಕ್ಕಿದೆ'
ಲಾರೆನ್ ಬೆಲ್ ಅವರ ವಿಶೇಷ ನಗು ಹಾಗೂ ಡಿಂಪಲ್‌ಗಳೊಂದಿಗೆ ಇರುವ ರೀಲ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವೈರಲ್ ಆಗುತ್ತಿರುತ್ತವೆ. ಇದರಿಂದ ಹಲವರು ನನ್ನನ್ನ ಆರ್‌ಸಿಬಿ ಅಭಿಮಾನಿಗಳ "ಕ್ರಶ್" ಅಂತಾ ಕರೆಯುತ್ತಾರೆ. ಆದರೆ, ಅಭಿಮಾನವು ಕೇವಲ ವೈರಲ್ ಕ್ಷಣಗಳಲ್ಲೇ ಸೀಮಿತವಾಗಿಲ್ಲ. ಆರ್‌ಸಿಬಿ ನಿಷ್ಠಾವಂತ ಅಭಿಮಾನಿಗಳು ತಮಗೆ ಮನೆಯವರಂತೆಯೇ ಪ್ರೀತಿಯಿಂದ ಕಂಡರು. ಹೀಗೆ ಆರ್‌ಸಿಬಿ ಅಭಿಮಾನಿಗಳಿಂದ ನನಗೆ ಅಪಾರ ಬೆಂಬಲ ಸಿಕ್ಕಿದೆ. ಆದರೆ, ನನ್ನನ್ನು ಇಷ್ಟೊಂದು ಜನ ಫಾಲೋ ಮಾಡುತ್ತಿದ್ದಾರೆ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿ ಎಂದು ಬೆಲ್ ಹೇಳಿದ್ದಾರೆ.
ಬೆಲ್ ಆರ್‌ಸಿಬಿ ಪರ ಉತ್ತಮವಾಗಿ ಪ್ರದರ್ಶನ ತೋರುವ ಮೂಲಕ ಎದುರಾಳಿ ತಂಡ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸುತ್ತಿದ್ದರು. ಅಷ್ಟರ ಮಟ್ಟಿಗೆ ಬೌಲಿಂಗ್ ದಾಳಿ ನಡೆಸುತ್ತಿದ್ದರು. ಇವರ ಈ ಬೌಲಿಂಗ್ ಶೈಲಿಗೆ ಕರ್ನಾಟಕದಲ್ಲಿ ಅಪಾರ ಅಭಿಮಾನಿ ಬಳಗವಿದೆ. ಆರ್‌ಸಿಬಿಯ ಪ್ರಶಸ್ತಿ ಗೆಲುವಿಗೆ ಪ್ರಮುಖ ಕಾರಣಕರ್ತೆಯರಲ್ಲಿ ಇವರು ಕೂಡ ಒಬ್ಬರಾಗಿದ್ದಾರೆ. ಟೂರ್ನಿಯಲ್ಲಿ ಒಟ್ಟು 12 ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಬೆಲ್ ನಾಲ್ಕು ಓವರ್‌ಗಳಲ್ಲಿ ಕೇವಲ 19 ರನ್ ನೀಡುವ ಮೂಲಕ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಮತ್ತೆ ಸಾಬೀತುಪಡಿಸಿದರು. ಆರ್‌ಸಿಬಿ ನಾಯಕಿ ಸ್ಮೃತಿ ಮಂಧಾನ ಕೂಡ ಅವರ ಬೌಲಿಂಗ್ ಅನ್ನು ಕೊಂಡಾಡಿದ್ದಾರೆ. ಒತ್ತಡದ ಕ್ಷಣಗಳಲ್ಲಿ ತಂಡವು ಅವರ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು ಎಂದು ಹೇಳಿದ್ದರು. ಅಷ್ಟರ ಮಟ್ಟಿಗೆ ಲಾರೆನ್ ಬೆಲ್ ಉತ್ತಮ ಕೊಡುಗೆ ನೀಡುವ ಮೂಲಕ ಟ್ರೋಫಿ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು.












Click it and Unblock the Notifications