'ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್ ಆತ್ಮವಿಸ್ವಾಸ ಕುಗ್ಗಿಸಿದೆ'

Krishnamachari Srikkanth: ಭಾರತ ಮತ್ತು ವೆಸ್ಟ್‌ ಇಂಡೀಸ್ ನಡುವಿನ ನಾಲ್ಕನೇ ಟಿ20 ಪಂದ್ಯ ಇಂದು (ಅಕ್ಟೋಬರ್ 14) ಸಂಜೆ 7 ಗಂಟೆಗೆ ಆರಂಭವಾಗಲಿದೆ. ಇದಕ್ಕೂ ಮುನ್ನ ಟೀಮ್ ಇಂಡಿಯಾ ಮಾಜಿ ಕ್ರಿಕೆಟರ್ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮ್ಯಾನೇಜ್‌ಮೆಂಟ್‌ ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್ ಆಸ್ತವಿಶ್ವಾಸ ಕುಗ್ಗಿಸುವ ಕೆಲಸ ಮಾಡುತ್ತಿದೆ ಗಂಭೀರ ಆರೋಪ ಮಾಡಿದ್ದಾರೆ.

ಭಾರತೀಯ ಟಿ20 ತಂಡದಲ್ಲಿ ಆರಂಭಿಕ ಬ್ಯಾಟರ್‌ಗಳ ಆಯ್ಕೆಯಲ್ಲಿ ನಿರಂತರವಾಗಿ ಮಾಡುತ್ತಿರುವ ಬದಲಾವಣೆಗಳು ಯುವ ಆಟಗಾರರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿವೆ ಎಂದು 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಹಾಗೂ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Krishnamachari Srikkanth Slams Team India Management Over Vaibhav Sooryavanshi and Sanju Samson

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಅಸಮಾಧಾನ

ಟೀಮ್ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ನೇತೃತ್ವದ ಮ್ಯಾನೇಜ್‌ಮೆಂಟ್, ಯುವ ಆಟಗಾರರಾದ ವೈಭವ್ ಸೂರ್ಯವಂಶಿ ಹಾಗೂ ಸಂಜು ಸ್ಯಾಮ್ಸನ್ ಅವರಿಗೆ ಸರಿಯಾದ ಅವಕಾಶ ನೀಡುವಲ್ಲಿ ಎಡವಿದೆ. ಈ ಮೂಲಕ ಅವರಿಬ್ಬರ ಆತ್ಮವಿಶ್ವಾಸ ಕುಗ್ಗಿಸುವ ಕೆಲಸವನ್ನು ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.

ಕೃಷ್ಣಮಾಚಾರಿ ಶ್ರೀಕಾಂತ್ ಹೇಳಿದ್ದೇನು?

'ಪ್ರಸ್ತುತ ಭಾರತ ಟಿ20 ತಂಡದಲ್ಲಿ ಆರಂಭಿಕ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ ಮತ್ತು ಇಶಾನ್ ಕಿಶನ್ ಅವರಂತಹ ಪ್ರಮುಖ ಆಟಗಾರರು ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ತಂಡದಲ್ಲಿ ಜಾಗ ಪಡೆಯುತ್ತಿದ್ದಾರೆ. ಅಭಿಷೇಕ್ ಶರ್ಮಾಗೆ ನಿರಂತರವಾಗಿ ಅವಕಾಶ ನೀಡಲಾಗುತ್ತಿದೆ. ಆದರೂ, ಯುವ ಬ್ಯಾಟರ್ ವೈಭವ್ ಹಾಗೂ ಸಂಜು ನಡುವೆ ಮ್ಯಾನೇಜ್‌ಮೆಂಟ್ ತೀವ್ರ ಗೊಂದಲದಲ್ಲಿದೆ,' ಎಂದು ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವೈಭವ್ ಸೂರ್ಯವಂಶಿ ಅತ್ಯದ್ಭುತ ಪ್ರದರ್ಶನ

ವೈಭವ್ ಸೂರ್ಯವಂಶಿ ಜೂನ್-ಜುಲೈನಲ್ಲಿ ನಡೆದ ಐರ್ಲ್ಯಾಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಐರ್ಲ್ಯಾಂಡ್ ವಿರುದ್ಧದ ಪಂದ್ಯಗಳಲ್ಲಿ ಹಾಗೂ ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿತ್ತಾದರೂ, ಅವರು ಕ್ರಮವಾಗಿ 5, 0 ಮತ್ತು 1 ರನ್ ಗಳಿಸಿ ವಿಫಲರಾಗಿದ್ದರು. ನಂತರ ಎರಡನೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸೂರ್ಯವಂಶಿ ಮೂರು ಪಂದ್ಯಗಳಲ್ಲಿ 14, 13 ಮತ್ತು 15 ರನ್ ಗಳಿಸಿದ್ದು, ಜಿಂಬಾಬ್ವೆ ಪ್ರವಾಸದಲ್ಲಿ 50, 20 ಮತ್ತು 81 ರನ್‌ಗಳ ಭರ್ಜರಿ ಪ್ರದರ್ಶನ ನೀಡಿದ್ದರು.

ಕೃಷ್ಣಮಾಚಾರಿ ಶ್ರೀಕಾಂತ್ ಸಲಹೆ ಏನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಬಗ್ಗೆ ಮಾತನಾಡಿದ ಕೆ.ಶ್ರೀಕಾಂತ್ ಅವರು, 'ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಸಂಜು ಸ್ಯಾಮ್ಸನ್ ಅಷ್ಟೇ ಅಲ್ಲದೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಆತ್ಮವಿಶ್ವಾಸವನ್ನೂ ಸಂಪೂರ್ಣವಾಗಿ ಕುಗ್ಗಿಸಿದೆ. ವೆಸ್ಟ್ ಇಂಡೀಸ್‌ನಂತಹ ತಂಡದ ವಿರುದ್ಧ ಸೂರ್ಯವಂಶಿಗೆ ಕನಿಷ್ಠ ಮೂರು ಪಂದ್ಯಗಳಲ್ಲಿ ಅವಕಾಶ ನೀಡಬೇಕಿತ್ತು. ಈಗಾಗಲೇ ಅಭಿಷೇಕ್ ಶರ್ಮಾ ಸಾಕಷ್ಟು ಪಂದ್ಯಗಳಲ್ಲಿ ಆಡಿರುವುದರಿಂದ, ಅವರಿಗೆ ವಿಶ್ರಾಂತಿ ನೀಡಿ ಸೂರ್ಯವಂಶಿ ಮತ್ತು ಸಂಜು ಅವರಿಂದ ಇನಿಂಗ್ಸ್ ಆರಂಭಿಸಬೇಕಿತ್ತು,' ಎಂದು ಹೇಳಿದ್ದಾರೆ.

ಸಂಜು ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನದ ಕುರಿತಾಗಿಯೂ ಮಾತನಾಡಿದ ಶ್ರೀಕಾಂತ್, 'ಸಂಜು ಪ್ರದರ್ಶನದಲ್ಲಿ ಏರಿಳಿತಗಳು ಸಾಮಾನ್ಯ. ಅವರ ಸ್ಥಿರತೆಯ ಬಗ್ಗೆ ಸದಾ ಪ್ರಶ್ನೆಗಳಿರುತ್ತವೆ. ವಿಶ್ವಕಪ್‌ನಂತಹ ದೊಡ್ಡ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಅವರು, ನಂತರದ ಪಂದ್ಯಗಳಲ್ಲಿ ಸತತವಾಗಿ ವಿಫಲರಾಗುತ್ತಾರೆ. ಆದರೆ ಅಭಿಷೇಕ್ ಶರ್ಮಾ ಶೈಲಿ ಅಷ್ಟು ತೀವ್ರವಾದ ಏರಿಳಿತಗಳನ್ನು ಹೊಂದಿರುವುದಿಲ್ಲ. ಈಗ ಮತ್ತೆ ಮುಂದಿನ ಪಂದ್ಯದಲ್ಲಿ ಸಂಜು ರನ್ ಗಳಿಸಬಹುದು,' ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+