Get Updates
Get notified of breaking news, exclusive insights, and must-see stories!

CWG 2022: ಟೈಲರಿಂಗ್ ಅಂಗಡಿಯಿಂದ ಕಂಚಿನ ಪದಕದವರೆಗೆ ಲವ್‌ಪ್ರೀತ್ ಸಿಂಗ್ ಸಾಧನೆಯ ಹಾದಿ

2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದೆ. 109 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಕಂಚಿನ ಪದಕವನ್ನು ಪಡೆಯುವ ಮೂಲಕ ಲವ್‌ಪ್ರೀತ್ ಸಿಂಗ್ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ. ಆದರೆ ಹಳ್ಳಿಯೊಂದರಿಂದ ಬಂದ ಲವ್‌ಪ್ರೀತ್ ಸಿಂಗ್ ಕಾಮನ್‌ವೆಲ್ತ್ ಕಂಚಿನ ಪದಕದ ಹಾದಿಯೇನು ಸುಲಭವಾಗಿರಲಿಲ್ಲ.

ಪಂಜಾಬ್‌ನ ಅಮೃತಸರದ ಸಣ್ಣ ಹಳ್ಳಿಯಿಂದ ಬಂದ ಲವ್‌ಪ್ರೀತ್ ತನ್ನ ಕ್ರೀಡೆಯಲ್ಲಿ ಸಾಧನೆ ಮಾಡಲು ಅಸಂಖ್ಯಾತ ಕಷ್ಟಗಳನ್ನು ಪಡಬೇಕಾಯಿತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಕಂಚಿನ ವರ್ಣದಲ್ಲಿ ವೇದಿಕೆಯ ಮೇಲೆ ನಿಂತಾಗ ಆತನ ಶ್ರಮ, ಕಷ್ಟಕ್ಕೆ ನಿಜವಾದ ಸಾರ್ಥಕತೆ ದೊರಕಿದೆ.

ಸಾಧನೆ ಮಾಡಿದ ಮೇಲೆ ಲಕ್ಷಾಂತರ ಜನ ಗುರುತಿಸುತ್ತಿರಾ, ಎಲ್ಲರೂ ಅಭಿನಂದಿಸುತ್ತಾರೆ. ಆದರೆ ಪ್ರತಿಯೊಬ್ಬ ಸಾಧಕನೂ ಕಷ್ಟದ ಹಾದಿಯನ್ನು ತುಳಿದೇ ಬಂದಿರುತ್ತಾನೆ.

Know About Lovepreet Singh Journey: From Tailoring Shop To Bronze Medal At CWG 2022

2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದ ವೇಟ್‌ಲಿಫ್ಟರ್ ಲವ್‌ಪ್ರೀತ್‌ ಜೊತೆ ಒನ್‌ ಇಂಡಿಯಾದ ಮೈಖೇಲ್ ವಿಭಾಗದ ಜೊತೆ ಮಾತನಾಡಿದ್ದು, ತಮ್ಮ ಹಳ್ಳಿಯಿಂದ ಕಾಮನ್‌ವೆಲ್ತ್‌ ಗೇಮ್ಸ್‌ನ ಕಂಚಿನ ಪದಕದವರೆಗೆ ಸಾಧನೆಯ ಹಾದಿಯ ಬಗ್ಗೆ ಅವರು ಹಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ.

ಪ್ರಶ್ನೆ: ನಿಮ್ಮ ಕುಟುಂಬದಲ್ಲಿ ಬೇರೆ ಯಾವುದೇ ವೇಟ್‌ಲಿಫ್ಟರ್ ಇಲ್ಲದ ಕಾರಣ, ನೀವು ಕ್ರೀಡಾ ಲೋಕಕ್ಕೆ ಹೇಗೆ ಬಂದಿರಿ?

ಉತ್ತರ: ನಾನು 9ನೇ ತರಗತಿಯಲ್ಲಿದ್ದಾಗ ವೇಟ್ ಲಿಫ್ಟಿಂಗ್ ಆರಂಭಿಸಿದ್ದೆ. ಗ್ರಾಮದಲ್ಲಿ ಕೆಲವರು ವೇಟ್ ಲಿಫ್ಟಿಂಗ್ ಮಾಡುತ್ತಿದ್ದರು. ಅವರನ್ನು ನೋಡಿಯೇ ನಾನು ಈ ಆಟವನ್ನು ಆರಿಸಿಕೊಂಡೆ. ನಾನು ಅಮೃತಸರದವನು, ಮನೆಯಲ್ಲಿ ನನ್ನ ತಂದೆತಾಯಿಗಳು, ಒಡಹುಟ್ಟಿದವರು ಇದ್ದಾರೆ ಮತ್ತು ಕುಟುಂಬದಲ್ಲಿ ಯಾರೂ ಈ ಆಟದಲ್ಲಿ ಭಾಗವಹಿಸಿಲ್ಲ. ನನ್ನ ತಂದೆ ಟೈಲರ್ ಆದರೆ ನಾನು ಅವರ ವ್ಯವಹಾರಕ್ಕೆ ಬರುವುದು ಅವರಿಗೆ ಇಷ್ಟವಿಲ್ಲ. ಅವರು ಯಾವಾಗಲೂ ನನ್ನನ್ನು ಕ್ರೀಡಾಪಟುವಾಗಿ ನೋಡಲು ಇಷ್ಟಪಡುತ್ತಾರೆ.

Know About Lovepreet Singh Journey: From Tailoring Shop To Bronze Medal At CWG 2022

ನಾನು 2013-14ರಲ್ಲಿ ನನ್ನ ಮೊದಲ ಜೂನಿಯರ್ ನ್ಯಾಷನಲ್ಸ್‌ನಲ್ಲಿ ಭಾಗವಹಿಸಿದ್ದೆ. ನಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲ ಆದರೆ ನನ್ನ ತರಬೇತಿ ಮತ್ತು ಆಹಾರಕ್ರಮಕ್ಕೆ ಬೇಕಾದ ಎಲ್ಲವನ್ನೂ ಪಡೆಯಲು ನನ್ನ ತಂದೆ ನನಗೆ ಸಹಾಯ ಮಾಡಿದರು.

ನನಗಾಗಿ ಸಾಕಷ್ಟು ತ್ಯಾಗ ಮಾಡಿದ ನನ್ನ ಕುಟುಂಬಕ್ಕೆ ನಾನು ಕೃತಜ್ಞನಾಗಿದ್ದೇನೆ. 2015 ರಲ್ಲಿ ನಾನು ಭಾರತೀಯ ನೌಕಾಪಡೆಗೆ ಸೇರಿದ ನಂತರ, ನಮ್ಮ ಕುಟುಂಬದ ಪರಿಸ್ಥಿತಿ ಸುಧಾರಣೆಯಾಗಿದೆ.

ಪ್ರಶ್ನೆ: ಸಾಂಕ್ರಾಮಿಕ ಲಾಕ್‌ಡೌನ್ ಸಮಯದಲ್ಲಿ ನೀವು ತರಬೇತಿ ಪಡೆಯುವುದು ಎಷ್ಟು ಕಠಿಣವಾಗಿತ್ತು?

ಆ ಸಮಯದಲ್ಲಿ ನಾನು ರಜೆಯಲ್ಲಿದ್ದೆ ಮತ್ತು ಮನೆಯಲ್ಲಿದ್ದೆ. ನಾನು ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಏಕಾಂಗಿಯಾಗಿ ಅಭ್ಯಾಸ ಮಾಡುವುದು ಕಠಿಣವಾಗಿತ್ತು ಆದರೆ ನಾನು ನನ್ನ ಶಕ್ತಿಯನ್ನು ಸುಧಾರಿಸಲು ಮತ್ತು ಮಾನಸಿಕವಾಗಿ ಸಿದ್ಧನಾಗಲು ಅಭ್ಯಾಸ ಮಾಡುತ್ತಿದ್ದೆ.

Know About Lovepreet Singh Journey: From Tailoring Shop To Bronze Medal At CWG 2022

ಪ್ರಶ್ನೆ: ಕಾಮನ್‌ವೆಲ್ತ್‌ ಗೇಮ್ಸ್‌ 2022 ನಲ್ಲಿ ನೀವು ಮೊದಲಿನಿಂದಲೂ ಪದಕದ ಸ್ಪರ್ಧೆಯಲ್ಲಿದ್ದೀರಿ, ಈಗ ಏನನ್ನಿಸುತ್ತಿದೆ?

ನಾನು ಅತ್ಯುತ್ತಮವಾಗಿ ಆಡಬೇಕು ಎಂದು ತೀರ್ಮಾನಿಸಿದ್ದೆ. ನಾನು ಆಯ್ದುಕೊಂಡ ಭಾರವನ್ನು ಎತ್ತುವ ಆಲೋಚನೆಯಲ್ಲಿದ್ದೆ. ನನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದರೆ, ಪ್ರತಿಫಲಗಳು ತಾನಾಗಿಯೇ ಬರುತ್ತವೆ ಎಂದು ನನಗೆ ತಿಳಿದಿತ್ತು. ಎದುರಾಳಿಗಳೂ ಕೂಡ ತೀವ್ರ ಸ್ಪರ್ಧೆ ನೀಡುತ್ತಾರೆ, ಆದ್ದರಿಂದ ನಾನು ಯಾವುದೇ ತಪ್ಪು ಮಾಡದೇ ಭಾರ ಎತ್ತುವುದು ಮುಖ್ಯವಾಗಿತ್ತು. ಏಕೆಂದರೆ ಒಂದು ತಪ್ಪು ಲಿಫ್ಟ್ ಕೂಡ ಈ ಮಟ್ಟದಲ್ಲಿ ಅವಕಾಶಗಳನ್ನು ಹಾಳುಮಾಡುತ್ತದೆ.

ಪ್ರಶ್ನೆ: ಕಂಚಿನ ಪದಕ ಗೆದ್ದ ನಂತರ, ಶಿಖರ್ ಧವನ್‌ ರೀತಿ ತೊಡೆ ತಟ್ಟಿ ಸಂಭ್ರಮಾಚರಣೆ ಮಾಡಿದ್ದಕ್ಕೆ ಏನಾದರೂ ವಿಶೇಷ ಅರ್ಥವಿದೆಯೇ?

ಉತ್ತರ: ಅದು ದಿವಂಗತ ಗಾಯಕ ಸಿದ್ದು ಮುಸೇವಾಲ ಅವರಿಗಾಗಿ ಮಾಡಿದ್ದು. ಅವರ ಹಾಡುಗಳು ನನಗೆ ತುಂಬಾ ಇಷ್ಟ. ತೊಡೆ ತಟ್ಟುವುದರಲ್ಲಿ ಮೂಸೆವಾಲಾ ತಮ್ಮ ವಿಶಿಷ್ಟ ಶೈಲಿಯನ್ನು ಹೊಂದಿದ್ದರು. ಇದು ಅವರಿಗೆ ನನ್ನ ಕಡೆಯಿಂದ ಒಂದು ಚಿಕ್ಕ ಶ್ರದ್ಧಾಂಜಲಿ. ನಾನು ಪದಕ ಗೆದ್ದ ನಂತರ, ಅವರ ಹಾಡನ್ನು ಸಭಾಂಗಣದಲ್ಲಿ ನುಡಿಸಿರುವುದನ್ನು ನೀವು ಗಮನಿಸಿರಬಹುದು.

Know About Lovepreet Singh Journey: From Tailoring Shop To Bronze Medal At CWG 2022

ಪ್ರಶ್ನೆ: ನಿಮ್ಮ ಕುಟುಂಬದಲ್ಲಿ ಬೇರೆ ಯಾವುದೇ ಕ್ರೀಡಾಪಟುಗಳಿಲ್ಲ.ವೇಟ್‌ಲಿಫ್ಟಿಂಗ್ ಒಂದು ಕಠಿಣ ಕ್ರೀಡೆ ಮತ್ತು ಇದರಲ್ಲಿ ಸ್ಪರ್ಧಿಸಲು ನಿಮಗೆ ಸ್ಫೂರ್ತಿ ಯಾರು?

ಉತ್ತರ: ಒಬ್ಬ ನಿರ್ದಿಷ್ಟ ಕ್ರೀಡಾಪಟುವನ್ನು ಸೂಚಿಸುವುದು ಕಠಿಣವಾಗಿದೆ ಏಕೆಂದರೆ ಎಲ್ಲಾ ಹಿರಿಯ ಆಟಗಾರರು ನನಗೆ ಇಷ್ಟ, ಅವರೆಲ್ಲ ನನಗೆ ಉಪಯುಕ್ತವಾದ ಸಲಹೆಗಳನ್ನು ನೀಡುತ್ತಾರೆ. ಆದರೆ ನಾನು ನಮ್ಮ ಕೋಚ್ ವಿಜಯ್ ಶರ್ಮಾ ಸರ್ ಬಗ್ಗೆ ಹೇಳಲೇಬೇಕು.

ವಿಜಯ್ ಶರ್ಮಾ ಹಾರ್ಡ್ ಟಾಸ್ಕ್ ಮಾಸ್ಟರ್. ಅವರು ಯಾವಾಗಲೂ ನಮ್ಮನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಕಾಮನ್‌ವೆಲ್ತ್‌ ಗೇಮ್ಸ್ 2022 ರಲ್ಲಿ ಪ್ರತಿಯೊಬ್ಬ ಲಿಫ್ಟರ್‌ಗಳು ಪದಕವನ್ನು ಪಡೆಯಬೇಕೆಂದು ಅವರು ಬಯಸಿದ್ದರು. ನಾವು ಅದನ್ನು ಬಹುತೇಕ ಸಾಧಿಸಿದ್ದೇವೆ. ಇದು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಮ್ಮ ಅತ್ಯಂತ ಯಶಸ್ವಿ ಪ್ರದರ್ಶನವಾಗಿದೆ. ಶರ್ಮಾ ಅವರ ಪ್ರೇರಣೆ ಮತ್ತು ಕ್ರೀಡಾಪಟುಗಳ ಪರಿಶ್ರಮದಿಂದ ಇದನ್ನು ಸಾಧಿಸಲಾಗಿದೆ.

ಪ್ರಶ್ನೆ: ವೇಟ್‌ಲಿಫ್ಟರ್ ತನ್ನ ಕ್ರೀಡೆಯಲ್ಲಿ ಯಾವ ಸವಾಲುಗಳನ್ನು ಎದುರಿಸುತ್ತಾನೆ ಏಕೆಂದರೆ ಅದು ತಂತ್ರ ಮತ್ತು ಸಾಮರ್ಥ್ಯ ಎರಡನ್ನೂ ಸಮ ಪ್ರಮಾಣದಲ್ಲಿ ಒಳಗೊಂಡಿರುತ್ತದೆ?

Know About Lovepreet Singh Journey: From Tailoring Shop To Bronze Medal At CWG 2022

ಉತ್ತರ: ವೇಟ್‌ಲಿಫ್ಟಿಂಗ್‌ನಲ್ಲಿ ಭಾರವನ್ನು ಎತ್ತುವುದರಿಂದ ಹಿಡಿದು ತಲೆಯ ಮೇಲೆ ಹಿಡಿದುಕೊಳ್ಳುವವರೆಗೆ ಎಲ್ಲವೂ ತುಂಬಾ ಕಷ್ಟ. ಆದರೆ ಕ್ಲೀನ್ ಮತ್ತು ಜರ್ಕ್ ಭಾಗವು ಅತ್ಯಂತ ಕಷ್ಟಕರವಾಗಿದೆ ಏಕೆಂದರೆ ನೀವು ತೂಕವನ್ನು ಮೇಲಕ್ಕೆ ಹಿಡಿದಿಟ್ಟುಕೊಳ್ಳಬೇಕು ಮತ್ತು ಆ ಜರ್ಕಿಂಗ್ ಚಲನೆಯನ್ನು ಮಾಡಬೇಕಾಗುತ್ತದೆ. ನನಗೆ ಮೊದಲಿನಿಂದಲೂ ಅದು ಕಷ್ಟವಾಗುತ್ತಿತ್ತು. ನನ್ನ ಕಾಲುಗಳ ಚಲನೆ ಮತ್ತು ಉಸಿರಾಟವನ್ನು ಸರಿಯಾಗಿ ಮಾಡಲು ನಾನು ಸಾಕಷ್ಟು ಅಭ್ಯಾಸ ಮಾಡಬೇಕಾಯಿತು.

ಪ್ರಶ್ನೆ: ಪದಕ ಗೆದ್ದ ನಂತರ ನಿಮಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ, ಆ ಹಠಾತ್ ಜನಪ್ರಿಯತೆಯನ್ನು ನೀವು ಹೇಗೆ ಸ್ವೀಕರಿಸುತ್ತೀರಿ?

ಉತ್ತರ: ಆ ಎಲ್ಲಾ ಮೆಚ್ಚುಗೆಯನ್ನು ಪಡೆಯುವುದು ಒಳ್ಳೆಯದು. ನಾನು ಪ್ರಧಾನಿ ಮೋದಿಯವರಿಗೆ ತುಂಬಾ ಧನ್ಯವಾದ ಹೇಳಲು ಬಯಸುತ್ತೇನೆ. ನಮಗೆ ಸೌಲಭ್ಯ ಮತ್ತು ಬೆಂಬಲವನ್ನು ನೀಡಿದ ಕ್ರೀಡಾ ಸಚಿವಾಲಯ ಮತ್ತು ಫೆಡರೇಶನ್‌ಗೆ ನಾನು ಧನ್ಯವಾದ ಹೇಳುತ್ತೇನೆ. ಅವರು ನಮ್ಮನ್ನು (ವೇಟ್‌ಲಿಫ್ಟರ್‌ಗಳನ್ನು) ಒಂದು ತಿಂಗಳು ಮುಂಚಿತವಾಗಿ ಇಲ್ಲಿಗೆ ಕಳುಹಿಸಿದ್ದಾರೆ. ಅದಕ್ಕಾಗಿಯೇ ನಾವು ಕಠಿಣ ತರಬೇತಿ ಪಡೆಯಲು ಮತ್ತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+