IPL 2025: ₹14 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ಸೇರಿದ ಕೆಎಲ್ ರಾಹುಲ್
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ ಬರೋಬ್ಬರಿ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಜಿ ನಾಯಕನನ್ನು ಖರೀದಿ ಮಾಡಲು ಸಿಎಸ್‌ಕೆ, ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಗಳ ನಡುವೆ ಭಾರಿ ಪೈಪೋಟಿ ನಡೆದರೂ ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.
ಮೂರು ವರ್ಷಗಳ ಕಾಲ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕತ್ವ ವಹಿಸಿದ್ದ ಕೆಎಲ್ ರಾಹುಲ್ 2024ರ ಐಪಿಎಲ್‌ನಲ್ಲಿ ತಂಡದ ಕಳಪೆ ಪ್ರದರ್ಶನ ನೀಡಿದ ಕಾರಣ ಫ್ರಾಂಚೈಸಿ ಮಾಲೀಕ ಸಂಜೀವ ಗೊಯೆಂಕಾರ ಸಿಟ್ಟಿಗೆ ತುತ್ತಾಗಿದ್ದರು.

ಕಳೆದ ಐಪಿಎಲ್‌ನಲ್ಲೇ ಅಭಿಮಾನಿಗಳು ಕೆಎಲ್ ರಾಹುಲ್ ಎಲ್‌ಎಸ್‌ಜಿ ತಂಡವನ್ನು ಬಿಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದರು. ಅದೇ ರೀತಿ ಎಲ್‌ಎಸ್‌ಜಿ ಅವರನ್ನು ಬಿಡುಗಡೆ ಮಾಡಿತ್ತು. ತನಗೆ ಬೆಲೆ ಮತ್ತು ಸ್ವಾತಂತ್ರ ಸಿಗುವ ಕಡೆ ಆಡಬೇಕು ಎಂದು ಕೆಎಲ್ ರಾಹುಲ್ ಹೇಳಿದ್ದರು. ಈಗ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ.
ಕೆಎಲ್ ರಾಹುಲ್ ಐಪಿಎಲ್ ಅಂಕಿಅಂಶ
ಕೆಎಲ್ ರಾಹುಲ್ ಐಪಿಎಲ್‌ನಲ್ಲಿ 132 ಪಂದ್ಯಗಳನ್ನು ಆಡಿದ್ದು 45.47 ಸರಾಸರಿ ಮತ್ತು 134.61 ಸ್ಟ್ರೈಕ್‌ರೇಟ್‌ನಲ್ಲಿ 4683 ರನ್ ಗಳಿಸಿದ್ದಾರೆ. 4 ಶತಕ ಮತ್ತು 37 ಅರ್ಧಶತಕ ಗಳಿಸಿದ್ದು, 132 ಅವರ ಗರಿಷ್ಠ ಸ್ಕೋರ್ ಆಗಿದೆ. ಇದೀಗ ತಂಡದಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯುತ್ತಿದ್ದು, ಎರಡು ದಿನಗಳ ಕಾಲ 10 ಪ್ರಾಂಚೈಸಿಗಳು ವಿವಿಧ ಆಟಗಾರರನ್ನು ಖರೀದಿ ಮಾಡಲು ಹರಾಜು ಟೇಬಲ್‌ನಲ್ಲಿ ಸೆಣೆಸಲಿವೆ.












Click it and Unblock the Notifications