KL Rahul: ನಾಯಕತ್ವ ಬೇಡ! ಕನ್ನಡಿಗ ಕೆಎಲ್ ರಾಹುಲ್ ಅಚ್ಚರಿಯ ನಿರ್ಧಾರ

ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಫಿನಿಷರ್ ಆಗುವ ಭರವಸೆ ಮೂಡಿಸಿದ್ದಾರೆ. ಒತ್ತಡದ ಸಮಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಅವರು, ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ಸೆಮಿಫೈನಲ್, ಫೈನಲ್ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಕೆಎಲ್ ರಾಹುಲ್ ಐಪಿಎಲ್‌ನತ್ತ ಗಮನ ಹರಿಸಿದ್ದಾರೆ.

2022ರಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಕೆಎಲ್ ರಾಹುಲ್ ಕಳೆದ ಆವೃತ್ತಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಫ್ರಾಂಚೈಸಿ ಮಾಲಿಕ ಸಂಜೀವ್ ಗೊಯೆಂಕಾರ ಅಸಮಾಧಾನಕ್ಕೆ ಕಾರಣವಾಗಿದ್ದರು. 2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಎಲ್‌ಎಸ್‌ಜಿ ಅವರನ್ನು ಬಿಡುಗಡೆ ಮಾಡಿತ್ತು, ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಖರೀದಿ ಮಾಡಿದೆ.

Kl rahul declines delhi capitals captaincy offer ipl 2025

ನಾಯಕತ್ವ ಬೇಡವೆಂದ ಕನ್ನಡಿಗ!

2025ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೆಎಲ್ ರಾಹುಲ್ ಅವರೇ ನಾಯಕರಾಗುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಕೆಎಲ್ ರಾಹುಲ್ ನಾಯಕತ್ವದ ಆಫರ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್‌ಗೆ ನಾಯಕತ್ವ ನೀಡಲು ಆಸಕ್ತಿ ಹೊಂದಿದ್ದರೂ ಇದೀಗ ಕೆಎಲ್ ರಾಹುಲ್ ನಿರ್ಧಾರ ಅದಕ್ಕೆ ಅಡ್ಡಿಯಾಗಿದೆ.

ಐಎಎನ್‌ಎಸ್ ವರದಿಯ ಪ್ರಕಾರ, ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿರುವ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್‌ ಡಿಸಿ ನಾಯಕತ್ವದ ಆಫರ್ ನಿರಾಕರಿಸಿದ್ದಾರೆ. ಐಪಿಎಲ್ ಆರಂಭಕ್ಕೆ ಇನ್ನು ಕೆಲವೇ ದಿನಗಳಿದ್ದು ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ಇನ್ನೂ ನಾಯಕನ ಹೆಸರು ಘೋಷಣೆ ಮಾಡಿಲ್ಲ. ಕೆಎಲ್ ರಾಹುಲ್ ನಾಯಕತ್ವ ರೇಸ್‌ನಿಂದ ಹಿಂದೆ ಸರಿಯುವ ಮೂಲಕ ಅಕ್ಷರ್ ಪಟೇಲ್‌ಗೆ ಜವಾಬ್ದಾರಿ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಜಿಎಂಆರ್ ಸಹ-ಮಾಲೀಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೆಎಲ್ ರಾಹುಲ್ ಅವರನ್ನು ಐಪಿಎಲ್ 2025 ರಲ್ಲಿ ನಾಯಕನಾಗುವಂತೆ ಕೇಳಿಕೊಂಡಿದೆ. ಆದರೆ, ತಂಡದಲ್ಲಿ ಆಟಗಾರನಾಗಿ ಗೆಲುವಿಗೆ ಕೊಡುಗೆ ನೀಡಲು ಮಾತ್ರ ಕೆಎಲ್ ರಾಹುಲ್ ಯೋಜಿಸಿದ್ದು, ನಾಯಕತ್ವದ ಜವಾಬ್ದಾರಿ ಬೇಡ ಎಂದಿದ್ದಾರೆ.

ಐಪಿಎಲ್ 2025 ಕ್ಕೆ ಅಕ್ಷರ್ ಪಟೇಲ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನನ್ನಾಗಿ ಹೆಸರಿಸುವ ಸಾಧ್ಯತೆಯಿದೆ. ಕೆಎಲ್ ರಾಹುಲ್ ಅವರನ್ನು ತಂಡದ ನಾಯಕರನ್ನಾಗಿ ಕೇಳಿತ್ತು, ಆದರೆ ಮುಂಬರುವ ಟೂರ್ನಮೆಂಟ್‌ನಲ್ಲಿ ಆಟಗಾರನಾಗಿ ತಂಡಕ್ಕೆ ಕೊಡುಗೆ ನೀಡಲು ಅವರು ತುಂಬಾ ಬಯಸುತ್ತಾರೆ ಎಂದು ಮೂಲವೊಂದು ತಿಳಿಸಿರುವುದಾಗಿ ಐಎಎನ್‌ಎಸ್ ವರದಿ ಮಾಡಿದೆ. ಇಂಗ್ಲೆಂಡ್‌ನ ಸ್ಪೋಟಕ ಬ್ಯಾಟರ್ ಹ್ಯಾರಿ ಬ್ರೂಕ್ ಐಪಿಎಲ್‌ನಿಂದ ಹಿಂದೆ ಸರಿದಿದ್ದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೊಂದು ಹಿನ್ನಡೆಯಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ತಂಡ

ಕೆಎಲ್ ರಾಹುಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕರುಣ್ ನಾಯರ್, ಫಾಫ್ ಡು ಪ್ಲೆಸಿಸ್, ಡೊನೊವನ್ ಫೆರೆರಾ, ಅಭಿಷೇಕ್ ಪೊರೆಲ್, ಟ್ರಿಸ್ಟಾನ್ ಸ್ಟಬ್ಸ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ದರ್ಶನ್ ನಲ್ಕಂಡೆ, ವಿಪ್ರಜ್ ನಿಗಮ್, ಅಜಯ್ ಮಂಡಲ್, ಮನ್ವಂತ್ ಕುಮಾರ್, ತ್ರಿಪುರಾನ ವಿಜಯ್, ಮಾಧವ್ ತಿವಾರಿ, ಅಕ್ಷರ್ ಪಟೇಲ್, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮೋಹಿತ್ ಶರ್ಮಾ, ಮುಖೇಶ್ ಕುಮಾರ್, ದುಷ್ಮಂತ ಚಮೀರ, ಕುಲದೀಪ್ ಯಾದವ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+