ಮೈದಾನದಲ್ಲೇ ಕೆಎಲ್ ರಾಹುಲ್ & ಪ್ರಸಿದ್ಧ್ ಕೃಷ್ಣ ಕನ್ನಡ ಸಂಭಾಷಣೆ: ಆಡಿಯೋ, ವಿಡಿಯೋ ಭಾರೀ ವೈರಲ್
KL Rahul Vs Prasidh Krishna: ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳ ವೇಳೆ ಆಟಗಾರರು ತಮ್ಮ ಭಾಷೆಯಲ್ಲೇ ನಡೆಸಿದ ಹಾಸ್ಯಮಯ ಸಂಭಾಷಣೆ ವೈರಲ್ ಆದ ಉದಾಹರಣೆಗಳಿವೆ. ಹಾಗೆಯೇ ಇದೀಗ ರಾಯಪುರ್‌ನಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಭಾರತ ನಡುವೆ ನಡೆದ ಎರಡನೇ ಏಕದಿನ ಪಂದ್ಯದ ವೇಳೆಯೇ ಮೈದಾನದಲ್ಲಿ ಕನ್ನಡಿಗರಾದ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ಅವರು ಕನ್ನಡದಲ್ಲಿ ಮಾತನಾಡಿದ್ದಾರೆ. ಈ ಆಡಿಯೋ ಹಾಗೂ ವಿಡಿಯೋ ಕನ್ನಡಿಗರ ಮನಸ್ಸನ್ನು ಗೆದ್ದಿದ್ದು, ಸಾಮಾಜಾಕ ಜಾಲತಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
ಛತ್ತೀಸ್‌ಗಢದ ರಾಯ್‌ಪುರದಲ್ಲಿರುವ ಶಾಹಿದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ (ಡಿಸೆಂಬರ್ 3) ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ಏಕದಿನ ಪಂದ್ಯ ನಡೆಯಿತು. ಈ ವೇಳೆ ಟೀಂ ಇಂಡಿಯಾ ಬೃಹತ್ ರನ್‌ಗಳನ್ನು ಕಲೆಹಾಕಿದ್ದರೂ ಸಹ ಬೌಲರ್‌ಗಳ ಕಳಪೆ ಪ್ರದರ್ಶನ ಕಾರಣ ಸೋಲುನುಭವಿಸಿತು.

ಆದರೆ, ಈ ನಡುವೆಯೇ ತಂಡದ ನಾಯಕರಾಗಿರುವ ಕನ್ನಡಿದ ಕೆ.ಎಲ್.ರಾಹುಲ್ ಅವರು ವೇಗಿ ಪ್ರಸಿದ್ಧ್ ಕೃಷ್ಣರಿಗೆ ಮೈದಾನದಲ್ಲಿ ಕನ್ನಡದಲ್ಲಿ ಯಾರಿಗೂ ಗೊತ್ತಿಲ್ಲದಂತೆ ಪಕ್ಕಾ ಲೋಕಲ್ ಎನ್ನುವಂತೆ ನೀಡಿರುವ ಸಲಹೆಯೊಂದನ್ನು ನೀಡಿದ್ದಾರೆ. ಆದರೆ, ಕ್ಯಾಮೆರಾ ಕಣ್ಣಿಗೆ ಸೆರೆಯಾಗಿರುವ ಈ ಆಡಿಯೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುವುದಲ್ಲದೆ, ಕನ್ನಡಿಗರ ಮನಸ್ಸನ್ನು ಗೆದ್ದಿದೆ. ಈ ಮೂಲಕ ರಾಯ್‌ಪುರ್ ಅಂಗಳದಲ್ಲಿ ಕನ್ನಡದ ಕಂಪು ಮೊಳಗಿದೆ.
ಶುಭ್‌ಮನ್ ಗಿಲ್ ಅನುಪಸ್ಥಿತಿ ಹಿನ್ನೆಲೆ ನಾಯಕತ್ವ ಜವಾಬ್ದಾರಿ ವಹಿಸಿಕೊಂಡಿರುವ ಕನ್ನಡಿಗ ಕೆ.ಎಲ್.ರಾಹುಲ್ ಅವರು ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈಗಾಗಲೇ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದಿದ್ದರು. ಆದರೆ, ಎರಡನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆಹಾಕಿದರೂ ಸಹ ಸೋಲನುಭವಿಸಿದರೂ ಈ ವೇಳೆ ಕೆಎಲ್ ರಾಹುಲ್ ಹಾಗೂ ಪ್ರಸಿದ್ಧ್ ಕೃಷ್ಣ ನಡುವೆ ನಡೆದ ಸಂಭಾಷಣೆ ಮಾತ್ರ ಕನ್ನಡಿಗರ ಹೃದಯ ನಾಟಿಬಿಟ್ಟಿದೆ.
ರಾಯಪುರ ಮೈದಾನದಲ್ಲಿ ನಡೆದ ಈ ಕನ್ನಡದ ಸಂಭಾಷಣೆ ಕೇಳಿ ಕನ್ನಡಿಗರು ಸಖತ್ ಖುಷಿ ಪಟ್ಟಿದ್ದಾರೆ. ಇದಕ್ಕೆ ಕಾಂಟ್ ಕೂಡ ಮಾಡಿದ್ದು, "ಅಲ್ಲಿ ಇರುವುದು ಯಾರು ಗೊತ್ತಲ್ಲ, ಇಬ್ಬರು ನಮ್ಮ ಕನ್ನಡದ ಹುಲಿಗಳು. ಉತ್ತಮ ಪ್ರದರ್ಶನದ ಜೊತೆಗೆ ಕನ್ನಡವನ್ನು ಅದ್ಭುತವಾಗಿ ಮಾತನಾಡಿದ್ದಾರೆ. ಆದರೆ, ರಾಜ್ಯದಲ್ಲಿ ಕೆಲವರು ಕನ್ನಡ ಬಂದರೂ ಸಹ ಬೇರೆ ಭಾಷೆಯಲ್ಲೇ ಮಾತನಾಡುತ್ತಾರೆ. ಅಂತಹವರು ಇವರನ್ನು ನೋಡಿ ಕಲಿಯಬೇಕು," ಎಂದು ಹೇಳಿದ್ದಾರೆ.
ಕೆಎಲ್ ರಾಹುಲ್, ಪ್ರಸಿದ್ಧ್ ಕೃಷ್ಣ ಸಂಭಾಷಣೆ: ರಾಯ್‌ಪುರ ಮೈದಾನದಲ್ಲಿ ಕೆಎಲ್ ರಾಹುಲ್ ಅವರು ಪ್ರಸಿದ್ಧ್ ಕೃಷ್ಭ ಅವರಿಗೆ "ಪ್ರಸಿದ್ಧ್ ನಿನ್ ತಲೆ ಓಡಿಸ್ಬೇಡ, ಹೇಳಿದ್ದು ಹಾಕು. ಆಗಲೇ ಹೇಳಿದ್ದೀನಿ ಏನು ಹಾಕಬೇಕಂತ, ಅದನ್ನೇ ಹಾಕು," ಎಂದು ಹೇಳಿದ್ದಾರೆ. ಬಳಿಕ ಪ್ರಸಿದ್ಧ್ ಕೃಷ್ಣ 'ತಲೆಗೆ ಹಾಕ್ಲಾ' ಎಂದು ಪ್ರಶ್ನಿಸುತ್ತಾರೆ. ನಂತರ ಮತ್ತೆ ರಾಹುಲ್ "ತಲೆಗೆಲ್ಲಾ ಬೇಡ ಮಾರಾಯ, ನಾನು ಏನು ಹೇಳಿದ್ದೀನಿ ಅದನ್ನೇ ಹಾಕು," ಎಂದು ಹೇಳಿ ಗಮನ ಸೆಳೆದಿದ್ದಾರೆ.
ಇದಾದ ಬಳಿಕವೂ ಮತ್ತೆ ಪ್ರಸಿದ್ಧ್ ಕೃಷ್ಣ ಅವರು ತಲೆ ಮೇಲೆ ಬಾಲ್ ಹಾಕಿದ್ದಾರೆ. ಆಹ ಕೋಪಗೊಂಡ ಕೆಎಲ್ ರಾಹುಲ್, "ಈಗ ತಾನೆ ಹೇಳಿ ಬಂದಿದ್ದೀನಿ ತಲೆಗೆ ಹಾಕಬೇಡ ಅಂತಾ, ಮತ್ತೆ ಅದೇ ಮಾಡ್ತೀಯಾ," ಎಂದು ಹೇಳಿದ್ದಾರೆ. ಇದೀಗ ಇದೇ ಆಡಿಯೋ ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ಕನ್ನಡಿಗರಿಂದ ಈ ಸಂಭಾಷಣೆಗೆ ಮೆಚ್ಚುಗೆಗಳ ಸರಮಾಲೆಯೇ ಹರಿದುಬರುತ್ತಿದೆ. ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 358 ಬೃಹತ್ ರನ್‌ಗಳನ್ನು ಕಲೆಹಾಕಿತು. ಈ ಮೊತ್ತವನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್‌ಗಳನ್ನು ಬಾರಿಸುವ ಮೂಲಕ ಜಯಭೇರಿ ಬಾರಿಸಿತು.












Click it and Unblock the Notifications