Get Updates
Get notified of breaking news, exclusive insights, and must-see stories!

KL Rahul: ಕನ್ನಡಿಗ ಕೆಎಲ್ ರಾಹುಲ್‌, ಅಥಿಯಾ ಶೆಟ್ಟಿ ಮುಂಬೈನಲ್ಲಿ 20 ಕೋಟಿ ಮೌಲ್ಯದ ಮನೆ ಖರೀದಿ

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ ಕೆ.ಎಲ್ ರಾಹುಲ್‌ ಸದ್ಯ ಭಾರೀ ಚರ್ಚೆಯಲ್ಲಿದ್ದಾರೆ. ಈ ಬಾರಿ ಅವರು ಚರ್ಚೆಯಲ್ಲಿರುವುದು ಅವರ ಭರ್ಜರಿ ಆಟದಿಂದ ಅಲ್ಲವೇ ಅಲ್ಲ. ಬದಲಿಗೆ ಅವರ ಲೈಫ್‌ಸ್ಟೈಲ್‌ನಿಂದ. ರಾಹುಲ್‌ ಹಾಗೂ ಅಥಿಯಾ ದಂಪತಿ ಮುಂಬೈನಲ್ಲಿ ಒಂದು ಮನೆ ಖರೀದಿಸಿದ್ದಾರೆ.

ದಂಪತಿ ತಮ್ಮ ಮನೆಯನ್ನು ಹೊಸ ಮನೆ ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಪಾಲಿ ಹಿಲ್‌ನಲ್ಲಿದೆ ಖರೀದಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರ ಬೆಲೆ ಸುಮಾರು 20 ಕೋಟಿ ಎಂದು ಹೇಳಲಾಗುತ್ತದೆ. ಆದಾಗ್ಯೂ, ಕೆಎಲ್ ಮತ್ತು ಅಥಿಯಾ ತಮ್ಮ ಹೊಸ ಫ್ಲಾಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

KL Rahul and Athiya Shetty s New 20 Crore Mumbai Apartment

3350 ಚದರ ಅಡಿ ಮನೆ

ಮಾಧ್ಯಮ ವರದಿಗಳ ಪ್ರಕಾರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಈ ಹೊಸ ಫ್ಲಾಟ್ 3350 ಚದರ ಅಡಿಗಳಷ್ಟಾಗಿದೆ. ಇಬ್ಬರೂ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಪ್ರಮಾಣಪತ್ರವನ್ನು ಸಹ ಪಡೆದಿದ್ದಾರೆ. ವರದಿಗಳ ಪ್ರಕಾರ, ಈ ಫ್ಲಾಟ್ ನೋಂದಣಿಗಾಗಿ ಇಬ್ಬರೂ 30 ಸಾವಿರ ರೂ. ನೀಡಿದ್ದಾರೆ. ಇದು ಕಾರ್ ಪಾರ್ಕಿಂಗ್ ಅನ್ನು ಸಹ ಒಳಗೊಂಡಿದೆ. ಈ ವಹಿವಾಟು ಜುಲೈ 15 ರಂದು ನಡೆದಿದೆ.

ಮುಂಬೈನ ಹೃದಯ ಭಾಗದಲ್ಲಿರುವ ಸಂಧು ಪ್ಯಾಲೇಸ್‌ ಅಪಾರ್ಟಮೆಂಟ್‌ನ ಎರಡನೇ ಮಹಡಿಯಲ್ಲಿ ದಂಪತಿ ಮನೆ ಖರೀದಿ ಮಾಡಿದ್ದಾರೆ. ಅಲ್ಲದೆ 1.2 ಕೋಟಿ ರೂಪಾಯಿಯ ಸ್ಟಾಂಪ್‌ ಡ್ಯೂಟಿ ಕೆಲಸವನ್ನು ಸಹ ಮಾಡಿಸಿಕೊಂಡಿದ್ದಾರೆ.

KL Rahul and Athiya Shetty s New 20 Crore Mumbai Apartment

ಎಲ್ಲಿದೆ ರಾಹುಲ್‌ ಮನೆ?

ಪಾಲಿ ಹಿಲ್ ಮುಂಬೈನ ಬೇಡಿಕೆಯ ಸ್ಥಳಗಳಲ್ಲಿ ಒಂದಾಗಿದೆ. ಇದೇ ಪ್ರದೇಶದಲ್ಲಿ ದಿಲೀಪ್ ಕುಮಾರ್ ಮತ್ತು ಅಮೀರ್ ಖಾನ್ ಕೂಡ ಅವರ ಮನೆಗಳನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ ಈ ಪ್ರದೇಶ, ಬಾಂದ್ರಾ ಹತ್ತಿರದಲ್ಲಿದೆ, ಅಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಸೈಫ್ ಅಲಿ ಖಾನ್, ಜಾನ್ವಿ ಕಪೂರ್ ಮುಂತಾದ ಸ್ಟಾರ್ ನಟಿಯರು ನೆಲೆಸಿದ್ದಾರೆ. ಇತ್ತೀಚೆಗೆ ಕೆಎಲ್ ಮತ್ತು ಅಥಿಯಾ ಆನಂದ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ಭಾಗವಹಿಸಲು ಬಂದಿದ್ದರು.

ಕೆಎಲ್‌ ರಾಹುಲ್‌ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಈ ಬಾರಿ ಶ್ರೀಲಂಕಾ ವಿರುದ್ಧದ ಸರಣಿಗೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ವರದಿಗಳನ್ನು ನಂಬುವದಾದರೆ, ಕನ್ನಡಿಗ ಕೆ.ಎಲ್ ರಾಹುಲ್ ಅವರಿಗೆ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯ ವೇಳೆ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ನೀಡುವ ಸಾಧ್ಯತೆ ಇದೆ. ಬಹುದಿನಗಳ ಬಳಿಕ ಟೀಮ್ ಇಂಡಿಯಾಕ್ಕೆ ಕಮ್‌ಬ್ಯಾಕ್‌ ಮಾಡುವ ರಾಹುಲ್‌ ಅವರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+