KKR Vs PBKS: ವಿಶ್ವ ಟಿ20 ಕ್ರಿಕೆಟ್‌ನಲ್ಲೇ ದಾಖಲೆಯ ರನ್‌ಚೇಸ್: ಬರೆದ ದಾಖಲೆಗಳು ಎಷ್ಟು ಗೊತ್ತಾ?
ಶುಕ್ರವಾರ ಈಡನ್ ಗಾರ್ಡನ್ಸ್ ಅಂಗಳದಲ್ಲಿ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಗಳು ನಿರ್ಮಾಣವಾದವು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 262 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನತ್ತುವ ಮೂಲಕ ಹಲವು ದಾಖಲೆ ಮೂಡಿಬಂದವು.
ಐಪಿಎಲ್ ಮಾತ್ರವಲ್ಲ ಇದು ವಿಶ್ವ ಟಿ20 ಕ್ರಿಕೆಟ್‌ನಲ್ಲೇ ಅತಿ ಹೆಚ್ಚು ರನ್‌ಚೇಸ್ ಆಗಿದೆ. 2023ರಲ್ಲಿ ದಕ್ಷಿಣ ಆಫ್ರಿಕಾ ವೆಸ್ಟ್ ಇಂಡೀಸ್ ವಿರುದ್ಧ 259 ರನ್‌ಗಳನ್ನು ಚೇಸ್ ಮಾಡಿದ್ದು ವಿಶ್ವದಾಖಲೆಯಾಗಿತ್ತು, ಆ ದಾಖಲೆಯನ್ನು ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಮುರಿಯಲಾಗಿದೆ.

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಫಿಲ್ ಸಾಲ್ಟ್ 75 ರನ್ ಗಳಿಸಿದರೆ, ಸುನಿಲ್ ನರೇನ್ 71 ರನ್ ಗಳಿಸಿದರು. ಶ್ರೇಯಸ್ ಅಯ್ಯರ್ 10 ಎಸೆತಗಳಲ್ಲಿ 28 ರನ್ ಗಳಿಸಿದರು.
ಪಂಜಾಬ್ ಸ್ಫೋಟಕ ಬ್ಯಾಟಿಂಗ್
262 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೂಡ ಸ್ಫೋಟಕ ಆರಂಭ ಪಡೆಯಿತು. ಪ್ರಭ್‌ಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಪಂಜಾಬ್‌ಗೆ ಸ್ಫೋಟಕ ಆರಂಭ ನೀಡಿದರು. ಜಾನಿ ಬೈರ್ ಸ್ಟೋ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸುವ ಮೂಲಕ ಕೊನೆಯವರೆಗೂ ನಿಂತು ಪಂದ್ಯವನ್ನು ಗೆಲ್ಲಿಸಿದರು. ರಿಲೀ ರೊಸೋವ್ 16 ಎಸೆತಗಳಲ್ಲಿ 26 ರನ್ ಗಳಿಸಿದರೆ, ಶಶಾಂಕ್ ಸಿಂಗ್ 28 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿ ಅಬ್ಬರಿಸಿದರು. ಅಂತಿಮವಾಗಿ 18.4 ಓವರ್ ಗಳಲ್ಲಿ 262 ರನ್ ಗಳಿಸುವ ಮೂಲಕ ಇನ್ನೂ 8 ಎಸೆತಗ ಬಾಕಿ ಇರುವಂತೆ ಪಂದ್ಯವನ್ನು ಗೆದ್ದುಕೊಂಡಿತು.
ಏನೆಲ್ಲಾ ದಾಖಲೆ ನಿರ್ಮಾಣ?
ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ದಾಖಲಾಗಿದ್ದು ಈ ಪಂದ್ಯದಲ್ಲಿ. ಒಟ್ಟು 42 ಸಿಕ್ಸರ್ ಗಳು ಈ ಪಂದ್ಯದಲ್ಲಿ ಬಂದವು, ಇದೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದಾರಾಬಾದ್ Vs ಮುಂಬೈ ಇಂಡಿಯನ್ಸ್, ಆರ್ ಸಿಬಿ vs ಎಸ್ಆರ್ ಎಚ್ ನಡುವಿನ ಪಂದ್ಯದಲ್ಲಿ ತಲಾ 38 ಸಿಕ್ಸರ್ ಬಂದಿದ್ದು ಈವರೆಗಿನ ದಾಖಲೆಯಾಗಿತ್ತು.
ಚೇಸಿಂಗ್ ಮಾಡುವಾಗ ತಂಡವೊಂದು ಗಳಿಸಿದ ಅತ್ಯಧಿಕ ಸ್ಕೋರ್ ಇದಾಗಿದೆ. ಈ ಮೊದಲು ಆರ್ ಸಿಬಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 262 ರನ್ ಗಳಿಸಿದ್ದು ದಾಖಲೆಯಾಗಿತ್ತು, ಅಂದು ಆರ್ ಸಿಬಿ ಸೋಲು ಕಂಡಿತ್ತು.












Click it and Unblock the Notifications