ಅನುಮತಿ ಪಡೆಯದೇ ವಿಜಯೋತ್ಸವ ಆಯೋಜನೆ: BCCI, RCB ವಿರುದ್ಧ ಸರ್ಕಾರದ ಆರೋಪ

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್‌ ಟ್ರೋಫಿ ಗೆದ್ದ ಬಳಿಕ, ಜೂನ್‌ 4 ರಂದು ನಡೆದ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ಸಂಭವಿಸಿದ್ದು 11 ಜನರು ಸಾವನ್ನಪ್ಪಿದ್ದಾರೆ. ಈಗ ಈ ವಿಚಾರಣೆ ಕರ್ನಾಟಕ ೈ ಕೋರ್ಟ್‌ನಲ್ಲಿ ನಡೆಯುತ್ತಿದೆ. ಕೋರ್ಟ್‌ನಲ್ಲಿ ಈ ಪ್ರಕರಣದ ವಿಚಾರಣೆ ಭರದಿಂದ ಸಾಗಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಕರ್ನಾಟಕ ಸರ್ಕಾರ ಭಾರತೀ ಕ್ರಿಕೆಟ್‌ ಮಂಡಳಿ (ಬಿಸಿಸಿಐ) ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ಮೇಲೆ ಆರೋಪವನ್ನು ಹೊರೆಸಿದೆ.

ಇಂಡಿಯಾ ಟುಡೆ ವರದಿಯ ಪ್ರಕಾರ ಈ ಕಾರ್ಯಕ್ರಮಕ್ಕೆ ಯಾವುದೇ ಅನುಮತಿ ಕೋರಿರಲಿಲ್ಲ. ಮತ್ತು ಆಯೋಜಕರು ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಆಹ್ವಾನಿಸಿದ್ದಾರೆ ಎಂದು ಸರ್ಕಾರ ಹೈಕೋರ್ಟ್‌ನಲ್ಲಿ ತಿಳಿಸಿದೆ.

Karnataka HC Hears IPL Stampede Case Government Blames BCCI RCB for Unsanctioned Celebrations

ಸರ್ಕಾರದ ಪರ ವಾದ ಮಾಡಿದ ಅಡ್ವಕೇಟ್‌ ಜನರಲ್‌ ಶಶಿ ಕಿರಣ್‌ ಶೆಟ್ಟಿ, ಮೇ 29 ರಂದು ಆರ್‌ಸಿಬಿ ತಂಡ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್ ತಂಡವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆದಿತ್ತು. ಆದರೆ ಚಾಂಪಿಯನ್‌ ಆದ ಬಳಿಕ ತಂಡ ವಿಜಯೋತ್ಸವ ಅಥಾವ ವಿಕ್ಟರಿ ಪೆರೆಡ್‌ಗೆ ಯಾವುದೇ ಅಧಿಕೃತ ಅನುಮತಿಯನ್ನು ಪಡೆದಿರಲಿಲ್ಲ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಇನ್ನು ಜೂನ್‌ 3 ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧದ ಫೈನಲ್‌ ಪಂದ್ಯಕ್ಕೂ ಒಂದು ಗಂಟೆ ಮುನ್ನ, ತಮ್ಮ ತಂಡ ವಿಜಯಿಶಾಲಿ ಆದರೆ, ವಿಕ್ಟರಿ ಪೆರೆಡ್‌ ಆಯೋಜಿಸುವುದಾಗಿ ಸೂಚಿಸಿದ್ದರು. ಆದರೆ ಈ ವೇಳೆಯೂ ಅವರು ಅನುಮತಿ ಕೋರಲಿಲ್ಲ. ತಂಡ, ತಮ್ಮ ಯೋಜನೆಗಳನ್ನು ನಮಗೆ ತಿಳಿಸಿತು.

ಸರಣಿ ಪೋಸ್ಟ್‌

ಆಯೋಜಕರಿಂದ ಬಂದ ಏಕೈಕ ಸಂದೇಶವೆಂದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಯಿಂದ ಬಂದ ಮಾಹಿತಿ ಆಗಿದೆ. ಇನ್ನು ಆರ್‌ಸಿಬಿ ಫೈನಲ್‌ ಪಂದ್ಯ ಗೆದ್ದ ಬಳಿಕ ಸಾಮಾಜಿಕ ತಾಣದಲ್ಲಿ ಸರಣಿ ಪೋಸ್ಟ್‌ಗಳನ್ನು ಹಾಕಿದೆ. ಅಲ್ಲದೆ ಜೂನ್‌ 4ರ ಬೆಳಗ್ಗೆ ಸಹ ಪೋಸ್ಟ್‌ಗಳನ್ನು ಮಾಡಿದ್ದು, ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿತ್ತು ಎಂದು ಅಡ್ವಕೇಟ್‌ ಜನರಲ್‌ ಕೋರ್ಟ್‌ಗೆ ತಿಳಿಸಿದರು.

ಆರ್‌ಸಿಬಿ ಅಭಿಮಾನಿಗಳನ್ನು ಚಿನ್ನಸ್ವಾಮಿ ಮೈದಾನಕ್ಕೆ ಆಹ್ವಾನಿಸಿತ್ತು. ಇದರಿಂದ ಮೈದಾನದತ್ತ ಸುಮಾರು 3.5 ರಿಂದ 4 ಲಕ್ಷ ಜನ ಬಂದರು. ಆದರೆ ಯಾರು ಮೈದಾನಕ್ಕೆ ಪ್ರವೇಶಿಸಬಹುದು ಎಂಬುದನ್ನು ಎಲ್ಲಿಯೂ ಅವರು ತಿಳಿಸಿರಲಿಲ್ಲ. ಆರ್‌ಸಿಬಿ ಪೋಸ್ಟ್‌ ಅಭಿಮಾನಿಗಳನ್ನು ಹುರಿದುಂಬಿಸಿತು. ಅಲ್ಲದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 33 ಸಾವಿರ ಜನರಿಗೆ ಕುಳಿತುಕೊಳ್ಳುವ ಅವಕಾಶವಿತ್ತು ಎಂದು ಕೋರ್ಟ್‌ಗೆ ತಿಳಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ನಲ್ಲಿ ಈಗಾಗಲೇ ನಾಲ್ಕು ಪ್ರಕರಣಗಳು ನಡೆಯುತ್ತಿವೆ. ಇದರಲ್ಲಿ ಆರ್‌ಸಿಬಿ ಮಾರ್ಕೆಟಿಂಗ್ ಹೆಡ್‌ ನಿಖಿಲ್ ಸೋಸ್ಲೆ ಅವರ ಅರ್ಜಿ ಸಹ ಸೇರಿದೆ. ನಿಖಿಲ್‌ ಸೋಸ್ಲೆ ಅವರನ್ನು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+