RCB: ಹಿಂದಿ ವಿಚಾರದಲ್ಲಿ ಕನ್ನಡಿಗರ ಕೋಪಕ್ಕೆ ತುತ್ತಾದ ಆರ್‌ಸಿಬಿ
ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಅಪಾರ ಅಭಿಮಾನಿಗಳನ್ನು ಹೊಂದಿರುವ ಐಪಿಎಲ್ ಫ್ರಾಂಚೈಸಿ. 17 ವರ್ಷಗಳಲ್ಲಿ ಒಮ್ಮೆಯೂ ಕಪ್ ಗೆಲ್ಲದೇ ಇದ್ದರೂ ಅಭಿಮಾನಿಗಳ ಪ್ರೀತಿಯೇನೂ ಒಂಚೂರು ಕಡಿಮೆಯಾಗಿಲ್ಲ. ಆದರೆ ಆರ್ ಸಿಬಿಗೆ ಮಾತ್ರ ಅಭಿಮಾನಿಗಳ ಭಾವನೆಗಳು ಲೆಕ್ಕಕ್ಕಿಲ್ಲ ಎನ್ನುವಂತೆಯೇ ವರ್ತಿಸುತ್ತದೆ. ಬೆಂಗಳೂರು ಹೆಸರು ಬದಲಾಯಿಸಲು ಹಲವು ವರ್ಷಗಳು ಒತ್ತಾಯಿಸಿದ ಬಳಿಕ ಕಳೆದ ವರ್ಷ ಬ್ಯಾಂಗಲೋರ್ ಇದ್ದಿದ್ದನ್ನು ಬೆಂಗಳೂರು ಎಂದು ಬದಲಾಯಿಸಿ ಹೊಸ ಅಧ್ಯಾಯ ಎಂದು ಹೇಳಿತ್ತು.
ಕಳೆದ ವರ್ಷ ಪ್ಲೇಆಫ್ ತಲುಪಿ ಸೋಲುಕಂಡಿದ್ದ ಆರ್ ಸಿಬಿ ಈ ಬಾರಿ ಮೆಗಾ ಹರಾಜಿನಲ್ಲಿ ಹೆಚ್ಚಿನ ಸಂಖ್ಯೆಯ ಕನ್ನಡಿಗರನ್ನು ಸೇರಿಸಿಕೊಳ್ಳುತ್ತದೆ ಎಂದು ನಂಬಲಾಗಿತ್ತು. ಆದರೆ ಕೆಎಲ್ ರಾಹುಲ್, ವೈಶಾಖ್, ಕರುಣ್ ನಾಯರ್, ವಿದ್ವತ್ ಕಾವೇರಪ್ಪ ಸೇರಿದಂತೆ ಅನೇಕ ಕನ್ನಡಿಗರನ್ನು ಖರೀದಿ ಮಾಡದೇ ಕಡೆಗಣಿಸಿದ್ದು ಅಭಿಮಾನಿಗಳಿ ಸಿಟ್ಟಿಗೆ ಕಾರಣವಾಗಿತ್ತು, ಇದೀಗ ಮತ್ತೊಮ್ಮೆ ಆರ್ ಸಿಬಿ ಫ್ರಾಂಚೈಸಿ ಮಾಡಿದ ಎಡವಟ್ಟಿಗೆ ಕನ್ನಡಿಗರು ಕೆರಳಿದ್ದಾರೆ.

ಹಿಂದಿಯಲ್ಲಿ ಸೋಷಿಯಲ್ ಮೀಡಿಯಾ ಪೇಜ್!
ಆರ್‌ಸಿಬಿ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕನ್ನಡ ಬಳಸದ ಕಾರಣ ಭಾರಿ ಟೀಕೆಗೆ ಕಾರಣವಾಗಿತ್ತು. ಬಳಿಕ ಅಲ್ಪ ಸ್ವಲ್ಪ ಕನ್ನಡ ಬಳಸಲು ಆರಂಭಿಸಿತ್ತು, ಈ ವರ್ಷ ಐಪಿಎಲ್ ಆರಂಭಕ್ಕೆ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಕನ್ನಡಕ್ಕಾಗಿಯೇ ಪ್ರತ್ಯೇಕ ಖಾತೆ ತೆರೆದು ಕನ್ನಡದಲ್ಲಿಯೇ ಪೋಸ್ಟ್ ಮಾಡುತ್ತಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಕನ್ನಡಕ್ಕೆ ಆರ್ ಸಿಬಿ ಪ್ರಾಮುಖ್ಯತೆ ಕೊಡುತ್ತಿದೆ ಎನ್ನುವಾಗಲೇ ಕನ್ನಡದ ಜೊತೆಯಲ್ಲೇ ಹಿಂದಿಯಲ್ಲಿ ಕೂಡ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆದಿರುವುದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇನ್‌ಸ್ಟಾಗ್ರಾಂ, ಎಕ್ಸ್‌ನಲ್ಲಿ ಹಿಂದಿ ಪೇಜ್ ನೋಡಿದ ಕನ್ನಡಿಗರು ಬೆಂಗಳೂರು ಮೂಲದ ಫ್ರಾಂಚೈಸಿಗೆ ಹಿಂದಿ ಅಗತ್ಯವೇನು ಎಂದು ಪ್ರಶ್ನೆ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಏನು ಕನ್ನಡದಲ್ಲಿ ಮಾಹಿತಿ ಕೊಡುತ್ತಿದೆಯಾ ಎಂದು ಕೇಳಿರುವ ಕನ್ನಡಿಗರು ಕೂಡಲೇ ಹಿಂದಿ ಅಕೌಂಟ್ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ ಪೇಜ್ ರಿಪೋರ್ಟ್ ಮಾಡುವಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
As a proud Kannadiga and Bengaluru-based RCB fan, it’s disheartening to see our franchise using Hindi in their social media posts. Bengaluru represents Kannada culture and language, and RCB should respect this by prioritizing Kan-Eng in their communication.#stopHindiImposition https://t.co/GOLzJj9Act
— Naveen | ನವೀನ್ (@naveen_gowda3) November 26, 2024
ಸಮರ್ಥನೆ ಮಾಡಿಕೊಂಡ ಆರ್‌ಸಿಬಿ
ಕನ್ನಡ ಮತ್ತು ಹಿಂದಿಯಲ್ಲಿ ಖಾತೆ ತೆರಯುವ ಕ್ರಮವನ್ನು ಆರ್‌ಸಿಬಿ ಸಮರ್ಥನೆ ಮಾಡಿಕೊಂಡಿದೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಬಹುಭಾಷೆಗಳಲ್ಲಿ ಪುಟಗಳನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದೆ. ಆದರೆ ಕನ್ನಡಿಗರು ಮಾತ್ರ ಸಿಟ್ಟಾಗಿದ್ದು ಹಿಂದಿ ಖಾತೆಯನ್ನು ರಿಪೋರ್ಟ್ ಮಾಡುವಂತೆ ಕೇಳಿದ್ದಾರೆ.
Uf Shit!#RCB got a Hindi page!! Why?
— ಉಮೇಶ್ ಶಿವರಾಜು |Umesh Shivaraju (@umesh_anush) November 25, 2024
What is the connection between Hindi & K'taka?
A Karnataka based team is triggering sentiments of Kannada diaspora!! Not good.
If this continues, Kannadigas will deliver bad time for RCB soon. @RCBTweets #StopHindiimposition pic.twitter.com/UbhthE8O3K
ಆರ್ ಸಿಬಿ ಕನ್ನಡದಲ್ಲಿ ಏನಾದರೂ ಪೋಸ್ಟ್ ಮಾಡಿದಾಗ ಕೆಲವು ಹಿಂದಿಯವರು ಆರ್ ಸಿಬಿ ವಿರುದ್ಧ ಕಿಡಿಕಾರುತ್ತಿದ್ದರು. ಕನ್ನಡ ಬೇಡ ಎನ್ನುವ ಧಿಮಾಕು ತೋರಿಸುತ್ತಿದ್ದರು, ಇದರಿಂದ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ನಡುವೆ ಜಗಳ ಕೂಡ ಆಗುತ್ತಿತ್ತು. ಇದೀಗ ಕನ್ನಡ ಮತ್ತು ಹಿಂದಿಯಲ್ಲಿ ಪ್ರತ್ಯಕೇ ಅಕೌಂಟ್ ತೆರೆದಿದ್ದು ಇದು ಕೂಡ ಮತ್ತೊಂದು ರೀತಿಯಲ್ಲಿ ಹಿನ್ನಡೆಯಾಗಿದೆ.
-
ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ಬೌಲರ್ಗಳಿಗೆ ಬೆವರಿಳಿಸಿದ ಆರ್‌ಸಿಬಿ ಫಿಲ್ ಸಾಲ್ಟ್ -
ವಾಂಖೆಡೆಯಲ್ಲಿ ಆರ್‌ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
ಆಶಾ ಭೋಸ್ಲೆಗೆ ಮುಂಬೈ ಇಂಡಿಯನ್ಸ್-ಆರ್‌ಸಿಬಿ ಪಂದ್ಯದಲ್ಲಿ ಗೌರವ ನಮನ, ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿದ ಆಟಗಾರರು -
ಆರ್‌ಸಿಬಿ ಜಯದ ಕನಸಿಗೆ ತಣ್ಣೀರೆರಚಿದ ವೈಭವ್ ಸೂರ್ಯವಂಶಿ; ಆರ್ಆರ್ ಪಾಲಿಗೆ ಹೀರೋ ಆದ 15 ವರ್ಷದ ಬಾಲಕ -
ಒಂದೇ ಪಂದ್ಯದಲ್ಲಿ ವೈಭವ್ ಸೂರ್ಯವಂಶಿಗೆ ಒಲಿದ ಮೂರು ಮರೆಯಲಾಗದ ಗೌರವಗಳು; ಕಿಂಗ್ ಕೊಹ್ಲಿ ಸಂದೇಶ ಭಾರೀ ವೈರಲ್ -
Vaibhav Suryavanshi: ನನ್ನ ಕನಸು ಕೊನೆಗೂ ನನಸಾಯಿತು; ವಿರಾಟ್ ಕೊಹ್ಲಿಗೆ ವಿಶೇಷ ಧನ್ಯವಾದ ಹೇಳಿದ ವೈಭವ್ ಸೂರ್ಯವಂಶಿ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Karnataka Rains: ಸಮುದ್ರ ಮಲ್ಮೈ ಸುಳಿಗಾಳಿ, ಏಪ್ರಿಲ್ 14-17ರವರೆಗೆ ಬೆಂಗಳೂರು, ಇತರ ಜಿಲ್ಲೆಗಳಲ್ಲಿ ಮಳೆ -
Aditya: ನಿನ್ನೆ ಮೊನ್ನೆ ಬಂದೋರೆಲ್ಲ ದರ್ಶನ್ಗೆ ಕ್ಲೋಸ್ ಅಂತಿದ್ದಾರೆ, ಅವನು ಎಂದಿಗೂ ನನ್ನ ದೋಸ್ತ್: ನಟ ಆದಿತ್ಯ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ












Click it and Unblock the Notifications