ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್, ಕನ್ನಡಿಗ ಕೆಎಲ್ ರಾಹುಲ್ ಕೆಕೆಆರ್‌ಗೆ ಸೇರ್ಪಡೆ.. ಬಿಗ್ ಆಫರ್ ಏನು ಗೊತ್ತಾ?
ಜೂನ್ 4, 2025ರಂದು ಐಪಿಎಲ್ 18ನೇ ಆವೃತ್ತಿ ಮುಕ್ತಾಯ ಆಗಿದ್ದು, ಆರ್‌ಸಿಬಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇನ್ನೂ ಇದೀಗ ಎಲ್ಲರ ಕಣ್ಣು 2026ರ ಸೀಸನ್‌ನತ್ತ ನೆಟ್ಟಿದೆ. ಜೊತೆಗೆ ಸ್ಟಾರ್ ಆಟಗಾರರು ಟೀಂ ಬದಲಿಸುವ ಬಗ್ಗೆ ಸುದ್ದಿಗಳು ಸಖತ್ ಸೌಂಡ್ ಮಾಡುತ್ತಿವೆ. ಅದರಲ್ಲೂ ಕನ್ನಡಿಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ಸ್ ತೊರೆದು ಕೆಕೆಆರ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ. ಹಾಗಾದ್ರೆ, ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಳೇ ಕಳೆದ ಆವೃತ್ತಿ 2025ರ ಐಪಿಎಲ್ ವೇಳೆ ಅಕ್ಸರ್ ಪಟೇಲ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ ಕೆಎಲ್ ರಾಹುಲ್ ಬಹುತೇಕ ಪಂದ್ಯಗಳಲ್ಲಿ ಉತ್ತಮ ರನ್‌ಗಳನ್ನು ಕಲೆಹಾಕಿದ್ದರು. ಅಬ್ಬರದ ಬ್ಯಾಟಿಂಗ್ ಮೂಲಕ ಎದುರಾಳಿ ತಂಡದ ಬೌಲರ್‌ಗಳಿಗೆ ಅಕ್ಷರಸಃ ನಡುಕ ಹುಟ್ಟಿಸಿದ್ದರು. ಆದರೆ, ಇದೀಗ ಅವರು ಕೆಕೆಆರ್ ತಂಡಕ್ಕೆ ಬಂದರೆ, ನಾಯಕತ್ವದ ಸ್ಥಾನ ನೀಡಲಾಗುತ್ತದೆ ಎನ್ನುವ ಬಿಗ್ ಆಫರ್ ಬಂದಿದೆ ಎನ್ನುವ ಸುದ್ದಿ ಭಾರೀ ಗದ್ದಲ ಮಾಡುತ್ತಿದೆ.

ಐಪಿಎಲ್ 19ನೇ ಸೀಸನ್ ಆರಂಭಕ್ಕೆ ಇನ್ನೂ ತುಂಬಾ ತಿಳಗಳುಗಳು ಬಾಕಿಯಿದೆ. ಇದಕ್ಕೂ ಮುನ್ನವೇ ಬಲಿಷ್ಠ ತಂಡ ಕಟ್ಟುವ ತಯಾರಿಯಲ್ಲಿ ಎಲ್ಲಾ ತಂಡಗಳು ಕಾರ್ಯನಿರತವಾಗಿವೆ. ಇದಕ್ಕಾಗಿಯೇ ವಿಂಡೋ ಟ್ರೇಡಿಂಗ್ ಮೂಲಕ ಸ್ಟಾರ್ ಆಟಗಾರರ ಮೇಲೆ ಕಣ್ಣಿಡಲಾಗುತ್ತಿದೆ. ಈ ನಡುವೆಯೇ ಕನ್ನಡಿಗ ಕೆಎಲ್ ರಾಹುಲ್ ಸೇರಿದಂತೆ ಪ್ರಮುಖ ಆಟಗಾರರು ತಮ್ಮ ತಂಡಗಳನ್ನು ತೊರೆಯುವ ನಿರ್ಧಾರ ಮಾಡಿದ್ದು, ಅವರು ಬೇರೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಗದ್ದಲಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ.
ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡ ತೊರೆಯಲಿದ್ದಾರೆ ಎನ್ನುವ ಗದ್ದಲ ಐಪಿಎಲ್ 2025 ಸೀಸನ್ ಮಧ್ಯದಿಂದಲೂ ಕೇಳಿಬರುತ್ತಲಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೂ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಕೂಡ ಮುಂದಿನ ಸೀಸನ್‌ನಿಂದ ತಮ್ಮ ನಾಯಕತ್ವದಲ್ಲಿ ಕೆಕೆಆರ್ ತಂಡವನ್ನು ಮುನ್ನಡೆಸಲಿದ್ದಾರೆ ಎಂಬ ಗದ್ದಲ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಅದರಲ್ಲೂ ಕಳೆದ ಬಾರಿ ಉತ್ತಮ ಪ್ರದರ್ಶನ ನೀಡಿರುವ ಸ್ಟಾರ್ ಆಟಗಾರರ ಮೇಲೆ ಐಪಿಎಲ್ ತಂಡಗಳು ಕಣ್ಣಿಟ್ಟಿವೆ. ಜೊತೆಗೆ ಮ್ಯಾಚ್ ವಿನ್ನರ್ಗಳನ್ನೇ ತಂಡಕ್ಕೆ ಸೆಳೆಯುವ ಯತ್ನದಲ್ಲಿವೆ. ಐಪಿಎಲ್ನ ಹಾಟ್ ರೂಮರ್ಗಳಲ್ಲಿ ಕೆ.ಎಲ್.ರಾಹುಲ್, ಟ್ರೇಡಿಂಗ್ ಕೂಡ ಒಂದಾಗಿದೆ. ಸದ್ಯ ಡೆಲ್ಲಿ ಕ್ಯಾಪಿಟಲ್ಸ್ನಲ್ಲಿ ಅವರ ಮೇಲೆ ಕೊಲ್ಕತ್ತಾ, ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಮೂಲಕ ತಂಡಕ್ಕೆ ಕರೆತರುವ ತಯಾರಿ ನಡೆಸಿದೆ ಎಂದು ವರದಿಯಾಗಿದೆ.
ಇನ್ನು ಒಂದು ವೇಳೆ ಕನ್ನಡಿಗ ಕೆ.ಎಲ್.ರಾಹುಲ್ ತಂಡಕ್ಕೆ ಬಂದ್ರೆ ಅವರಿಗೆ ನಾಯಕತ್ವದ ಜಾವಾಬ್ದಾರಿ ನೀಡಲಾಗುತ್ತದೆ ಎಂಬ ಬಿಗ್ ಆಫರ್‌ವೊಂದು ಕೆಕೆಆರ್ ಕಡೆಯಿಂದ ಬಂದಿದೆ. ವಿಕೆಟ್ ಕೀಪರ್, ಆರಂಭಿಕರ ಬ್ಯಾಟಿಂಗ್, ನಾಯಕಯತ್ವ ಸ್ಥಾನಕ್ಕೆ ರಿಪ್ಲೇಸ್ಮೆಂಟ್ ಮಾಡಿಕೊಳ್ಳುವ ಲೆಕ್ಕಚಾರವನ್ನು ಹಾಕಿದೆ ಎನ್ನುವ ಸುದ್ದಿ ಕ್ರೀಡಾಭಿಮಾನಿಗಳಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ. ಸದ್ಯ ಇದೀಗ ಕೆಕೆಆರ್ ತಂಡಕ್ಕೆ ಅಜಿಂಕೆ ರಹಾನೆ ಅವರು ನಾಯಕತ್ವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ.












Click it and Unblock the Notifications