Ind vs Aus: ಬ್ಯಾಟಿಂಗ್‌ನಲ್ಲೂ ಮಿಂಚಿದ ಭಾರತದ ಬೌಲರ್​​ಗಳು; ಫಾಲೋಆನ್ ತಪ್ಪಿಸಿಕೊಂಡ ಭಾರತ

ಬ್ರಿಸ್ಬೇನ್‌ ಗಬ್ಬಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ಫಾಲೋ ಆನ್‌ನಿಂದ ತಪ್ಪಿಸಿಕೊಂಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್‌ ಕೆಚ್ಚೆದೆಯ ಬ್ಯಾಟಿಂಗ್ ನೆರವಿನಿಂದ ಭಾರತ ಸದ್ಯ ಸೋಲಿನ ಸುಳಿಯಿಂದ ಬಚಾವಾಗಿದ್ದು, ಭಾನುವಾರ ಕೊನೆಯವರೆಗೂ ಆಡುವಲ್ಲಿ ಯಶಸ್ವಿಯಾದರೆ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಅವಕಾಶ ಸಿಕ್ಕಿದೆ.

ನಾಲ್ಕನೇ ದಿನ ಕೂಡ ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸಿತು. ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಭಾರತ ತಂಡಕ್ಕೆ ಆಸರೆಯಾದರು. ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ 84 ರನ್ ಗಳಿಸಿದ್ದಾಗ ಔಟಾದರು. ಬಳಿಕ ಜಡೇಜಾ ಏಕಾಂಗಿ ಹೋರಾಟ ಮುಂದುವರೆಸಿದರು. ಭಾರತವನ್ನು ಫಾಲೋ ಆನ್ ಭೀತಿಯಿಂದ ತಪ್ಪಿಸಲು ಎಚ್ಚರಿಕೆಯಿಂದಲೇ ಆಡುತ್ತಿದ್ದ ಜಡೇಜಾ 77 ರನ್‌ ಗಳಿಸಿದ್ದಾಗ ಔಟಾದರು.

Jasprit Bumrah and Akash Deep s Fightback Rescues India from Follow-On

ಜಡೇಜಾ ಔಟಾದ ಬಳಿಕ ಭಾರತ ಫಾಲೋ ಆನ್ ಭೀತಿಗೆ ಸಿಲುಕಿತು. ಆದರೆ ಈ ಹಂತದಲ್ಲಿ ಜೊತೆಯಾದ ಆಕಾಶ್ ದೀಪ್ ಮತ್ತು ಜಸ್ಪ್ರೀತ್ ಬುಮ್ರಾ ಭಾರತ ತಂಡಕ್ಕೆ ಆಸರೆಯಾದರು. ಅಜೇಯ 39 ರನ್‌ಗಳ ಜೊತೆಯಾಟ ಆಡುವ ಮೂಲಕ ಈ ಜೋಡಿ ಭಾರತವನ್ನು ಫಾಲೋ ಆನ್ ಭೀತಿಯಿಂದ ತಪ್ಪಿಸಿತು.

ಬುಮ್ರಾ 27 ಎಸೆತಗಳಲ್ಲಿ ಅಜೇಯ 10 ರನ್ ಗಳಿಸಿದ್ದು, ಆಕಾಶ್ ದೀಪ್ 31 ಎಸೆತಗಳಲ್ಲಿ ಅಜೇಯ 27 ರನ್ ಗಳಿಸಿದ್ದಾರೆ. ಐದನೇ ದಿನ ಈ ಜೋಡಿ ಬ್ಯಾಟಿಂಗ್ ಆರಂಭಿಸಲಿದೆ. ಇವರಿಬ್ಬರ ಬ್ಯಾಟಿಂಗ್‌ ನೋಡಿ ವಿರಾಟ್ ಕೊಹ್ಲಿ, ಗೌತಮ್ ಗಂಭೀರ್ ಕೂಡ ಸಂಭ್ರಮಿಸಿದರು. ಆಕಾಶ್ ದೀಪ್ ಸಿಕ್ಸರ್ ಸಿಡಿಸಿದ್ದನ್ನು ನೋಡಿ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್‌ ರೂಂನಲ್ಲಿ ಕುಣಿದು ಕುಪ್ಪಳಿಸಿದರು.

ಡ್ರಾ ಮಾಡಿಕೊಳ್ಳಲು ಇದೆ ಅವಕಾಶ

ಬೆಳಕಿನ ಸಮಸ್ಯೆಯಿಂದ ಇನ್ನೂ 15 ಓವರ್ ಬಾಕಿ ಇರುವಂತೆಯೇ ನಾಲ್ಕನೇ ದಿನದಾಟವನ್ನು ಮುಗಿಸಲಾಯಿತು. ಐದನೇ ದಿನ ಬುಮ್ರಾ, ಆಕಾಶ್ ದೀಪ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಐದನೇ ದಿನದ ಅಂತ್ಯದ ವರೆಗೂ ಭಾರತ ಆಡಲು ಯಶಸ್ವಿಯಾದರೆ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯವಾಗಲಿದೆ. ಕೊನೆಯ ವಿಕೆಟ್ ಬೀಳುತ್ತಿದ್ದಂತೆ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಲಿದೆ. ಭಾರತ ಬಿಗಿ ಬೌಲಿಂಗ್ ದಾಳಿ ಮಾಡಿದರೆ ಆಸ್ಟ್ರೇಲಿಯಾವನ್ನು ಕಟ್ಟಿಹಾಕಬಹುದು. ಒಂದು ವೇಳೆ ಆಸ್ಟ್ರೇಲಿಯಾ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡರೆ ಭಾರತ ಎರಡನೇ ಇನ್ನಿಂಗ್ಸ್‌ ಬ್ಯಾಟಿಂಗ್ ಮಾಡಲಿದ್ದು, ಐದನೇ ದಿನದಾಟ ಮುಗಿಯುವವರೆಗೂ ಆಡಿದರೆ ಡ್ರಾನಲ್ಲಿ ಅಂತ್ಯವಾಗಲಿದೆ.

ವಿಶ್ವ ಟೆಸ್ಟ್ ಚಾಂಪಿಯನ್‌ ಫೈನಲ್ ತಲುಪಲು ಭಾರತ ಈ ಟೆಸ್ಟ್ ಡ್ರಾ ಮಾಡಿಕೊಂಡರೂ ಇನ್ನೂ ಎರಡು ಟೆಸ್ಟ್ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಸದ್ಯ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ಟೀಂ ಇಂಡಿಯಾದ್ದಾಗಿದೆ. ಬ್ರಿಸ್ಬೇನ್‌ನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆ ಭಾರತ ತಂಡಕ್ಕೆ ವರದಾನವಾಗಿದೆ. ಸರಣಿಯಲ್ಲಿ ಮುನ್ನಡೆ ಸಾಧಿಸುವ ಆಸ್ಟ್ರೇಲಿಯಾ ಕನಸಿಗೆ ಮಳೆ ಅಡ್ಡಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+