Ishan Kishan: 350, 320, 1987.. ದುಲೀಪ್ ಟ್ರೋಫಿ ಇತಿಹಾಸಲ್ಲೇ ಇಶಾನ್ ಕಿಶನ್ ಹೊಸ ಇತಿಹಾಸ ಸೃಷ್ಟಿ

Ishan Kishan: ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 2026ರ ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ ದಕ್ಷಿಣ ವಯಲ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು 1987ರ ದಾಖಲೆಯನ್ನು ಮುರಿದು ಗಮನ ಸೆಳೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಪೂರ್ವ ವಲಯ ತಂಡದ ನಾಯಕ ಇಶಾನ್ ಕಿಶನ್ ಒಂದೇ ಪಂದ್ಯದಲ್ಲಿ ಒಟ್ಟು 350 ರನ್ ಕಲೆಹಾಕುವ ಮೂಲಕ ದುಲೀಪ್ ಟ್ರೋಫಿ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಅವರು ಸುದೀರ್ಘ ದಾಖಲೆಯನ್ನು ಮುರಿದು ನಂಬರ್ ಒನ್‌ ಪಟ್ಟವನ್ನು ಅಲಂಕರಿಸಿದ್ದಾರೆ.

Ishan Kishan Creates Duleep Trophy History With 350 Runs in Final Huge Viral on social media

ಐತಿಹಾಸಿಕ ದಾಖಲೆ ಮಾಡಿದ ಇಶಾನ್ ಕಿಶನ್..

ಈಸ್ಟ್ ಜೋನ್ ತಂಡದ ನಾಯಕ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಇಶಾನ್ ಕಿಶನ್, ಮೊದಲ ಇನಿಂಗ್ಸ್‌ನಲ್ಲಿ 344 ಎಸೆತಗಳನ್ನು ಎದುರಿಸಿ 270 ರನ್‌ಗಳ ಬೃಹತ್ ಮೊತ್ತ ಕಲೆಹಾಕಿದರು. ಇವರ ಈ ಆಕ್ರಮಣಕಾರಿ ಆಟದ ನೆರವಿನಿಂದ ಈಸ್ಟ್ ಜೋನ್ ಮೊದಲ ಇನಿಂಗ್ಸ್‌ನಲ್ಲಿ 708 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತು.

ಎರಡನೇ ಇನಿಂಗ್ಸ್‌ನಲ್ಲೂ ಕಿಶನ್ ಭರ್ಜರಿ ಬ್ಯಾಟಿಂಗ್

ಬಳಿಕ ಬ್ಯಾಟಿಂಗ್‌ಗಿಳಿದ ಸೌತ್ ಜೋನ್ ತಂಡವನ್ನು ಈಸ್ಟ್ ಜೋನ್ ಬೌಲರ್‌ಗಳು 336 ರನ್‌ಗಳಿಗೆ ಆಲ್ಔಟ್ ಮಾಡಿದರು. ಇದರಿಂದಾಗಿ ಈಸ್ಟ್ ಜೋನ್ ತಂಡಕ್ಕೆ 372 ರನ್‌ಗಳ ಬೃಹತ್ ಇನಿಂಗ್ಸ್ ಮುನ್ನಡೆ ದೊರೆಯಿತು. ಇನ್ನೂ ಎರಡನೇ ಇನಿಂಗ್ಸ್‌ನಲ್ಲೂ ತಮ್ಮ ಭರ್ಜರಿ ಫಾರ್ಮ್ ಮುಂದುವರಿಸಿದ ಕಿಶನ್, 98 ಎಸೆತಗಳಲ್ಲಿ 80 ರನ್ ಬಾರಿಸಿದರು. ಎರಡೂ ಇನಿಂಗ್ಸ್‌ಗಳು ಸೇರಿ ಒಟ್ಟು 350 ರನ್ ಗಳಿಸಿದ ಇಶಾನ್ ಕಿಶನ್, ದುಲೀಪ್ ಟ್ರೋಫಿಯ ಒಂದೇ ಪಂದ್ಯದಲ್ಲಿ ಅತ್ಯಧಿಕ ರನ್ ಕಲೆಹಾಕಿದ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1987ರ ಸುದೀರ್ಘ ದಾಖಲೆ ಉಡೀಸ್

ಇದರೊಂದಿಗೆ 1987ರ ಅಕ್ಟೋಬರ್‌ನಲ್ಲಿ ಭಿಲಾಯಿಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಜೋನ್ ವಿರುದ್ಧ ನಾರ್ತ್ ಜೋನ್ ಪರವಾಗಿ ರಾಮನ್ ಲಂಬಾ ಬರೆದಿದ್ದ 320 ರನ್‌ಗಳ ಸುದೀರ್ಘ ದಾಖಲೆಯನ್ನು ಇಶಾನ್ ಕಿಶನ್ ಮುರಿದರು. ದುಲೀಪ್ ಟ್ರೋಫಿ ಇತಿಹಾಸದಲ್ಲಿ ಒಂದೇ ಪಂದ್ಯದಲ್ಲಿ 350 ರನ್ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಅವರು ಭಾಜನರಾಗಿದ್ದಾರೆ.

ಯಶಸ್ಸಿನ ಕಾರಣ ಬಿಚ್ಚಿಟ್ಟ ಇಶಾನ್ ಕಿಶನ್

ತಮ್ಮ ಈ ಐತಿಹಾಸಿಕ ಸಾಧನೆಯ ಕುರಿತು ಪಂದ್ಯದ ನಂತರ ಮಾತನಾಡಿದ ಇಶಾನ್ ಕಿಶನ್ ಅವರು, ಅತಿಯಾದ ಆಲೋಚನೆ ಮತ್ತು ನಿರೀಕ್ಷೆಗಳಿಂದ ದೂರವಿದ್ದು, ಕೇವಲ ಬ್ಯಾಟಿಂಗ್ ಮೇಲೆ ಗಮನ ಹರಿಸಿದ್ದೇ ತಮ್ಮ ಈ ಯಶಸ್ಸಿಗೆ ಕಾರಣ ಎಂದು ತಿಳಿಸಿದರು. 'ನನ್ನಲ್ಲಿ ನಾನಾಗಿಯೇ ಯಾವುದೇ ಬದಲಾವಣೆ ಮಾಡಲು ಹೋಗಲಿಲ್ಲ, ಅದು ನೈಸರ್ಗಿಕವಾಗಿ ಸಂಭವಿಸಿತು,' ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, 'ನಾನು ಭಾರತೀಯ ತಂಡದಿಂದ ಹೊರಬಿದ್ದಾಗ, ನಮಗಿರುವ ಒಂದೇ ಕೆಲಸವೆಂದರೆ ರನ್ ಗಳಿಸುವುದು ಎಂಬ ಸತ್ಯದ ಅರಿವಾಯಿತು. ನಮ್ಮ ವೃತ್ತಿಜೀವನಕ್ಕೆ ನೆರವಾಗುವುದು ರನ್‌ಗಳು ಮಾತ್ರ. ಹೆಚ್ಚಿನ ಆಲೋಚನೆಗಳು ಮನಸ್ಥಿತಿಯನ್ನು ಹಾಳುಮಾಡುತ್ತವೆ ಮತ್ತು ಅನಗತ್ಯ ಒತ್ತಡವನ್ನು ಉಂಟುಮಾಡುತ್ತವೆ. ಆಟಗಾರನ ಮುಖ್ಯ ಕೆಲಸ ಮೈದಾನಕ್ಕೆ ಇಳಿದು ತಂಡಕ್ಕೆ ಗೆಲುವು ತಂದುಕೊಡುವುದಷ್ಟೇ ಆಗಿದೆ,' ಎಂದು ಹೇಳಿದರು.

ದೇಶಿಯ ಕ್ರಿಕೆಟ್‌ನಲ್ಲಿ ಕಿಶನ್ ಸಾಧನೆಗಳು

2023ರಲ್ಲಿ ಭಾರತ ತಂಡದ ಮೂರೂ ಮಾದರಿಗಳಲ್ಲಿ ಸಕ್ರಿಯರಾಗಿದ್ದ ಇಶಾನ್ ಕಿಶನ್ ಅವರು, ನಂತರದ ದಿನಗಳಲ್ಲಿ ಬಿಸಿಸಿಐ ಕೇಂದ್ರ ಗುತ್ತಿಗೆಯನ್ನು ಕಳೆದುಕೊಂಡಿದ್ದರು. ಆದರೆ ದೇಶಿಯ ಕ್ರಿಕೆಟ್‌ನಲ್ಲಿ ಕಠಿಣ ಶ್ರಮ ವಹಿಸಿದ ಅವರು, ರಣಜಿ ಟ್ರೋಫಿ (2025-26) ವೇಳೆ ಭರ್ಜರಿ ಶತಕಗಳನ್ನು ಸಿಡಿಸಿ ಫಾರ್ಮ್‌ಗೆ ಮರಳಿದರು.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಜಾರ್ಖಂಡ್ ತಂಡಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ಅವರು (ಒಟ್ಟು 517 ರನ್ ಮತ್ತು 2 ಶತಕ) ಪ್ರಮುಖ ಪಾತ್ರ ವಹಿಸಿದರು. ಈ ಸರಣಿ ಸಾಧನೆಗಳ ಫಲವಾಗಿ ಅವರು ಮತ್ತೆ ನಿಯಮಿತ ಓವರ್‌ಗಳ ಕ್ರಿಕೆಟ್‌ಗೆ ಹಾಗೂ ಬಿಸಿಸಿಐ ಗುತ್ತಿಗೆಗೆ ಮರಳಿದರು. ಪ್ರಸ್ತುತ ಹಳೆಯ ಕಠಿಣ ದಿನಗಳನ್ನು ಮರೆತು, ಮೈದಾನದಲ್ಲಿ ಚೆಂಡನ್ನು ನೋಡಿ ಅದಕ್ಕೆ ತಕ್ಕಂತೆ ಸ್ಪಂದಿಸುವ ಸರಳ ಶೈಲಿಯನ್ನು ಅಳವಡಿಸಿಕೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಟ್ಟಿನಲ್ಲಿ ಇಶಾನ್ ಅವರ ಈ ಐತಿಹಾಸಿಕ ಸಾಧನೆಗೆ ಮೆಚ್ಚುಗೆಗಳ ಸುರಿಮಳೆ ಹರಿದುಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+