T20 World Cup: ರಿಂಕು ಬಿಟ್ಟಿದ್ದೇಕೆ? ಹಾರ್ದಿಕ್‌ ಆಯ್ಕೆ ಮಾಡಿದ್ದೇಕೆ? ಈ ಪ್ರಶ್ನೆಗಳಿಗೆ ರೋಹಿತ್‌, ಅಜಿತ್‌ ನೀಡಿದ ಉತ್ತರವೇನು?

ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದ ಆಯ್ಕೆಯ ಬಗ್ಗೆ ಹಲವು ಪ್ರಶ್ನೆಗಳು ಸಹಜವಾಗಿವೆ ಇದ್ದವು. ಇದಕ್ಕೆ ಉತ್ತರ ನೀಡಲೆಂದೇ ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ ಹಾಗೂ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾಧ್ಯಮ ಗೋಷ್ಠಿ ನಡೆಸಿದರು.

ಟೀಮ್ ಇಂಡಿಯಾ ಆಯ್ಕೆ ವಿಚಾರದಲ್ಲಿ ಅನುಸರಿಸದ ಮಾನದಂಡಗಳ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಪತ್ರಕರ್ತರು ಎಸೆದ ಬೌನ್ಸರ್‌ಗೆ ಟೀಮ್ ಇಂಡಿಯಾ ನಾಯಕ ಡಿಫೆನ್ಸಿವ್‌ ಮೂಡ್‌ನಲ್ಲಿ ಉತ್ತರ ನೀಡಿದ್ದಾರೆ. ರಿಂಕು ಸಿಂಗ್‌, ಕೆ.ಎಲ್ ರಾಹುಲ್‌ ಅವರನ್ನು ತಂಡದಿಂದ ಕೈ ಬಿಟ್ಟಿದ್ದು ಏಕೆ ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Is Virat Kohli s Strike Rate a Non-Issue Ajit Agarkar Reveals Team India s Disinterest in the Topic

ಹಾರ್ದಿಕ್‌ ಪಾಂಡ್ಯ ಅವರಿಗೆ ಮತ್ತೆ ಉಪನಾಯಕತ್ವ ಏಕೆ?

ನಿಜಕ್ಕೂ ಹಾರ್ದಿಕ್ ಪಾಂಡ್ಯ ಅವರಿಗೆ ಉಪನಾಯಕತ್ವ ನೀಡಿರುವ ವಿಚಾರ ಭಾರೀ ಸದ್ದು ಮಾಡುತ್ತಲೇ ಇತ್ತು. ಇದಕ್ಕೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್‌ ಅಗರ್ಕರ್‌ ಉತ್ತರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಗಾಯದ ಕಾರಣ ದೀರ್ಘ ವಿರಾಮದಿಂದ ಮೈದಾನಕ್ಕೆ ಮರಳಿದ್ದಾರೆ.

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡುವಾಗ ಎಲ್ಲಾ ಪಂದ್ಯಗಳಲ್ಲಿ ತುಂಬಾ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ. ಬೇರೆ ಯಾವುದೇ ಆಟಗಾರ ಅವರೊಂದಿಗೆ ಫಿಟ್ನೆಸ್‌ ವಿಚಾರದಲ್ಲಿ ಸ್ಪರ್ಧಿಸಬಹುದು ಎಂದು ನಾನು ಭಾವಿಸಲಾರೆ. ಅವರು ನಿರ್ವಹಿಸಬಹುದಾದ ಪಾತ್ರಗಳಿಗೆ ಅವರು ಫಿಟ್ ಆಗಿ ಉಳಿಯುವುದು ಮುಖ್ಯವಾಗಿದೆ. ಅವರು ಫಿಟ್ ಆಗಿರುವವರೆಗೆ ಮತ್ತು ತಂಡದ ಪರ ಆಡುತ್ತಾರೆ. ಹಾರ್ದಿಕ್ ಪಾಂಡ್ಯ ತಂಡದಲ್ಲಿ ಯಾವಾಗಲೂ ಇರಬೇಕೆಂದು ನಾವು ಬಯಸುತ್ತೇವೆ, ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಸ್ಟ್ರೈಕ್‌ ರೇಟ್‌ ಬಗ್ಗೆ ರೋಹಿತ್ ಹೇಳಿದ್ದೇನು?

ವಿರಾಟ್ ಕೊಹ್ಲಿ ಒಬ್ಬ ಉತ್ತಮ ಪ್ಲೇಯರ್. ಅವರು ಸದ್ಯ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಅವರ ಅನುಭವ ಟಿ20 ವಿಶ್ವಕಪ್‌ ನಲ್ಲಿ ಸಹಾಯ ಮಾಡುತ್ತದೆ. ಐಪಿಎಲ್‌ನಲ್ಲಿ ಆಡುವುದಕ್ಕೂ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಆಡುವುದೇ ಬೇರೆ. ಒತ್ತಡವನ್ನು ಮೆಟ್ಟಿನಿಲ್ಲುವ ಕಲೆ ಚೆನ್ನಾಗಿ ತಿಳಿದಿರಬೇಕು. ವಿರಾಟ್ ಕೊಹ್ಲಿ ಸ್ಟ್ರೈಕ್‌ ರೇಟ್‌ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ ಸ್ಪಿನ್‌ ವಿರುದ್ಧ ಚೆನ್ನಾಗಿ ಆಡುತ್ತಿಲ್ಲ ಎಂಬ ಮಾತುಗಳು ಸಹ ಕೇಳಿ ಬಂದಿವೆ. ಆದರೆ ಅವರು ಟೀಮ್ ಇಂಡಿಯಾದಲ್ಲಿ ಪಂದ್ಯ ಗೆಲ್ಲಿಸಿಕೊಡಬಲ್ಲ ಪ್ಲೇಯರ್‌. ಕಳೆದ 15 ವರ್ಷಗಳಿಂದ ತಂಡದ ಗೆಲುವಿನಲ್ಲಿ ಶ್ರಮಿಸುತ್ತಿರುವ ವಿರಾಟ್‌ಗೆ ಅವಕಾಶ ನೀಡಲಾಗಿದೆ ಎಂದು ರೋಹಿತ್ ತಿಳಿಸಿದ್ದಾರೆ.

ನಾಲ್ವರು ಸ್ಪಿನ್ ಬೌಲರ್‌ಗಳ ಆಯ್ಕೆ ಏಕೆ?

ನಾಲ್ವರು ಸ್ಪಿನ್ನರ್‌ಗಳ ಕಾರಣವನ್ನು ನಾನು ಈಗ ಹೇಳುವುದಿಲ್ಲ, ಆದರೆ ನಾನು ವೆಸ್ಟ್ ಇಂಡೀಸ್‌ನಲ್ಲಿ ಹೇಳುತ್ತೇನೆ. ನಾನು ವೈಯಕ್ತಿಕವಾಗಿ ನಾಲ್ವರು ಸ್ಪಿನ್ನರ್‌ಗಳು ಮತ್ತು ಹಾರ್ದಿಕ್ ಸೀಮ್ ಆಲ್‌ರೌಂಡರ್ ಇರಬೇಕೆಂದು ಬಯಸಿದ್ದೆ. ಅಕ್ಷರ್ ಜಡೇಜಾ ಉತ್ತಮ ಬ್ಯಾಟ್ಸ್‌ಮನ್ ಮತ್ತು ಕುಲದೀಪ್ ಮತ್ತು ಚಾಹಲ್ ಆಕ್ರಮಣಕಾರಿ ಸ್ಪಿನ್ನರ್‌ಗಳು, ಇದು ತಂಡಕ್ಕೆ ಉತ್ತಮ ಸಮತೋಲನವನ್ನು ನೀಡುತ್ತದೆ ಎಂದು ರೋಹಿತ್ ಹೇಳಿದ್ದಾರೆ.

ಶಿವಂ ದುಬೇ ಏಕೆ?

ರಿಂಕು ಸಿಂಗ್‌ ಬದಲಿಗೆ ಫಿನಿಶರ್‌ ಪಾತ್ರದಲ್ಲಿ ಶಿವಂ ದುಬೆಗೆ ಸ್ಥಾನ ನೀಡಿದ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಇದಕ್ಕೆ ರೋಹಿತ್ ಶರ್ಮಾ, ಮಧ್ಯಮ ಕ್ರಮಾಂಕದಲ್ಲಿ ತಂಡ ಒಬ್ಬ ಅಟ್ಯಾಕಿಂಗ್ ಪ್ಲೇಯರ್ ಬೇಕಿತ್ತು. ಹೀಗಾಗಿ ನಾವು ಶಿವಂರನ್ನು ಆಯ್ಕೆ ಮಾಡಿದೆವು. ಐಪಿಎಲ್‌ನಲ್ಲಿ ನೀಡುತ್ತಿರುವ ಪ್ರದರ್ಶನ ಇವರುನ್ನು ಆಯ್ಕೆ ಮಾಡುವಂತೆ ಪ್ರಚೋದಿಸಿತು. ಐಪಿಎಲ್‌ಗೂ ಮೊದಲು ತಂಡದಲ್ಲಿ ಇವರು ಸ್ಥಾನ ಪಡೆಯುತ್ತಾರಾ ಎಂಬ ಬಗ್ಗೆ ಯಾವುದೇ ಗ್ಯಾರಂಟಿ ಇರಲಿಲ್ಲ ಎಂದು ತಿಳಿಸಿದ್ದಾರೆ.

ರಿಂಕು ಸಿಂಗ್‌ ಡ್ರಾಪ್‌ ಮಾಡಿದ್ದೇಕೆ?

ರಿಂಕು ಸಿಂಗ್‌ ಅವರನ್ನು ತಂಡದಿಂದ ಕೈ ಬಿಟ್ಟಿರುವುದರ ಹಿಂದೆ ಅವರ ತಪ್ಪೇನು ಇಲ್ಲ ಎಂದು ಅಜಿತ್ ಅಗರ್ಕರ್‌ ತಿಳಿಸಿದ್ದಾರೆ. ಗಿಲ್‌ ಸಹ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ಅವರನ್ನು ಕಾಯ್ದಿರಿಸಿದ ಪಟ್ಟಿಯಲ್ಲಿ ಇರಿಸಲಾಗಿದೆ. ತಂಡಕ್ಕೆ ಹೆಚ್ಚಿನ ಆಯ್ಕೆಗಳನ್ನು ನೀಡುವ ಉದ್ದೇಶದಿಂದ ರಿಸ್ಟ್‌ ಸ್ಪಿನ್ನರ್‌ಗಳನ್ನು ತಂಡದಲ್ಲಿ ಇರಿಸಲಾಗಿದೆ.

ಐಪಿಎಲ್ 2024 ರಲ್ಲಿ ರಿಂಕು ಸಿಂಗ್ ಅವರ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡುತ್ತಿಲ್ಲ. ಕೆಕೆಆರ್‌ ಪರ ಪ್ರಸಕ್ತ ಟೂರ್ನಿಯಲ್ಲಿ ಅವರು 9 ಇನ್ನಿಂಗ್ಸ್‌ಗಳಲ್ಲಿ 150 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 123 ರನ್ ಗಳಿಸಿದ್ದಾರೆ. ಆದರೆ ಕಳೆದ ಋತುವಿನಲ್ಲಿ ಅವರು ಕೆಕೆಆರ್ ಪರ ಆರ್ಭಟಿಸಿದ್ದರು.

ಯುವಕರನ್ನು ಕಡೆಗಣಿಸಿದ್ದೇಕೆ?

ಐಪಿಎಲ್ ಹೊರತಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಅನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಟಿ20 ವಿಶ್ವಕಪ್‌ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಚಾಹಲ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.

ಕಾಯ್ದಿರಿಸಿದ ಆಟಗಾರರು: ಶುಭ್ಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+