Irfan Pathan: ಸಹೋದರ ಯೂಸುಫ್ ಪಠಾಣ್ ಮೇಲೆ ಮೈದಾನದಲ್ಲೇ ಕಿಡಿಕಾರಿದ ಇರ್ಫಾನ್ ಪಠಾಣ್
ಭಾರತ ತಂಡದ ಮಾಜಿ ಆಟಗಾರರು ಮತ್ತು ಸಹೋದರರಾದ ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ಸದ್ಯ ನಡೆಯುತ್ತಿರುವ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2024ರ ಪಂದ್ಯಾವಳಿಯಲ್ಲಿ ಭಾರತ ಚಾಂಪಿಯನ್‌ಗಳ ತಂಡದಲ್ಲಿ ಆಡುತ್ತಿದ್ದು, ಮೈದಾನದಲ್ಲೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ.
ದಕ್ಷಿಣ ಆಫ್ರಿಕಾ ಚಾಂಪಿಯನ್‌ಗಳ ವಿರುದ್ಧದ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ರನೌಟ್ ಆದ ಇರ್ಫಾನ್ ಪಠಾಣ್ ತನ್ನ ಸಹೋದರನ ವಿರುದ್ಧವೇ ಸಿಟ್ಟಾದರು. ಮೈದಾನದಲ್ಲೇ ಆಕ್ರೋಶ ವ್ಯಕ್ತಪಡಿಸಿದರು.

ಸಹೋದರರಾದ ಇರ್ಫಾನ್ ಮತ್ತು ಯೂಸುಫ್ ಪಠಾಣ್ ನಡುವೆ ಉಂಟಾದ ಸಣ್ಣ ಅಪಾರ್ಥವು ಇರ್ಫಾನ್ ಅವರ ರನೌಟ್‌ಗೆ ಕಾರಣವಾಯಿತು. 19ನೇ ಓವರ್‌ನ ಮೊದಲ ಎಸೆತದಲ್ಲಿ ಡೇಲ್ ಸ್ಟೇಯ್ನ್ ಎಸೆತದಲ್ಲಿ ಇರ್ಫಾನ್ ಲಾಫ್ಟೆಡ್ ಶಾಟ್ ಬಾರಿಸಿದಾಗ ಈ ಘಟನೆ ಸಂಭವಿಸಿದೆ.
ಇಬ್ಬರು ಫೀಲ್ಡರ್‌ಗಳ ನಡುವೆ ಚೆಂಡು ಸುರಕ್ಷಿತವಾಗಿ ಬಿತ್ತು, ಇರ್ಫಾನ್ ಮತ್ತು ಯೂಸುಫ್ ಅಪಾಯಕಾರಿ ಎರಡನೇ ರನ್ ಓಡಲು ಪ್ರೇರೇಪಿಸಿತು. ಇರ್ಫಾನ್ ಎರಡನೇ ರನ್ ಓಡಲು ನಿರ್ಧರಿಸಿದ್ದರು, ಆದರೆ ಆರಂಭದಲ್ಲಿ ಒಪ್ಪಿದ ನಂತರ ಯೂಸುಫ್ ಬಳಿಕ ಹಿಂದೆ ಸರಿದರು, ಸ್ಟೇಯ್ನ್ ವೇಗವಾಗಿ ಚೆಂಡನ್ನು ಹಿಡಿದು ಇರ್ಫಾನ್ ಪಠಾಣ್‌ರನ್ನು ರನೌಟ್ ಮಾಡಿದರು. ತಕ್ಷಣ ಕೋಪಗೊಂಡ ಇರ್ಫಾನ್ ಪಠಾಣ್ ಸಹೋದರ ಮೇಲೆ ಕೋಪಗೊಂಡು ಬೈದರು.
Irfan pathen get angry with yusuf pathan😠 pic.twitter.com/duB5NhwjXS
— Trend_X_Now (@TrendXNow) July 10, 2024
ವೈರಲ್ ಆದ ವಿಡಿಯೋ
ಇಬ್ಬರು ಸಹೋದರರು ಜಗಳವಾಡಿದ ವಿಡಿಯೊ ಸದ್ಯ ವೈರಲ್ ಆಗಿದೆ. ಆದರೆ ಇದು ಕೆಲವು ಕ್ಷಣಗಳಷ್ಟೇ ಪಂದ್ಯ ಮುಗಿದ ಬಳಿಕ ಇಬ್ಬರೂ ಮೈದಾನದಲ್ಲಿ ಒಬ್ಬರನ್ನೊಬ್ಬರು ಅಪ್ಪಿಕೊಂಡಿದ್ದಾರೆ. ಯೂಸುಫ್ ಪಠಾಣ್ ಹಣೆಗೆ ಇರ್ಫಾನ್ ಪಠಾಣ್ ಮುತ್ತಿಟ್ಟಿದ್ದಾರೆ. ಇಬ್ಬರ ಜಗಳ ಸಹೋದರರ ವಾತ್ಸಲ್ಯದಲ್ಲಿ ಅಂತ್ಯವಾಗಿದೆ.
ಯುವಿ ಸಾರಥ್ಯದಲ್ಲಿ ಆಡುತ್ತಿದೆ ಭಾರತ
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಪಂದ್ಯಾವಳಿಯಲ್ಲಿ ಹಲವು ನಿವೃತ್ತ ಕ್ರಿಕೆಟಿಗರು ಮತ್ತೆ ಮೈದಾನಕ್ಕೆ ಮರಳಿದ್ದಾರೆ. ಭಾರತ ಚಾಂಪಿಯನ್ಸ್‌ಗೆ ಮಾಜಿ ವಿಶ್ವಕಪ್ ವಿಜೇತ ಆಲ್‌ರೌಂಡರ್ ಯುವರಾಜ್ ಸಿಂಗ್ ನಾಯಕತ್ವ ವಹಿಸಿದ್ದಾರೆ ಮತ್ತು ಪಠಾಣ್ ಸಹೋದರರ ಜೊತೆಗೆ ಸುರೇಶ್ ರೈನಾ, ಅಂಬಟಿ ರಾಯುಡು, ಹರ್ಭಜನ್ ಸಿಂಗ್ ಮತ್ತು ರಾಬಿನ್ ಉತ್ತಪ್ಪ ಆಡುತ್ತಿದ್ದಾರೆ.
ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) 2024ರ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ಭಾರತ ಚಾಂಪಿಯನ್‌ಗಳ ತಂಡ ಆಸ್ಟ್ರೇಲಿಯಾ ಚಾಂಪಿಯನ್‌ಗಳನ್ನು ಎದುರಿಸಲು ಸಜ್ಜಾಗಿದೆ.












Click it and Unblock the Notifications