RCB: ಆರ್‌ಸಿಬಿಗೆ ಸ್ಫೋಟಕ ಆಲ್‌ರೌಂಡರ್ ಎಂಟ್ರಿ

ಇಂಗ್ಲೆಂಡ್ ತಂಡದ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಆರ್‌ಸಿಬಿ ಪಾಲಾಗಿದ್ದಾರೆ. ಜೆಡ್ಡಾದಲ್ಲಿ ನಡೆಯುತ್ತಿರುವ ಐಪಿಎಲ್ ಮೆಗಾ ಹರಾಜಿನಲ್ಲಿ 8.75 ಕೋಟಿ ರೂಪಾಯಿಗೆ ಲಿಯಾಮ್ ಲಿವಿಂಗ್‌ಸ್ಟೋನ್‌ರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಖರೀದಿ ಮಾಡಿದೆ. ಮೊದಲ ಸೆಟ್‌ನಲ್ಲಿ ಆರ್ ಸಿಬಿ ಹಲವು ಆಟಗಾರರಿಗೆ ಬಿಡ್ ಮಾಡಿದರೂ, ಕೊನೆಗೆ ಲಿವಿಂಗ್‌ಸ್ಟೋನ್‌ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.

ಲಿಯಾಮ್ ಲಿವಿಂಗ್‌ಸ್ಟೋನ್‌ ಇಂಗ್ಲೆಂಡ್‌ನ ಸ್ಫೋಟಕ ಆಲ್‌ರೌಂಡರ್, ಪಂಜಾಬ್ ಕಿಂಗ್ಸ್ ತಂಡಕ್ಕಾಗಿ ಆಡಿರುವ ಲಿವಿಂಗ್‌ಸ್ಟೋನ್ ಇನ್ನುಮುಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಬ್ಬರಿಸಲಿದ್ದಾರೆ. 39 ಐಪಿಎಲ್ ಪಂದ್ಯಗಳನ್ನಾಡಿರುವ ಅವರು, 28.45 ಸರಾಸರಿಯಲ್ಲಿ 939 ರನ್ ಗಳಿಸಿದ್ದಾರೆ. 162.46 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಈವರೆಗೆ 6 ಅರ್ಧಶತಕ ಬಾರಿಸಿದ್ದಾರೆ. 11 ವಿಕೆಟ್ ಕೂಡ ಪಡೆದಿದ್ದು ಬಲಗೈ ಸ್ಪಿನ್ ಬೌಲರ್ ಆಗಿದ್ದಾರೆ.

IPL Mega Auction RCB buy liam livingstone for 8 75 cr

55 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು 881 ರನ್ ಗಳಿಸಿದ್ದಾರೆ. 26.7 ಸರಾಸರಿ ಹೊಂದಿದ್ದು 151.11 ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ್ದಾರೆ. ಎರಡು ಅರ್ಧಶತಕ ಬಾರಿಸಿದ್ದಾರೆ.

ಫಿನಿಶರ್ ಸ್ಥಾನಕ್ಕೆ ಲಿವಿಂಗ್‌ಸ್ಟೋನ್

ದಿನೇಶ್ ಕಾರ್ತಿಕ್ ನಿವೃತ್ತಿಯಾದ ಬಳಿಕ ಆರ್ ಸಿಬಿ ಫಿನಿಶರ್ ಸ್ಥಾನಕ್ಕೆ ಬದಲಿ ಆಯ್ಕೆಯನ್ನು ಹುಡುಕುತ್ತಿತ್ತು, ಲಿವಿಂಗ್‌ಸ್ಟೋನ್‌ರನ್ನು ಫಿನಿಶರ್ ಆಗಿ ಪರಿಗಣಿಸುವ ಸಾಧ್ಯತೆ ಇದೆ. ಆಲ್‌ರೌಂಡರ್ ಆಗಿರುವ ಕಾರಣ ಅವರನ್ನು ಉತ್ತಮ ಖರೀದಿ ಎಂದು ಹೇಳಲಾಗಿದೆ.

ಸಿರಾಜ್‌ ಕೈಬಿಟ್ಟ ಆರ್ ಸಿಬಿ

ಮೊದಲ ಸೆಟ್‌ನಲ್ಲಿ ಆರ್ ಸಿಬಿ ಯೋಚನೆ ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಮೊಹಮ್ಮದ್ ಸಿರಾಜ್‌ಗೆ ಆರ್ ಸಿಬಿ ಬಿಡ್ ಮಾಡಲು ಆಸಕ್ತಿ ತೋರಿಸಲಿಲ್ಲ 10.25 ಕೋಟಿ ರೂಪಾಯಿಗೆ ಗುಜರಾತ್ ಟೈಟಾನ್ಸ್ ತಂಡಕ್ಕೆ ಸೇರಿದರು. ಆರ್ ಟಿಎಂ ಬಳಸಲು ಕೂಡ ಆರ್ ಸಿಬಿ ಮುಂದಾಗಲಿಲ್ಲ.

ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲು ಆರ್ ಸಿಬಿ ಎಲ್ಲಾ ಪ್ರಯತ್ನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ ಆರ್ ಸಿಬಿ 10 ಕೋಟಿ ರೂಪಾಯಿವರೆಗೆ ಬಿಡ್ ಮಾಡಿದ್ದು, ಬಳಿಕ ಸುಮ್ಮನಾಯಿತು. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಕೆಎಲ್ ರಾಹುಲ್‌ ಖರೀದಿ ಮಾಡಲು ಆಸಕ್ತಿ ತೋರಿಸಿದರು. ಆದರೆ ಡೆಲ್ಲಿ ಕ್ಯಾಪಿಟಲ್ಸ್ 14 ಕೋಟಿ ರೂಪಾಯಿ ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.

ಕೆಎಲ್ ರಾಹುಲ್ ಖರೀದಿ ಮಾಡದ ಆರ್ ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಯಕ, ವಿಕೆಟ್ ಕೀಪರ್ ಆಗಿರುವ ಕೆಎಲ್ ರಾಹುಲ್ 14 ಕೋಟಿ ರೂಪಾಯಿಗೆ ಉತ್ತಮ ಆಯ್ಕೆಯಾಗಿದ್ದರು, ಆದರೆ ಪ್ರತಿ ಬಾರಿ ಮಾಡಿದಂತೆ ಈ ಬಾರಿ ಕೂಡ ಅದೇ ತಪ್ಪು ಮಾಡುತ್ತಿದೆ ಎಂದು ಬೇಸರಗೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+