IPL 2023 GT Vs CSK: ಕೇವಲ 20 ಲಕ್ಷ ರುಪಾಯಿಗೆ ಹರಾಜಾಗಿದ್ದ ಸಾಯಿ ಸುದರ್ಶನ್ ಅದ್ಭುತ ಆಟ: ಮನಸೋತ ಕ್ರಿಕೆಟ್ ದಿಗ್ಗಜರು
ಐಪಿಎಲ್ 2023 ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಯುವ ಆಟಗಾರ ಸಾಯಿ ಸುದರ್ಶನ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ತಂಡದ ಪ್ರಮುಖ ಬ್ಯಾಟರ್ ಶುಭಮನ್ ಗಿಲ್ 39 ರನ್ ಗಳಿಸಿ ಔಟಾದ ಬಳಿಕ ಸಾಯಿ ಸುದರ್ಶನ್ ಅಮೋಘ ಇನ್ನಿಂಗ್ಸ್ ಆಡಿದರು.
47 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸಹಿತ 96 ರನ್ ಗಳಿಸಿದರು. 204.26 ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್ ಗಳಿಸಿದರು. ಕೇವಲ 4 ರನ್ ಅಂತರದಲ್ಲಿ ಅವರು ಶತಕ ಗಳಿಸುವ ಅವಕಾಶ ತಪ್ಪಿಸಿಕೊಂಡರೂ ಅವರ ಅಮೋಘ ಇನ್ನಿಂಗ್ಸ್ ನೆರವಿನಿಂದ ಗುಜರಾತ್ ಟೈಟನ್ಸ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತು.

ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್ ಬಗ್ಗೆ ಈಗ ಎಲ್ಲಾ ಕಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಐಪಿಎಲ್ ಫೈನಲ್‌ನಲ್ಲಿ ಇದೊಂದುಅದ್ಭುತ ಇನ್ನಿಂಗ್ಸ್ ಎಂದು ಕ್ರಿಕೆಟ್ ದಿಗ್ಗಜರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ಐಪಿಎಲ್‌ಗಿಂತ ಜಾಸ್ತಿ ಮೊತ್ತಕ್ಕೆ ಹರಾಜಾಗುವ ಮೂಲಕ ಅವರು ಗಮನ ಸೆಳೆದಿದ್ದರು. ಐಪಿಎಲ್‌ನಲ್ಲಿ ಸಾಯಿ ಸುದರ್ಶನ್ ಮೂಲ ಬೆಲೆ 20 ಲಕ್ಷ ರುಪಾಯಿಗೆ ಹರಾಜಾಗಿದ್ದರೆ. ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ 21 ಲಕ್ಷಕ್ಕೆ ಹರಾಜಾಗಿದ್ದರು.
Sai Sudarshan from Alwarpet cc to Jolly Rovers cc to Tamil Nadu cricket team took 3 years. Where next?
— Ashwin 🇮🇳 (@ashwinravi99) May 29, 2023
Well done GT on picking him at base price .👏👏#properplayer #CSKvsGT #IPL2023
ಸಾಯಿ ಸುದರ್ಶನ್ ಆಟಕ್ಕೆ ಅಶ್ವಿನ್ ಮೆಚ್ಚುಗೆ
ಆಳ್ವಾರಪೇಟೆ ಕ್ರಿಕೆಟ್ ಕ್ಲಬ್‌ನಿಂದ ಜಾಲಿ ರೋವರ್ಸ್ ಕ್ರಿಕೆಟ್ ಕ್ಲಬ್‌ನಿಂದ ತಮಿಳುನಾಡು ಕ್ರಿಕೆಟ್ ತಂಡಕ್ಕೆ ಸೇರಲು ಸಾಯಿ ಸುದರ್ಶನ್ 3 ವರ್ಷಗಳನ್ನು ತೆಗೆದುಕೊಂಡರು. ಮುಂದೆ ಯಾವ ಕಡೆ?
ಮೂಲಬೆಲೆಗೆ ಅವರನ್ನು ಕೊಳ್ಳುವ ಮೂಲಕ ಗುಜರಾತ್ ಟೈಟಾನ್ಸ್ ಉತ್ತಮ ನಿರ್ಧಾರ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಕೂಡ ಸಾಯಿ ಸುದರ್ಶನ್ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ತಂಡಕ್ಕೆ ಅಗತ್ಯವಿದ್ದಾಗ ಅದ್ಭುತ ಪ್ರದರ್ಶನ ನೀಡಿದರು ಎಂದು ಹಾಡಿ ಹೊಗಳಿದ್ದಾರೆ.
I am dumbstruck by the quality of strokeplay from these young Indian batters. On a big day, Sai Sudarshan showed us the incredible talent residing within him.
— Harsha Bhogle (@bhogleharsha) May 29, 2023
ಹರ್ಷಾ ಬೋಗ್ಲೆ ಕೂಡ ಟ್ವೀಟ್ ಮಾಡಿದ್ದು, ಭಾರತದ ಯುವ ಬ್ಯಾಟರ್ ಸಾಯಿ ಸುದರ್ಶನ್ ಅವರ ಕೆಲವು ಹೊಡೆತಗಳನ್ನು ನೋಡಿ ನಾನು ದಿಗ್ಭ್ರಾಂತನಾಗಿದ್ದೇನೆ. ದೊಡ್ಡ ಪಂದ್ಯದಲ್ಲಿ ಅವರು ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ.












Click it and Unblock the Notifications