ಡೆಕ್ಕನ್ ಕೈ ತಪ್ಪಿದ 4,800 ಕೋ.ರೂ, ಬಿಸಿಸಿಐ ಪರ ಬಂದ ತೀರ್ಪು
ಮುಂಬೈ, ಜೂನ್ 16: ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಕರಣದಿಂದ ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್ (ಡಿಸಿಎಚ್‌ಎಲ್)ಗೆ 4,800 ಕೋ.ರೂ. ಕೈ ತಪ್ಪಿದೆ, ಕಾನೂನು ಹೋರಾಟದಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭರ್ಜರಿ ಸಿಕ್ಸರ್ ಬಾರಿಸಿದೆ.
|
ಬಿಸಿಸಿಐ ಹಾಗೂ ಡೆಕ್ಕನ್ ಹೋಲ್ಡಿಂಗ್ಸ್ ನಡುವಿನ ಪರಿಹಾರ ಮೊತ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನೇಮಿತ ಮಧ್ಯಸ್ಥಗಾರ ನ್ಯಾ ಸಿಕೆ ಠಕ್ಕರ್ ನಿರ್ಣಯವನ್ನು ಇಂದು ಬಾಂಬೆ ಹೈಕೋರ್ಟ್ ಪಕ್ಕಕ್ಕೆ ಸರಿಸಿದೆ. ಈ ಮೂಲಕ ಬಿಸಿಸಿಐಗೆ ರಿಲೀಫ್ ಕೊಟ್ಟಿದೆ.
2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ (ಐಪಿಎಲ್) ಉದ್ಘಾಟನಾ ಸೀಸನ್‌ನಲ್ಲಿ ಆಡಿದ್ದ ಡೆಕ್ಕನ್ ಚಾರ್ಜರ್ಸ್ 2009ರಲ್ಲಿ ಚಾಂಪಿಯನ್ ಆಗಿತ್ತು. 2012ರ ವೇಳೆಗೆ 4,800 ಕೋಟಿ ರೂಪಾಯಿ ಪಾವತಿಸುವಂತೆ ಬಿಸಿಸಿಐ ಹಿಂದೆ ಬಿದ್ದಿತ್ತು. 2012ರ ಸೆಪ್ಟೆಂಬರ್‌ನಲ್ಲಿಕಾನೂನುಬಾಹಿರವಾಗಿ ತಂಡವನ್ನು ಐಪಿಎಲ್‌ನಿಂದ ವಜಾ ಮಾಡಲಾಗಿದೆ ಎಂದು ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ ಲಿಮಿಟೆಡ್‌ಗೆ (ಡಿಸಿಎಚ್‌ಎಲ್) ವಾದಿಸಿತ್ತು.
ಡಿಸಿಎಚ್‌ಎಲ್‌ನ ಫ್ರಾಂಚೈಸಿ ಡೆಕ್ಕನ್ ಚಾರ್ಜರ್ಸ್‌ಗೆ ನೋಟಿಸ್ ನೀಡಿದ್ದು ಕಾನೂನುಬಾಹಿರವೇ ಎಂಬುದನ್ನು ನಿರ್ಧರಿಸಲು 2012ರಲ್ಲಿ ಏಕೈಕ ಮಧ್ಯಸ್ಥಿಕೆದಾರರನ್ನಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಸಿ ಕೆ ಠಕ್ಕರ್ ಅವರನ್ನು ನೇಮಿಸಲಾಗಿತ್ತು. ಐಪಿಎಲ್‌ನಿಂದ ಡೆಕ್ಕನ್ ಚಾರ್ಜರ್ಸ್ ತಂಡವನ್ನು ವಜಾ ಮಾಡಿದ್ದು ಕಾನೂನುಬಾಹಿರ, ಡಿಸಿಎಚ್‌ಎಲ್‌ಗೆ ರೂ. 4,814.67 ಕೋಟಿ ಪರಿಹಾರದ ಜೊತೆಗೆ 2012ರಿಂದ ಅನ್ವಯವಾಗುವಂತೆ ಶೇ. 10ರಷ್ಟು ಬಡ್ಡಿ ಪಾವತಿಸುವಂತೆ ಎಂದು ಬಿಸಿಸಿಐಗೆ ಸೂಚಿಸಿ ನ್ಯಾಯಮೂರ್ತಿ ಸಿ ಕೆ ಠಕ್ಕರ್ ಆದೇಶ ನೀಡಿದ್ದರು. ಈ ಆದೇಶವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಬಿಸಿಸಿಐ ಪ್ರಶ್ನಿಸಿತ್ತು. ನ್ಯಾ. ಗೌತಮ್ ಪಟೇಲ್ ಇಂದು ಬದಿಗೆ ಸರಿಸಿದ್ದಾರೆ.