RCB ತಂಡದಲ್ಲಿ ಭಾರಿ ಮಹತ್ವದ ಬದಲಾವಣೆ, ಯಾರೆಲ್ಲಾ ತಂಡದಿಂದ ಉಡೀಸ್?
ಆರ್‌ಸಿಬಿ ತಂಡವು 18 ವರ್ಷಗಳ ನಂತರ ಭರ್ಜರಿಯಾಗಿ ಕಪ್ ಗೆದ್ದ ಖುಷಿಯಲ್ಲಿ ಪ್ರಮುಖವಾದ ಬದಲಾವಣೆಗಳನ್ನು ತಂಡದಲ್ಲಿ ತರಲು ಮುಂದಾಗಿದೆ. ಆರ್‌ಸಿಬಿ ಬೆಂಗಳೂರು ತಂಡದ ಫ್ಯಾನ್ಸ್ ಈ ಮೂಲಕ ಮತ್ತೊಮ್ಮೆ ಭರ್ಜರಿ ಗಿಫ್ಟ್ ಪಡೆಯುವ ನಿರೀಕ್ಷೆಯಲ್ಲಿ ಇದ್ದಾರೆ. 2025 ಐಪಿಎಲ್ ಕಪ್ ಗೆದ್ದಿರುವ ಆರ್‌ಸಿಬಿ ತಂಡ 2026 ಐಪಿಎಲ್ ಕಪ್ ಕೂಡ ಗೆಲ್ಲುವ ಪ್ಲಾನ್ ಮಾಡುತ್ತಿದೆ. ಈ ಎಲ್ಲಾ ಬದಲಾವಣೆ ಕಾರಣಕ್ಕೆ ಹಲವು ಹಾಲಿ ಆಟಗಾರರನ್ನು ತಂಡದಿಂದಲೇ ಖಾಲಿ ಮಾಡಿದೆ ಆರ್‌ಸಿಬಿ ತಂಡ. ಹಾಗಾದ್ರೆ ಯಾರೆಲ್ಲಾ ತಂಡದಿಂದ ಉಡೀಸ್?
ಆರ್‌ಸಿಬಿ ತಂಡ ಒಂದು ಬಾರಿ ಕಪ್ ಗೆದ್ದಿರುವ ಖುಷಿಯಲ್ಲಿ ಇರುವ ಅಭಿಮಾನಿಗಳಿಗೆ ಈಗ ಮತ್ತೆ ಒಂದು ಗಿಫ್ಟ್ ಸಿಗುವುದು ಗ್ಯಾರಂಟಿ ಆಗಿದೆ. ಯಾಕಂದ್ರೆ ಇದೀಗ ಮಹತ್ವದ ಬದಲಾವಣೆ ಮೂಲಕ ಆರ್‌ಸಿಬಿ ತಂಡಕ್ಕೆ ಹೊಸ ರೂಪ ನೀಡಲು ಮುಂದಾಗಿದೆ ಆಡಳಿತ ಮಂಡಳಿ. ಇದೇ ಕಾರಣಕ್ಕೆ ಈಗ ಕಳೆದ ಸೀಸನ್‌ನಲ್ಲಿ ಸರಿಯಾಗಿ ಆಟ ಆಡದ ಲಿಯಾಮ್ ಲಿವಿಂಗ್‌ಸ್ಟೋನ್ ಸೇರಿ, ಮಯಾಂಕ್ ಅಗರ್ವಾಲ್, ಸ್ವಸ್ತಿಕ್ ಚಿಕಾರಾ, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸಿಂಗ್ ಮುಜರಾಬಾನಿ ಹಾಗೂ ಮೋಹಿತ್ ರಾಠಿ ರಿಲೀಸ್ ಮಾಡಿದೆ. ಈ ಮೂಲಕ ಹೊಸ ಯುದ್ಧಕ್ಕಾಗಿ ಬೆಂಗಳೂರು ತಂಡವನ್ನು ಸಜ್ಜುಗೊಳಿಸಲು ಆಡಳಿತ ಮಂಡಳಿ ಮುಂದಾಗಿದೆ.

ಆರ್‌ಸಿಬಿ ತಂಡಕ್ಕೆ ಮತ್ತೆ ಕಪ್?
ವಿರಾಟ್ ಕೊಹ್ಲಿ ಅವರ ಜೀವನದ ಕನಸಾಗಿತ್ತು ಐಪಿಎಲ್ ಕಪ್, ಈ ಆಸೆ 2025 ಐಪಿಎಲ್ ಟೋರ್ನಿ ಗೆಲ್ಲುವ ಮೂಲಕ ಈಡೇರಿದೆ. ಈ ಸಾಧನೆಯ ಮೂಲಕ ಆರ್‌ಸಿಬಿ ತನ್ನ ಕೋಟಿ, ಕೋಟಿ ಅಭಿಮಾನಿಗಳಿಗೆ ಖುಷಿಯಾದ ವಿಚಾರವನ್ನು ನೀಡಿದೆ. ಹೀಗಿದ್ದಾಗ ಲಿವಿಂಗ್‌ಸ್ಟೋನ್ ಸೇರಿ, ಮಯಾಂಕ್ ಅಗರ್ವಾಲ್, ಸ್ವಸ್ತಿಕ್ ಚಿಕಾರಾ ಅವರನ್ನ ದಿಢೀರ್ ಅಂತಾ ಕೈಬಿಡುವ ನಿರ್ಧಾರವನ್ನು ಕೈಗೊಂಡಿದೆ.
ಯಾರೆಲ್ಲಾ ಆರ್‌ಸಿಬಿ ತಂಡದಲ್ಲಿ ಉಳಿದಿದ್ದಾರೆ?
ಈ ಮೂಲಕ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಸೇರಿದಂತೆ ಅವರ ಶಿಷ್ಯ ರಜತ್ ಪಾಟಿದಾರ್, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹೇಝಲ್‌ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್ ಮತ್ತಿತರರು ಆರ್‌ಸಿಬಿ ತಂಡದಲ್ಲಿ ಉಳಿಯಲಿದ್ದಾರೆ. ಹೀಗೆ ಆರ್‌ಸಿಬಿ ತಂಡ ಹೊಸ ತಂಡವನ್ನೇ ಕಟ್ಟುವ ಪ್ರಯತ್ನ ಮಾಡುತ್ತಿದೆಯಾ? ಅಥವಾ ಮತ್ತೆ ಒಬ್ಬ ಭರ್ಜರಿ ಆಟಗಾರನನ್ನು ಕರೆತರುತ್ತದಾ? ಎಂಬುದನ್ನ ಕಾದು ನೋಡಬೇಕಿದೆ.












Click it and Unblock the Notifications