Get Updates
Get notified of breaking news, exclusive insights, and must-see stories!

IPL 2026 RCB: ಆರ್‌ಸಿಬಿಗೆ ಹೊಸ 8 ಆಟಗಾರರ ಸೇರ್ಪಡೆ: ಇಲ್ಲಿದೆ ಉಳಿದ ಮೊತ್ತದ ವಿವರ

IPL 2026 RCB: ಈಗಾಗಲೇ ಬಲಿಷ್ಠ ತಂಡ ಹೊಂದಿರುವ ಆರ್‌ಸಿಬಿ ಇಂದು (ಡಿಸೆಂಬರ್ 16) ಐಪಿಎಲ್‌ 2026 ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಕೊಂಡುಕೊಂಡಿದೆ. ಹಾಗಾದ್ರೆ, ಅವರು ಯಾರು ಹಾಗೂ ಎಷ್ಟು ಮೊತ್ತಕ್ಕೆ ಖರೀದಿ ಮಾಡಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ರಿಟೈನ್‌ ಪ್ರಕಿಯೆ ವೇಳೆ ಬಹುತೇಕ ಈ ಬಾರಿಯ ಆಟಗಾರರನ್ನೇ ಮುಂದಿನ ಆವೃತ್ತಿಗೆ ಉಳಿಸಿಕೊಂಡಿತ್ತು. ಒಟ್ಟು 17 ಆಟಗಾರರನ್ನು ಉಳಿಸಿಕೊಂಡಿತ್ತು. ಇದೀಗ ಈ ಪಟ್ಟಿಗೆ ಮಿನಿ ಹಾರಾಜಿನಲ್ಲಿ ಎಂಟು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದೆ. ಹಾಗಾದ್ರೆ, ಯಾರೆಲ್ಲಾ ಇದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲದೆ ನೋಡಿ.

IPL 2026 RCB Complete List of Players Bought by Royal Challengers Bengaluru in Mini Auction

ಆರ್‌ಸಿಬಿ ಐಪಿಎಲ್‌ 2025 ಫೈನಲ್‌ ಪಂದ್ಯ ಗೆಲ್ಲಲು ಪ್ರಮುಖ ಕಾರಣವೇ ಬಲಿಷ್ಠ ತಂಡವನ್ನು ಕಟ್ಟಿದ್ದು. ಕಳೆದ ಸೀಸನ್‌ಗಳಲ್ಲಿ ಕೊನೆಯವರೆಗೂ ಬಂದು ಬ್ಯಾಟಿಂಗ್‌ ಅಥವಾ ಬೌಲಿಂಗ್‌ನಲ್ಲಿ ಎಡವಿ ಕೊನೆಗೆ ಸೋಲು ಕಾಣುತ್ತಿತ್ತು. ಆದರೆ, ಈ ಬಾರಿ ಬ್ಯಾಟಿಂಗ್‌, ಬೌಲಿಂಗ್‌ ವಿಭಾಗದಲ್ಲೂ ಉತ್ತಮ ಪ್ರದರ್ಶನದ ಮೂಲಕ ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಟ್ರೋಫಿ ಗೆಲ್ಲುವಲ್ಲಿ ಯಶಸ್ವಿ ಆಯಿತು.

ಒಬ್ಬರು ಗಾಯಗೊಂಡು ಪಂದ್ಯದಿಂದ ಹೊರಗುಳಿದರೆ, ಮತ್ತೊಬ್ಬರು ಬ್ಯಾಕ್‌ ಅಪ್ ಅಲ್ಲಿ ತಯಾರಿದ್ದರು. ಇಷ್ಟರ ಮಟ್ಟಿಗೆ ಬಲಿಷ್ಠ ತಂಡ ಹೊಂದಿದ್ದರೂ ಸಹ ಇದೀಗ ಐಪಿಎಲ್‌ 2026 ಮಿನಿ ಹರಾಜಿನಲ್ಲಿ 8 ಆಟಗಾರರನ್ನು ಕೊಂಡುಕೊಂಡಿದೆ. ಅದರಲ್ಲೂ ಹೆಚ್ಚಾಗಿ ಗಾಯಗೊಂಡು ಹೊರಗುಳಿಯುತ್ತಿದ್ದ ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ಇದೀಗ ಬ್ಯಾಕ್‌ ಅಪ್ ಆಗಿ ವೆಂಕಟೇಶ್‌ ಅಯ್ಯರ್‌ ಅವರನ್ನು 7 ಕೋಟಿ ರೂಪಾಯಿಗೆ ಖರೀದಿಸಿದೆ. ಇವರನ್ನು ಸೇರಿದಂತೆ ಒಟ್ಟು ಎಂಟು ಮಂದಿಗೆ ಮಿನಿ ಹರಾಜಿನಲ್ಲಿ ಮಣೆ ಹಾಕಿದೆ.

ಯಾರಿಗೆ ಎಷ್ಟು ಮೊತ್ತ ನೀಡಿ ಖರೀದಿಸಿದೆ?

* ವೆಂಕಟೇಶ್ ಅಯ್ಯರ್: ₹7,00,00,000
* ಮಂಗೇಶ್ ಯಾದವ್: ₹5,20,00,000
* ಜಾಕೋಬ್ ಡಫ್ಫಿ: ₹2,00,00,000
* ಜೋರ್ಡಾನ್ ಕಾಕ್ಸ್: ₹75,00,000
* ಸಾತ್ವಿಕ್ ದೇಸ್ವಾಲ್: ₹30,00,000
* ವಿಕಿ ಓಸ್ಟ್ವಾಲ್: ₹30,00,000
* ಕನಿಷ್ಕ್ ಚೌಹಾಣ್: ₹30,00,000
* ವಿಹಾನ್ ಮಲ್ಹೋತ್ರಾ: ₹30,00,000

ಆರ್‌ಸಿಬಿ ಪರ್ಸ್‌ನಲ್ಲಿ ಉಳಿದ ಹಣ ಎಷ್ಟು?: ಆರ್‌ಸಿಬಿ ಮಿನಿ ಹರಾಜಿಗೆಂದು 16.40 ಕೋಟಿ ರೂಪಾಯಿ ಉಳಿಸಿಕೊಂಡಿತ್ತು. ಆದರೆ, ಇದೀಗ ಐದು ಆಟಗಾರರನ್ನು ಕೊಂಡುಕೊಂಡ ಬಳಿಕ ಪರ್ಸ್‌ನಲ್ಲಿ ಸದ್ಯ ಉಳಿದಿರುವ ಮೊತ್ತ ₹25,00,000 ಮಾತ್ರ. ಅಬುಧಾಬಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು. ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಈ ಎಂಟು ಮಂದಿಯನ್ನು ಸೇರ್ಪಡೆ ಮಾಡಿಕೊಂಡಿದೆ.

ಆರ್‌ಸಿಬಿ ತಂಡ: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಟಿಮ್ ಡೇವಿಡ್, ಕೃಣಾಲ್ ಪಾಂಡ್ಯ, ರೊಮಾರಿಯೊ ಶೆಫರ್ಡ್, ಜಿತೇಶ್ ಶರ್ಮಾ (ವಿಕೆಟ್‌ ಕೀಪರ್), ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹ್ಯಾಝಲ್‌ವುಡ್, ಸುಯಾಶ್ ಶರ್ಮಾ, ಅಭಿನಂದನ್ ಸಿಂಗ್, ಜಾಕೋಬ್ ಬೆಥೆಲ್, ನುವಾನ್ ತುಷಾರ, ರಸಿಖ್ ಸಲಾಂ, ಸ್ವಪ್ನಿಲ್ ಸಿಂಗ್. ಇದೀಗ ಈ ಪಟ್ಟಿಗೆ ವೆಂಕಟೇಶ್ ಅಯ್ಯರ್, ಮಂಗೇಶ್ ಯಾದವ್, ಜಾಕೋಬ್ ಡಫ್ಫಿ, ಜೋರ್ಡಾನ್ ಕಾಕ್ಸ್, ಸಾತ್ವಿಕ್ ದೇಸ್ವಾಲ್ ಸೇರ್ಪಡೆಯಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+