IPL 2026 RCB: ಆರ್‌ಸಿಬಿಗೆ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಎಂಟ್ರಿ: ಮೊತ್ತವೆಷ್ಟು ಗೊತ್ತಾ?
IPL 2026 RCB: ಐಪಿಎಲ್ 2025 ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಪಂಜಾಬ್ ಕಿಂಗ್ಸ್ ವಿರುದ್ಧ ಮಣಿಸುವ ಮೂಲಕ ಚೊಚ್ಚಲ ಟ್ರೋಫಿಗೆ ಮುತ್ತಿಟ್ಟಿತು. ಹಾಗೇಯೇ ಮುಂದಿನ ಬಾರಿಯೂ ಗೆದ್ದೇ ಗೆಲ್ಲಬೇಕು ಎನ್ನುವ ಹಠ ತೊಟ್ಟಿದ್ದು, ಈ ಹಿನ್ನೆಲೆ ತಂಡವನ್ನು ಮತ್ತಷ್ಟು ಬಲಪಡಿಸಿಕೊಳ್ಳುವತ್ತ ಚಿತ್ತ ಹರಿಸಿದೆ. ಇದೇ ದೃಷ್ಟಿಕೋನದಿಂದ ಅಂದುಕೊಂಡತೆ ಇಂದು (ಡಿಸೆಂಬರ್ 16) ಐಪಿಎಲ್ 2026 ಮಿನಿ ಹರಾಜಿನಲ್ಲಿ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿ ಮಾಡಿದೆ.
ಆರ್‌ಸಿಬಿ ಈಗಾಗಲೇ ಬಲಿಷ್ಟ ತಂಡವನ್ನು ಹೊಂದಿದೆ. ಆದರೂ, ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಲು ಫ್ರಾಂಚೈಸಿ ಆಲ್‌ರೌಂಡರ್ ಹುಡುಕಾಟದಲ್ಲಿತ್ತು. ಅದರಂತೆಯೇ ಭಾರತದ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಹಾಲಿ ಚಾಂಪಿಯನ್ ಆರ್‌ಸಿಬಿ ಬಳಗಕಗಕ್ಕೆ ಸೇರ್ಪಡೆ ಆಗಿದ್ದಾರೆ.

ವೆಂಕಟೇಶ್ ಅಯ್ಯರ್ ಮೂಲ ಬೆಲೆ 2 ಕೋಟಿ ರೂಪಾಯಿಗಳಿಗೆ ಮಿನಿ ಹರಾಜಿಗೆ ಪ್ರವೇಶ ಮಾಡಿದರು. ಆರಂಭದಿಂದಲೂ ಕೆಕೆಆರ್-ಆರ್‌ಸಿಬಿ ನಡುವೆ ತೀವ್ರ ಪೈಪೋಟಿ ನಡೆಯಿತು. ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ಕೋಟಿ ರೂಪಾಯಿ ನೀಡುವ ಮೂಲಕ ಖರೀದಿ ಮಾಡಿದೆ.
ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿಸಲು ಆರ್ಸಿಬಿ ಭಾರೀ ಕಸರತ್ತು ನಡೆಸಿತ್ತು. ಆದರೆ, ಮರಳಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಸೇರ್ಪಡೆ ಮಾಡಿಕೊಂಡಿತ್ತು. ಇದೀಗ 2026ರ ಮಿನಿ ಹರಾಜಿನ ವೇಳೆ ಇವರಿಗಾಗಿ ಈ ಎರಡು ಫ್ರಾಂಚೈಸಿಗಳ ನಡುವೆ ಭಾರೀ ಪೈಪೋಟಿ ನಡೆದಿದ್ದು, ಕೊನೆಗೂ ಆರ್‌ಸಿಬಿ ಖರೀದಿ ಮಾಡಿ ಗಮನ ಸೆಳೆಯಿತು.
ಇವರು ಎಡಗೈ ಸ್ಫೋಟಕ ಬ್ಯಾಟರ್ ಆಗಿದ್ದು, ಕನ್ನಡಿಗ ದೇವದತ್ ಪಡಿಕ್ಕಲ್‌ಗೆ ಬ್ಯಾಕಪ್ ಆಗಿರಲಿದ್ದಾರೆ. ಕಳೆದ ಆವೃತ್ತಿಯಲ್ಲಿ ನಡೆದಿದ್ದ ಮೆಗಾ ಹರಾಜಿನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ 23.75 ಕೋಟಿ ರೂಪಾಯಿಗೆ ವೆಂಕಟೇಶ್ ಅಯ್ಯರ್ ಅವರನ್ನು ಖರೀದಿ ಮಾಡಿತ್ತು.
ಈ ಮೂಲಕ ಐಪಿಎಲ್ ಟೂರ್ನಿಯ ಕೆಕೆಆರ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದರು. ಆದರೆ, ಟೂರ್ನಿಯಲ್ಲಿ ನಿರೀಕ್ಷಿಸಿದಷ್ಟು ಪ್ರದರ್ಶನ ಕಂಡುಬರಲಿಲ್ಲ. ಆಡಿದ್ದ 11 ಪಂದ್ಯಗಳಿಂದ ಕೇವಲ 142 ರನ್‌ಗಳನ್ನು ಕಲೆ ಹಾಕಿದ್ದರು. ಆದ್ದರಿಂದ ಕೆಕೆಆರ್ ಕೈಬಿಟ್ಟಿತ್ತು.
ಇದೀಗ 2026ರ ಮಿನಿ ಹರಾಜಿನಲ್ಲಿ ಮತ್ತೆ ಗಾಳ ಹಾಕಲು ಪ್ರಯತ್ನಿಸಿತು. ಆದರೆ, ಅರ್‌ಸಿಬಿ ಇದಕ್ಕೆ ಅನುವು ಮಾಡಿಕೊಡದೇ ಖರೀದಿ ಮಾಡಿತು. ಈ ಬಾರಿ 16 ಕೋಟಿ ರೂಪಾಯಿ ಇಟ್ಟುಕೊಂಡು ಹರಾಜಿಗೆ ಇಳಿದ ಆರ್‌ಸಿಬಿ 7 ಕೋಟಿ ರೂಪಾಯಿಗೆ ವೆಂಕಟೇಶ್ ಅವರನ್ನು ಬಲೆಗೆ ಹಾಕಿಕೊಂಡಿತು.
ಆರ್‌ಸಿಬಿ ಉಳಿಸಿಕೊಂಡಿದ್ದ ಆಟಗಾರರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಭುವನೇಶ್ವರ್ ಕುಮಾರ್, ನುವಾನ್ ಸಿಂಗ್ ತುಷಾರ, ರಸಿಖ್ನಾ ಸಲಾಂ. ಈ ಪಡೆಗೆ ಇದೀಗ ವೆಂಕಟೇಶ್ ಅಯ್ಯರ್ ಕೂಡ ಸೇರ್ಪಡೆಗೊಂಡಿದ್ದಾರೆ.
-
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Vijay Mallya: ವಿಜಯ್ ಮಲ್ಯ ಆರ್‌ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
RCB: ಆರ್ ಸಿಬಿ ತಂಡದ ಅಧಿಕೃತ ಪೇಮೆಂಟ್ಸ್ ಪಾಲುದಾರ ನವಿ ಯುಪಿಐ, ಫ್ಯಾನ್ಸ್ ಗಮನಿಸಿ -
IPL 2026: ಆರ್ಸಿಬಿ-ಎಸ್ಆರ್ಎಚ್ ಉದ್ಘಾಟನಾ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ಹೇಳೋದೇನು? -
IPL 2026: RCB ಫ್ಯಾನ್ಸ್ಗಾಗಿ ಬಿಎಂಟಿಸಿ ಬಸ್ಗಳ ಕಾರ್ಯಾಚರಣೆ, ಎಲ್ಲಿಂದ ಎಲ್ಲಿಗೆ? ಮಾರ್ಗ ಡಿಟೇಲ್ಸ್ -
ಮೈದಾನಕ್ಕೆ ಬರ್ತಾರಾ ಆರ್ಸಿಬಿ ಅಭಿಮಾನಿಗಳ ಹೊಸ ಕ್ರಶ್ ಬಿರ್ಲಾ ಕುಡಿ ಅನನ್ಯಾ?; ಕಾವ್ಯಾ ಮಾರನ್ ಬಗ್ಗೆ ಹೊಸ ಚರ್ಚೆ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
IPL VIP Ticket: ಐಪಿಎಲ್ ಟಿಕೆಟ್ ನನಗಂತೂ ಬೇಡ: ಆರ್ಸಿಬಿ ಪಂದ್ಯದ ಟಿಕೆಟ್ ನಿರಾಕರಿಸಿದ ಬಿಜೆಪಿ ಶಾಸಕ ಸುರೇಶ್ ಕುಮಾರ್ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಕ್ರಿಕೆಟ್ ಆಟ, ಬೆಟ್ಟಿಂಗ್ ದಂಧೆ, ಜೂಜಿನ ಮಜಾ ಇದೇ ಮಾರ್ಚ್ 28ರಿಂದ ಪ್ರಾರಂಭ: ವಿವೇಕಾನಂದ ಎಚ್.ಕೆ. ಮಹತ್ವದ ಸಂದೇಶ -
IPL Free VIP Tickets: ಶಾಸಕರಿಗೆ ಐಪಿಎಲ್ ವಿಐಪಿ ಟಿಕೆಟ್ ಪಡೆಯುವ ಹಕ್ಕು ಇದೆ: ಡಿ.ಕೆ.ಶಿವಕುಮಾರ್ ಸಮರ್ಥನೆ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ










Click it and Unblock the Notifications