IPL 2026: ಕೆಕೆಆರ್ ಮುಸ್ತಫಿಜುರ್ ರೆಹಮಾನ್ ಕೈಬಿಟ್ಟ ಬೆನ್ನಲ್ಲೇ ಬಾಂಗ್ಲಾದಲ್ಲಿ ಐಪಿಎಲ್ ಪ್ರಸಾರದ ಬ್ಯಾನ್ ಆದೇಶ
IPL 2026: ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಚುಟುವಟಿಕೆಗಳು ನಡೆದ ಹಿನ್ನೆಲೆ ಐಪಿಎಲ್ ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ ನನ್ನು ಕೈಬಿಡಲಾಗಿತ್ತು. ಇದರ ಬೆನ್ನಲ್ಲೇ ಬಾಂಗ್ಲಾದಲ್ಲಿ ತುಂಬಾ ಬೆಳವಣಿಗೆಗಳು ಆಗಿದ್ದು, ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ ನೇರಪ್ರಸಾರ ಮಾಡದಂತೆ ಇಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.
ಐಪಿಎಲ್ ಪ್ರಸಾರಕ್ಕೆ ನಿಷೇಧ: ಬಾಂಗ್ಲಾದಲ್ಲಿ ನಡೆದ ಹಿಂದೂ ವಿರೋಧಿ ಚಟುವಟಿಕೆಗಳು ಕ್ರಿಕೆಟ್ ಮೇಲೆ ಪರಿಣಾಮ ಬೀರಿದೆ. ಇನ್ನೂ ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ ನನ್ನು ಕೈಬಿಟ್ಟ ಹಿನ್ನೆಲೆ ಮುಂಬರುವ ಟಿ-20 ವಿಶ್ವಕಪ್‌ಗೆ ಬಾಂಗ್ಲಾದ ಆಟಗಾರರು ಭಾರತದ ನೆಲದಲ್ಲಿ ಆಡಲಿ ನಿರಾಕರಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಅಲ್ಲಿನ ಸರ್ಕಾರ ತಕ್ಷಣದಿಂದಲೇ ಜಾರಿಗೆ ಬರುವಂತೆ ತನ್ನ ದೇಶದಲ್ಲಿ ಐಪಿಎಲ್ ಪ್ರಸಾರ ಮಾಡದಂತೆ ನಿಷೇಧ ಹೇರಿದೆ.

ಕೆಕೆಆರ್ ವಿರುದ್ಧ ಆಕ್ರೋಶ: ಬಾಂಗ್ಲಾದೇಶದಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ಹಿನ್ನೆಲೆ ಶಾರುಖ್ ಖಾನ್ ಮಾಲಿಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಡುವಂತೆ ಆಕ್ರೋಶಗಳು ಭುಗಿಲೆದ್ದಿದ್ದವು. ಇದೇ ವಿಚಾರವಾಗಿ ಶಾರುಖ್ ಖಾನ್ ದೇಶ ವಿರೋಧಿಯಾಗಿದ್ದು, ಅವರನ್ನು ಭಾರತದಿಂದ ಗಡಿಪಾರು ಮಾಡಬೇಕು ಎಂಬೆಲ್ಲಾ ಆಕ್ರೋಶಗಳು ವ್ಯಕ್ತವಾಗಿದ್ದವು.
ಇದರ ಬೆನ್ನಲ್ಲೇ ಎಚ್ಚೆತ್ತ ಬಿಸಿಸಿಐ ರೆಹಮಾನ್ ಅವರನ್ನು ತಂಡದಿಂದ ಕೈಬಿಡುವಂತೆ ಸೂಚನೆ ನೀಡಿತು. ಈ ಸೂಚನೆ ಮೇರೆಗೆ ಮುಸ್ತಫಿಜುರ್ ರೆಹಮಾನ್ ಅವರನ್ನು ಕೆಕೆಆರ್ ಕೈಬಿಟ್ಟಿತ್ತು. ಐಪಿಎಲ್ 2026 ಮಿನಿ ಹರಾಜಿನ ವೇಳೆ ಅವರನ್ನು ಕೊಲ್ಕತ್ತಾ ನೈಟ್ ರೈಡರ್ಸ್ 9.20 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು.
ಕೆಕೆಆರ್ ತಂಡದಿಂದ ಮುಸ್ತಫಿಜುರ್ ರೆಹಮಾನ್ ಅವರನ್ನು ಕೈಬಿಟ್ಟಿರುವ ನಿರ್ಧಾರ ಬಾಂಗ್ಲಾಕ್ಕೆ ಉರಿ ಬಿದ್ದಂತಾಗಿದ್ದು, ತಮ್ಮ ದೇಶದಲ್ಲಿ ಐಪಿಎಲ್ ನೇರಪ್ರಸಾರ ಮಾಡದಂತೆ ಆದೇಶ ಹೊರಡಿಸಿದೆ. ಇದೀಗ ಇದೊಂದು ಕೇವಲ ಆಟದ ವಿಷಯವಾಗಿ ಉಳಿಯದೆ, ರಾಜತಾಂತ್ರಿಕ ವಿವಾದವಾಗಿ ತಿರುವು ಪಡೆದುಕೊಂಡಿದೆ.
ಬಾಂಗ್ಲಾದ ಹೇಳಿಕೆಯಲ್ಲಿ ಏನಿದೆ?: "ಬಾಂಗ್ಲಾ ಸರ್ಕಾರ ಹೇಳುವ ಪ್ರಕಾರ, ಕೆಕೆಆರ್ ತಂಡದಲ್ಲಿ ಮುಸ್ತಫಿಜುರ್ ಪ್ರಮುಖ ಆಟಗಾರನಾದಿ ಗುರುತಿಸಿಕೊಂಡಿದ್ದರು. ಆದರೆ, ಬಿಸಿಸಿಐ ದಿಢೀರ್ ಅವರನ್ನು ತಂಡದಿಂದ ಕೈಬಿಡುವಂತೆ ಹೇಳಿದೆ. ಇದಕ್ಕೆ ಯಾವುದೇ ಕಾರಣ ಇಲ್ಲ. ಇದು ಬಾಂಗ್ಲಾದೇಶದ ಜನರಿಗೆ ತುಂಬಾ ನೋವಿನ ವಿಚಾರವಾಗಿದೆ. ನಮ್ಮ ಆಟಗಾರನಿಗೆ ಅವಮಾನ ಆಗಿರುವುದನ್ನು ನಾವು ಸಹಿಸುವುದಿಲ್ಲ," ಎಂದು ಅಲ್ಲಿನ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
"ಮುಂದಿನ ಆದೇಶ ಬರುವವರೆಗೂ ಐಪಿಎಲ್‌ನ ಯಾವುದೇ ಪಂದ್ಯವನ್ನ ಬಾಂಗ್ಲಾದಲ್ಲಿ ಪ್ರಸಾರ ಮಾಡುವಂತಿಲ್ಲ," ಎಂದು ಸರ್ಕಾರವ ಆದೇಶ ಹೊರಡಿಸಿದೆ. ಐಪಿಎಲ್ ಮಾರ್ಚ್ 26, 2026ರಿಂದ ಆರಂಭ ಆಗಲಿದ್ದು, ಮೇ 31ರ ವರೆಗೆ ನಡೆಯಲಿದೆ. ಮತ್ತೊಂದೆಡೆ ನೋಡೋದಾದ್ರೆ, ಬಾಂಗ್ಲಾದೇಶದಲ್ಲಿ ಐಪಿಎಲ್ ನೇರಪ್ರಸಾರ ಬ್ಯಾನ್ ಮಾಡಿರುವುದರಿಂದ ಭಾರತಕ್ಕೆ ಯಾವುದೇ ನಷ್ಟ ಆಗುವುದಿಲ್ಲ. ಬರೀ ಭಾರತದಲ್ಲೇ ಆಗುವ ನೇರಪ್ರಸಾರದಿಂದ ಆದಾಯ ಹರಿದುಬರಲಿದೆ ಎಂದು ಹೇಳಲಾಗುತ್ತಿದೆ.
ಮುಂಬರುವ ಫೆಬ್ರವರಿಯಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ಗೆ ಭಾತರಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಹೇಳಿದೆ. ಈ ಬಗ್ಗೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಐಸಿಸಿಗೆ ಪತ್ರ ಬರೆದಿದೆ. "ಭಾರತಕ್ಕೆ ನಮ್ಮ ತಂಡವನ್ನು ಕಳುಹಿಸುದಿಲ್ಲ. ಮುಂಬೈ ಹಾಗೂ ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರ ಮಾಡಿ ಎಂದು ಬೇಡಿಕೊಂಡಿದೆ. ಆದರೆ, ಐಸಿಸಿ ಈ ಕುರಿತು ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಕಾದುನೋಡಬೇಕಿದೆ. ಒಂದು ವೇಳೆ ಇದಕ್ಕೆ ಐಸಿಸಿ ಒಪ್ಪದಿದ್ದರೆ, ಬಾಂಗ್ಲಾದೇಶ ಹಠ ಸಾಧಿಸಿದರೆ, ಈ ಟೂರ್ನಿಯಿಂದ ಹೊರಗುಳಿಯಬೇಕಾಗುತ್ತದೆ. ಬಾಂಗ್ಲಾ ಮುಂದಿನ ದಿನಗಳಲ್ಲೂ ಹೀಗೆ ಹಠ ಸಾಧಿಸಿದರೆ. ಪಾಪಿ ಪಾಕ್ ತಂಡದಂತೆ ಅದನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.












Click it and Unblock the Notifications