ಐಪಿಎಲ್ 2026: ಭಾರತ ಕೆಣಕಿ ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಟುಕೊಂಡ ಬಾಂಗ್ಲಾದೇಶ
IPL 2026: ತನ್ನ ಬುಡಕ್ಕೆ ತಾನೆ ಬೆಂಕಿ ಇಟ್ಟುಕೊಂಡ ಪರಿಸ್ಥಿತಿ ಬಂಗ್ಲಾಗೆ ಎದುರಾಗಿದೆ. ಮೊದಲು ಅವರು ತಮ್ಮ ದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಿದ್ದು, ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೇ ವಿಚಾರಕ್ಕೆ ಮುಸ್ತಾಫಿಜುರ್ ರೆಹಮಾನ್ ಅವರನ್ನು ಬಿಸಿಸಿಐ ಸೂಚನೆ ಮೇರೆಗೆ ಕೆಕೆಆರ್ ಕೈಬಿಟ್ಟಿತು. ಮತ್ತೊಂದೆಡೆ, ಇದರ ಬೆನ್ನಲ್ಲೇ ಬಾಂಗ್ಲಾದಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ. ಇದರಿಂದ ಭಾರತಕ್ಕೆ ಏನೂ ನಷ್ಟ ಆಗುವುದಿಲ್ಲ. ಹೇಗೆ ಅಂತೀರಾ? ಇಲ್ಲಿದೆ ನೋಡಿ ಮಾಹಿತಿ.
ಇತ್ತೀಚೆಗೆಷ್ಟೇ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಹಲ್ಲೆ ಮಾಡಲಾಗಿತ್ತು. ಈ ಹಿನ್ನೆಲೆ ಆ ದೇಶದ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ತಂಡ ಕೆಕೆಆರ್ ಕೈಬಿಟ್ಟಿತ್ತು. ಅವರನ್ನು ಕೊಲ್ಲತ್ತಾ ನೈಟ್ ರೈಡರ್ಸ್ 9.20 ಕೋಟಿ ನೀಡಿ ಖರೀದಿ ಮಾಡಿತ್ತು. ಅವರನ್ನು ಕೈಬಿಟ್ಟಿರುವ ವಿಚಾರಕ್ಕೆ ಬಾಂಗ್ಲಾ ಕಿತಾಪತಿಗಳನ್ನು ಮುಂದುವರೆಸಿದೆ.

ಕೆಕೆಆರ್ ರೆಹಮಾನ್ ಕೈಬಿಡಲು ಕಾರಣವೇನು?: ಬಾಂಗ್ಲಾದ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್ ತಂಡ ಕೆಕೆಆರ್ ಕೈಬಿಡಲು ದೇಶವೇ ಪ್ರಮುಖ ಕಾರಣ. ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡರು ಎನ್ನುವ ಹಾಗೆ ಬಾಂಗ್ಲಾವು ಹಿಂದೂಗಳನ್ನು ಕೆಣಕಿ ಈ ಪರಿಸ್ಥಿತಿ ತಂದಿಟ್ಟುಕೊಂಡಿದೆ. ಹೀಗೆ ತಮ್ಮ ದೇಶದ ಪ್ರಮುಖ ಆಟಗಾರರನ್ನು ಐಪಿಎಲ್‌ನಿಂದಲೇ ಹೊರಬೀಳುವಂತೆ ಮಾಡಿಕೊಂಡಿದೆ.
ನೇರಪ್ರಸಾರ ಬ್ಯಾನ್ ಎಫೆಕ್ಟ್: ಅಷ್ಟೇ ಸಾಲದೆಂಬಂತೆ ಇದೀಗ ಬಾಂಗ್ಲಾ ಸರ್ಕಾರವು ತಮ್ಮ ದೇಶದಲ್ಲಿ ಯಾವುದೇ ಐಪಿಎಲ್ ಪಂದ್ಯಗಳನ್ನು ನೇರಪ್ರಸಾರ ಮಾಡದಂತೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಇದು ಅವರಿಗೆ ಗೊತ್ತಿಲ್ಲ ಅನಿಸುತ್ತದೆ, ಅವರು ಐಪಿಎಲ್ ನೇರಪ್ರಸಾರ ಬ್ಯಾನ್ ಮಾಡಿದರೆ ಭಾರತಕ್ಕೆ ಏನೂ ನಷ್ಟ ಆಗುವುದಿಲ್ಲ ಎಂದು.
ಕೋಟಿ.. ಕೋಟಿ ಲಾಸ್: ವಿಶ್ವದ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಐಪಿಎಲ್ ಕೂಡ ಒಂದಾಗಿದೆ. ಇದರಲ್ಲಿ ಉದ್ಯಮಿಗಳು, ನಟ, ನಟಿಯರು ಹಣದ ಹೊಳೆಯನ್ನೇ ಸುರಿದು ಆಟಗಾರರನ್ನು ಖರೀದಿ ಮಾಡುತ್ತಾರೆ. ಹೊರದೇಶದವರಿಗೆ ಈ ಲೀಗ್‌ನಲ್ಲಿ ಸಿಗುವ ಹಣ ಬೇರೆ ಯಾವ ಕ್ರಿಕೆಟ್ ಲೀಗ್‌ಗಳಲ್ಲೂ ಸಿಗುವುದಿಲ್ಲ. ಅದರಲ್ಲೂ ವೆಸ್ಟ್ ಇಂಡೀಸ್, ಶ್ರೀಲಂಕಾ, ಬಾಂಗ್ಲಾ ಸೇರದಂತೆ ಹಲವು ದೇಶಗಳ ಆಟಗಾರರು ಈ ಲೀಗ್‌ಗೆ ಹೆಚ್ಚು ಅವಲಂಬನೆ ಆಗಿದ್ದಾರೆ. ಯಾಕಂದ್ರೆ ಇದರಿಂದ ಹೆಚ್ಚು ಆದಾಯ ಬರುತ್ತದೆ. ಆ ದೇಶಗಳ ಆಟಗಾರರಿಗೂ ಹಣದ ಅಗತ್ಯ ಹೆಚ್ಚಿದೆ.
ಆದರೆ, ಇದೀಗ ಬಾಂಗ್ಲಾ ಈ ಅವಕಾಶವನ್ನು ಕಳೆದುಕೊಂಡಿದೆ. ಹಿಂದೂಗಳ ಮೇಲೆ ಹಲ್ಲೆ ಮಾಡಿದ ಹಿನ್ನೆಲೆ ಬಾಂಗ್ಲಾ ದೇಶದ ಆಟಗಾರನನ್ನು ಐಪಿಎಲ್ ಕೆಕೆಆರ್ ತಂಡದಿಂದ ಕೈಬಿಡಲಾಗಿದೆ. ಇದರಿಂದ ಆ ಆಟಗಾರ 9.20 ಕೋಟಿ ಕಳೆದುಕೊಂಡಂತಾಗಿದ. ಅಲ್ಲದೆ, ಐಪಿಎಲ್‌ಗೆ ಏನು ಲಾಸ್ ಆಗುವುದಿಲ್ಲ. ಬದಲಿಗೆ ಬಾಂಗ್ಲಾಗೆ ದೊಡ್ಡ ಹೊಡೆತ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ ಬಾಂಗ್ಲಾದ ಯಾವುದೇ ಆಟಗಾರನಿಗೆ ಐಪಿಎಲ್ ಅವಕಾಶ ನೀಡಲಾಗುವುದಿಲ್ಲ. ಹೀಗೆ ತಾನು ತೋಡಿದ ಗುಂಡಿಗೆ ಬಾಂಗ್ಲಾ ತಾನೇ ಬಿದ್ದಿದೆ.
ಇನ್ನೂ "ಅನಿರ್ದಿಷ್ಟಾವಧಿವರೆಗೆ ಐಪಿಎಲ್ ಪ್ರಸಾರವನ್ನು ನಿಷೇಧಿಸುವಂತೆ ಬಾಂಗ್ಲಾದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ದೇಶದ ಟಿವಿ ಚಾನೆಲ್‌ಗಳಿಗೆ ಆದೇಶ ಹೊರಡಿಸಿದೆ. ಬಿಸಿಸಿಐ ನಿರ್ಧಾರದ ಹಿಂದೆ ಯಾವುದೇ ನಿರ್ದಿಷ್ಟ ಕಾರಣ ಇಲ್ಲ. ಮುಸ್ತಾಫಿಜುರ್ ರೆಹಮಾನ್ ಅವರನ್ನ ಐಪಿಎಲ್‌ನಿಂದ ಹೊರಗೆ ಕಳಿಸಿದ್ದು, ದೇಶದ ಜನರಿಗೆ ಅತೀವ ನೋವುಂಟು ಮಾಡಿದೆ. ಆದ್ದರಿಂದ 2026 ರ ಮಾರ್ಚ್ 26ರಿಂದ ಆರಂಭ ಆಗಲಿರುವ ಐಪಿಎಲ್ ಪ್ರಸಾರ ಮಾಡದಂತೆ ನಿಷೇಧ ಹೇರಲಾಗಿದೆ," ಎಂದು ಸಚಿವಾಲಯ ಹೇಳಿದೆ.
"ಮುಂದಿನ ಸೂಚನೆ ಬರುವವರೆಗೆ ಐಪಿಎಲ್‌ನ ಎಲ್ಲಾ ಪಂದ್ಯಗಳು ಹಾಗೂ ಕಾರ್ಯಕ್ರಮಗಳ ಪ್ರಸಾರ ನಿಲ್ಲಿಸುವಂತೆ ಸೂಚಿಸಲಾಗಿದೆ. ಬಿಸಿಸಿಐ ತನ್ನ ನಿರ್ಧಾರಕ್ಕೆ ಸೂಕ್ತ ಕಾರಣ ತಿಳಿಸಿಲ್ಲ. ಆದರೆ ಮುಸ್ತಾಫಿಜುರ್ ರೆಹಮಾನ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರ ಬಾಂಗ್ಲಾ ವಿರೋಧಿ ಭಾವನೆಗೆ ಪುಷ್ಠಿ ಕೊಟ್ಟಿದೆ," ಎಂದು ಬಾಂಗ್ಲಾದೇಶದ ಆರೋಪ ಮಾಡಿದೆ.
ಕಾಮಿಡಿ ಪೀಸ್ ಆದ ಬಾಂಗ್ಲಾ: ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿರುವುದರಿಂದ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಯಾಕಂದ್ರೆ, ಮಾಹಿತಿ ಪ್ರಕಾರ ಬಾಂಗ್ಲಾದ ಕ್ರಿಕೆಟ್‌ನ ವಾರ್ಷಿಕ ಆದಾಯ 423 ಕೋಟಿ ರೂಪಾಯಿ ಇದ್ದರೆ, ಐಪಿಎಲ್‌ನ ಒಂದೇ ಒಂದು ತಂಡ ಆರ್‌ಸಿಬಿ ಫ್ರಾಂಚೈಸಿಯ ಬ್ರ್ಯಾಂಡ್ ವ್ಯಾಲ್ಯೂ 2,259 ಕೋಟಿ ರೂಪಾಯಿ ಇದೆ. ಇಲ್ಲೇ ಅರ್ಥ ಮಾಡಿಕೊಳ್ಳಿ, ಐಪಿಎಲ್ ಒಂದು ತಂಡದ ಆದಾಯದ 10% ಬಾಂಗ್ಲಾದ ಕ್ರಿಕೆಟ್‌ನ ವಾರ್ಷಿಕ ಆದಾಯ ಇಲ್ಲ ಎಂದು. ಬಾಂಗ್ಲಾ ಐಪಿಎಲ್ ಪ್ರಸಾರ ನಿಷೇಧ ಮಾಡಿದ್ರೆ, ಭಾರತಕ್ಕೆ ಯಾವುದೇ ಲಾಸ್ ಆಗುವುದಿಲ್ಲ.
ಅಷ್ಟೇ ಅಲ್ಲದೆ, ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್‌ನ ಬ್ರ್ಯಾಂಡ್ ವ್ಯಾಲ್ಯೂ 2024ರಿಂದ 76,100 ಕೋಟಿ ರೂಪಾಯಿಗಳಿಗೆ ಏರಿಕೆ ಆಗಿದೆ. ಆದ್ದರಿಂದ ಬಾಂಗ್ಲಾ ದೇಶದಲ್ಲಿ ಐಪಿಎಲ್ ಪ್ರಸಾರ ನಿಷೇಧದಿಂದ ಫ್ರಾಂಚೈಸಿಗಳಿಗಾಗಲಿ, ಬಿಸಿಸಿಐ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇದರಲ್ಲೇ ಗೊತ್ತಾಗುತ್ತದೆ ಇಲ್ಲಿ ನಿಜ್ವಾಗ್ಲೂ ಕಾಮಿಡಿ ಪೀಸ್ ಆಗಿದ್ದು ಬಾಂಗ್ಲಾದೇಶದ ಅಂತಾ.












Click it and Unblock the Notifications