ಆರ್‌ಸಿಬಿ ಫೈನಲ್ ಪ್ರವೇಶಿಸುತ್ತಿದ್ದಂತೆ ಪತ್ನಿ ಅನುಷ್ಕಾಗೆ ವಿರಾಟ್ ಕೊಹ್ಲಿ ವಿಶೇಷ ಸಂದೇಶ; ಭಾರೀ ವೈರಲ್
IPL Virat Kohli and Anushka Sharma: ಐಪಿಎಲ್ 2025 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ
ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಸಿದೆ. ಈ ಪಂದ್ಯದಲ್ಲಿ ಗೆದ್ದ ಬಳಿಕ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾಗೆ ವಿಶೇಷ ಸಂದೇಶವೊಂದನ್ನು ರವಾನಿಸಿದ್ದಾರೆ. ಹಾಗಾದ್ರೆ ಅದೇನು ಎಂದು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಗುರುವಾರ ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೇ ಆರ್‌ಸಿಬಿಯು ಪಂಜಾಬ್ ತಂಡವನ್ನು ಮಣಿಸಿ ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿತು. ಪಂದ್ಯ ಗೆದ್ದ ಸಂಭ್ರದಲ್ಲೇ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಸಹ್ನೆಯ ಮೂಲಕ ವಿಶೇಷ ಸಂದೇಶ ಕೊಟ್ಟಿದ್ದಾರೆ.

ಅಭಿ ಪಿಕ್ಚರ್ ಬಾಕಿ ಹೈ ಎನ್ನುವ ಡೈಲಾಗ್‌ನಂತೆ ನಮ್ಮ ರಾಯಲ್ ಟೀಂ ಫೈನಲ್‌ನಲ್ಲಿ ಗೆದ್ದು ಟ್ರೋಫಿ ಎತ್ತುವುದಕ್ಕೆ ಇನ್ನೋಂದೇ.. ಒಂದು ಹೆಜ್ಜೆ ಬಾಕಿ ಇದೆ ಅಷ್ಟೇ ಎನ್ನುವ ರೀತಿಯಲ್ಲಿ ತೋರು ಬೆರಳು ತೋರಿಸಿ ಸನ್ನೆ ಮಾಡುವ ಮೂಲಕ ಪತ್ನಿಅನುಷ್ಕಾ ಶರ್ಮಾ ಅವರಿಗೆ ಸಂದೇಶ ನೀಡಿದರು. ಈ ವೇಳೆ ಅನುಷ್ಕಾ ಓಕೆ ಡನ್ ಎಂದು ಪ್ರತಿಕ್ರಿಯೆಯಾಗಿ ಎರಡು ಹೆಬ್ಬೆರಳುಗಳನ್ನು ತೋರಿಸಿ ನುಸುನಕ್ಕಿದ್ದು, ಈ ಫೋಟೋ ಇದೀಗ ಭಾರೀ ವೈರಲ್ ಆಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2025 ಫೈನಲ್‌ಗೆ ಪ್ರವೇಶಿದೆ. ಇದೇ ಸಂಭ್ರಮದಲ್ಲಿ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕಡೆ ತಿರುಗಿ ಕಪ್ ಗೆಲ್ಲೋಕೆ ಇನ್ನೊಂದೇ ಹೆಜ್ಜೆ ಎಂದು ಸನ್ನೆ ಮಾಡಿದ್ದಾರೆ. ಕೊಹ್ಲಿಯ ಈ ಸಂಭ್ರಮ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ.
ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್‌ಗಳ ಭರ್ಜರಿ ಜಯ ಕಂಡಿತು. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ ಬೆಂಗಳೂರು ತಂಡ 4ನೇ ಫೈನಲ್‌ಗೆ ಪ್ರವೇಶಿಸಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ 14.1 ಓವರ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 101 ರನ್ ಕಲೆಹಾಕಿ 102 ರನ್‌ಗಳ ಸಾಧಾರಣ ಗುರಿ ನೀಡಿಡು. ಆರ್‌ಸಿಬಿ ಈ ಗುರಿಯನ್ನು ಕೇವಲ 10 ಓವರ್‌ಗಳಿಗೆ ತಲುಪಿ ಗೆದ್ದು ಬೀಗಿತು. ಇದೇ ವೇಳೆ ಕೊಹ್ಲಿ ಪತ್ನಿ ಅನುಷ್ಕಾಗೆ ಈ ಸಂದೇಶ ರವಾನೆ ಮಾಡಿದ್ದಾರೆ.
ಆರ್‌ಸಿಬಿ: ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ , ಟಿಮ್ ಸೀಫರ್ಟ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿ.ಕೀ.), ಮಯಾಂಕ್ ಅಗರ್ವಾಲ್, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಲ್.
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಸ್ (ವಿ.ಕೀ.), ಶ್ರೇಯಸ್ ಅಯ್ಯರ್ (ನಾಯಕ), ನೆಹಾಲ್ ವಧೇರಾ, ಶಶಾಂಕ್ ಸಿಂಗ್, ಮಾರ್ಕಸ್ ಸ್ಟೋನಿಸ್, ಉಮರ್ಝಾಯಿ, ಹರ್‌ಪ್ರೀತ್ ಬ್ರಾರ್, ಕೈಲ್ ಜೇಮಿಸನ್, ವಿಜಯ್‌ಕುಮಾರ್ ವೈಶಾಕ್, ಅರ್ಷ್‌ದೀಪ್ ಸಿಂಗ್.












Click it and Unblock the Notifications