RCB vs KKR: ಆರ್‌ಸಿಬಿ, ಕೆಕೆಆರ್ ಅಭ್ಯಾಸಕ್ಕೆ ಮಳೆ ಅಡ್ಡಿ; ಮೊದಲ ಪಂದ್ಯಕ್ಕೆ ಮಳೆ ಆತಂಕ!
ಐಪಿಎಲ್ 2025 ಉದ್ಘಾಟನೆಗೆ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22ರಂದು ಶನಿವಾರ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ತಂಡಕ್ಕೆ ಆರ್ ಸಿಬಿ ಸವಾಲಾಕಲು ಸಜ್ಜಾಗಿದೆ. ಎರಡೂ ತಂಡಗಳು ಈಗಾಗಲೇ ಕಠಿಣ ಅಭ್ಯಾಸ ನಡೆಸಿವೆ. ಆದರೆ ಮೊದಲ ಪಂದ್ಯಕ್ಕೆ ಮುನ್ನ ಮಳೆ ಆತಂಕ ಎದುರಾಗಿದೆ. ಶುಕ್ರವಾರ ಕೂಡ ಅಭ್ಯಾಸ ಮಾಡಲು ಮಳೆ ಅಡ್ಡಿಯಾಗಿದ್ದರಿಂದ ಇಡೀ ಮೈದಾನವನ್ನು ಕವರ್ ಮಾಡಲಾಗಿತ್ತು.
ಶುಕ್ರವಾರ ಮಳೆ ಬಂದಿರುವುದು ಶನಿವಾರದ ಮಳೆ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಶನಿವಾರ ಕೋಲ್ಕತಾದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಅಲ್ಲದೆ ಆರೆಂಜ್ ಅಲರ್ಟ್ ಕೂಡ ಘೋಷಣೆ ಮಾಡಿದ್ದು ವ್ಯಾಪಕ ಮಳೆಯಾಗಲಿದೆ ಎಂದು ಹೇಳಿದೆ.

ಮಳೆ ಸಂಜೆ ವೇಳೆಗೆ ನಿಂತರೂ ಇಡೀ ಮೈದಾನವನ್ನು ಮುಚ್ಚುವುದರಿಂದ ಬೇಗನೆ ಪಂದ್ಯವನ್ನು ಆರಂಭಿಸಬಹುದು. ಆದರೆ 7 ಗಂಟೆಯ ಬಳಿಕ ಜೋರಾಗಿ ಮಳೆ ಬಂದರೆ ಪಂದ್ಯ ಆರಂಭವಾಗುವುದು ತಡವಾಗಲಿದೆ. ಮಳೆ ಹೆಚ್ಚಾದರೆ ಪಂದ್ಯವನ್ನು ರದ್ದು ಮಾಡುವ ಸಾಧ್ಯತೆ ಕೂಡ ಇದೆ.
ಹೇಗಿರಲಿದೆ ಕೋಲ್ಕತಾ ಪಿಚ್?
ಕೋಲ್ಕತಾದಲ್ಲಿ ಮಳೆಯಾಗುತ್ತಿರುವ ಕಾರಣ ಇಬ್ಬನಿ ಪ್ರಮಾಣ ಕಡಿಮೆಯಾಗಲಿದ್ದು, ಎರಡೂ ತಂಡಗಳಿಗೂ ಟಾಸ್ ಮುಖ್ಯವಾಗುವುದಿಲ್ಲ. ಮಳೆ ಬಂದರೆ ಸ್ಪಿನ್ನರ್ ಗಳಿಗೆ ಸ್ವಲ್ಪ ಹಿನ್ನಡೆಯಾಗಲಿದ್ದು, ವೇಗಿಗಳು ಮುಖ್ಯಪಾತ್ರ ವಹಿಸಲಿದ್ದಾರೆ. ಕೆಕೆಆರ್ ಸ್ಪಿನ್ನರ್ ಗಳ ಮೇಲೆ ಹೆಚ್ಚಾಗಿ ಅವಲಂಬನೆಯಾಗಿದ್ದು ಒಂದು ವೇಳೆ ಮಳೆ ಬಂದರೆ ಆರ್ ಸಿಬಿಗೂ ಸಹಾಯವಾಗಲಿದೆ.
ಹೇಗಿರುತ್ತೆ ಪ್ಲೇಯಿಂಗ್ ಇಲೆವೆನ್
ಇದು ಮೊದಲ ಪಂದ್ಯ ಆಗಿರುವ ಕಾರಣ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ. ಆರ್ ಸಿಬಿ ತಂಡದಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದು ಯಾರನ್ನು ಆಡಿಸಲಿದೆ ಎನ್ನುವ ಲೆಕ್ಕಾಚಾರ ಅಭಿಮಾನಿಗಳಲ್ಲಿ ಜೋರಾಗಿದೆ. ದೇವದತ್ ಪಡಿಕ್ಕಲ್ ಅಥವಾ ಸ್ವಪ್ನಿಲ್ ಸಿಂಗ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುವ ಸಾಧ್ಯತೆ ಇದೆ.
ಕೆಕೆಆರ್ ತಂಡ ಕೂಡ ಬಲಿಷ್ಠವಾಗಿದ್ದು ಯಾವ ಪ್ಲೇಯಿಂಗ್ ಆಯ್ಕೆ ಮಾಡಲಿದೆ ಎನ್ನುವುದನ್ನು ನೋಡಬೇಕಿದೆ. ಮನೀಶ್ ಪಾಂಡೆ ಅಥವಾ ಚೇತನ್ ಸಕಾರಿಯಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು.
ಉಭಯ ತಂಡಗಳ ಸಂಭಾವ್ಯ ಆಡುವ ಬಳಗ
ಆರ್‌ಸಿಬಿ: ಫಿಲ್ ಸಾಲ್ಟ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಟಿದಾರ್ (ನಾಯಕ), ಜಿತೇಶ್ ಶರ್ಮಾ, ಲಿಯಾಮ್ ಲಿವಿಂಗ್‌ಸ್ಟೋನ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಯಶ್ ದಯಾಳ್.
ಇಂಪ್ಯಾಕ್ಟ್ ಪ್ಲೇಯರ್: ರಸಿಕ್ ದಾರ್, ಸ್ವಪ್ನಿಲ್ ಸಿಂಗ್, ಸ್ವಸ್ತಿಕ್ ಚಿಕಾರ.
ಕೆಕೆಆರ್: ಕ್ವಿಂಟನ್ ಡಿ ಕಾಕ್, ಸುನಿಲ್ ನರೇನ್, ಅಜಿಂಕ್ಯ ರಹಾನೆ (ನಾಯಕ), ಆಂಗ್‌ಕ್ರಿಶ್ ರಘುವಂಶಿ, ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣದೀಪ್ ಸಿಂಗ್, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಸ್ಪೆನ್ಸರ್ ಜಾನ್ಸನ್.
ಇಂಪ್ಯಾಕ್ಟ್ ಪ್ಲೇಯರ್: ಚೇತನ್ ಸಕಾರಿಯಾ, ಮನೀಶ್ ಪಾಂಡೆ, ಲವ್‌ನಿತ್ ಸಿಸೋಡಿಯಾ.












Click it and Unblock the Notifications