IPL 2025 RCB: ಆರ್‌ಸಿಬಿಗೆ ದೊಡ್ಡ ಆಘಾತ; ನಾಲ್ವರು ಸ್ಫೋಟಕ ಆಟಗಾರರು ತಂಡ ತೊರೆಯುವ ಸಾಧ್ಯತೆ
IPL 2025 RCB: ಭಾರತ-ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ ಬಿಸಿಸಿಐ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿ ಒಂದು ವಾರಕ್ಕೆ ಮುಂದೂಡಿತ್ತು. ಆಟಗಾರರ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿ ಕದನ ವಿರಾಮ ಘೋಷಣೆಯಾಗಿದ್ದು, ಉಳಿದ ಪಂದ್ಯಗಳು ಮತ್ತೆ ಆರಂಭವಾಗುವ ಸಾಧ್ಯತೆಯಿದೆ. ಆದರೆ, ಹೊಸ ವೇಳಾಪಟ್ಟಿ ಬಿಡುಗಡೆ ತಡವಾದ್ರೆ, ಆರ್‌ಸಿಬಿಗೆ ದೊಡ್ಡ ಆಘಾತ ಗ್ಯಾರಂಟಿ. ಯಾಕೆ ಅಂತೀರಾ? ಇಲ್ಲಿದೆ ನೋಡಿ ಕಾರಣ.
ಐಪಿಎಲ್ ವಿಶ್ವದಲ್ಲೇ ಅತ್ಯಂತ ದೊಡ್ಡ ಲೀಗ್ ಆಗಿದ್ದರೆ, ಆರ್‌ಸಿಬಿ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ. ಇದುವರೆಗೂ ಆಡಿದ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ, ಈ ಬಾರಿ ಅಂದರೆ 18ನೇ ಆವೃತ್ತಿಯಲ್ಲಿ ಕಪ್ ಗೆಲ್ಲುವ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಅಷ್ಟರ ಮಟ್ಟಿಗೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ವಿಭಾಗದಲ್ಲಿ ಉತ್ತಮ ಲಯದಲ್ಲಿದೆ. ಆದರೆ ಈ ನಡುವೆಯೇ ತಂಡಕ್ಕೆ ಸಂಕಷ್ಟವೊಂದು ಎದುರಾಗಿದೆ.

ಭಾರತ-ಪಾಕ್ ನಡುವೆ ಯುದ್ಧ ಸನೀವೇಶ ಹಿನ್ನೆಲೆ ಆಟಗಾರರು, ಅಭಿಮಾನಿಗಳು, ಪ್ರಾಂಚೈಸಿಗಳ ದೃಷ್ಟಿಯಿಂದ ಐಪಿಎಲ್ ಟೂರ್ನಿಯನ್ನು ರದ್ದುಪಡಿಸಿ ಮುಂದೂಡಿಕೆ ಮಾಡಲಾಗಿತ್ತು. ಐಪಿಎಲ್‌ನಲ್ಲಿ ಬರೀ ದೇಶದ ಆಟಗಾರರು ಅಷ್ಟೇ ಅಲ್ಲದೆ, ವಿದೇಶಿ ಆಟಗಾರರು ಸಹ ಇದ್ದು, ಇವರ ಭದ್ರತೆ ಹೊಣೆ ದೇಶದ ಮೇಲಿತ್ತು. ಆದ್ದರಿಂದ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. ಅಲ್ಲದೆ, ಶೀಘ್ರದಲ್ಲೇ ಹೊಸ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಬಿಸಿಸಿಐ ಹೇಳಿದೆ. ಒಂದು ವೇಳೆ ತಡವಾದ್ರೆ, ಆರ್‌ಸಿಬಿ ತಂಡದಲ್ಲಿ ಸ್ಫೋಟಕ ಆಟಗಾರರು ತೊರೆಯುವ ಸಾಧ್ಯತೆ ಹೆಚ್ಚಿದೆ.
ಹೊಸ ವೇಳಾಪಟ್ಟಿ ಪ್ರಟಕ ವಿಳಂಬ ಆದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೊಸ ಸಮಸ್ಯೆ ಆಗಬಹುದು. ಯಾಕಂದ್ರೆ, ಕೆಲ ಪ್ರಮುಖ ಆಟಗಾರರು ಅವರ ದೇಶಗಳಲ್ಲಿ ಪಂದ್ಯಗಳಿರುವ ಕಾರಭ ಅಲಭ್ಯರಾಗುವ ಸಾಧ್ಯತೆಯಿದೆ ಇದೆ. ಇದರಿಂದ ತಂಡಕ್ಕೆ ಹೆಚ್ಚು ಹೊಡೆತ ಬೀಳಲಿದೆ.
ಈ ಬಾರಿ ಆರ್ಸಿಬಿ ತಂಡದಲ್ಲಿ ಮೂವರು ಇಂಗ್ಲೆಂಡ್ ಆಟಗಾರರಿದ್ದಾರೆ. ಐಪಿಎಲ್ ಆರಂಭ ತಡ ಆದ್ರೆ, ಮುಂದಿನ ಪಂದ್ಯಗಳಿಗೆ ಸ್ಫೋಟಕ ಆಟಗಾರರಾದ ಲಿಯಾಮ್ ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್ ಮತ್ತು ಫಿಲ್ ಸಾಲ್ಟ್ ಅಲಭ್ಯರಾಗುವ ಸಾಧ್ಯತೆ ಹೆಚ್ಚಿದೆ. ಮೇ 22ರಿಂದ ಇಂಗ್ಲೆಂಡ್ ಹಾಗೂ ಜಿಂಬಾಬೆ ನಡುವೆ ಟೆಸ್ಟ್ ಸರಣಿ ಆರಂಭವಾಗಲಿದೆ. ಅಲ್ಲದೆ, ಮೇ 29ರಿಂದ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವೆ 3 ಪಂದ್ಯಗಳ ಏಕದಿನ ಸರಣಿ ಸಗ ಆರಂಭ ಆಗುತ್ತಿದೆ. ಈ ಸರಣಿಗಳಿಗೆ ಈ ಮೂವರು ಆಯ್ಕೆಯಾದರೆ ಇವರು ಆರ್‌ಸಿಬಿ ತೊರೆದು ಹೋಗಬೇಕಾಗುತ್ತದೆ.
ಮತ್ತೊಂದೆಡೆ ಇಂಗ್ಲೆಂಡ್ ವಿರುದ್ಧದ ಸರಣಿಗೆ ಈಗಾಗಲೇ ವೆಸ್ಟ್ ಇಂಡೀಸ್ ತಂಡವನ್ನು ಘೋಷಣೆ ಮಾಡಲಾಗಿದ್ದು, ಈ ತಂಡದಲ್ಲಿ ಆರ್ಸಿಬಿ ಆಟಗಾರ ರೊಮಾರಿಯೊ ಶೆಫರ್ಡ್ ಸಹ ಕಾಣಿಸಿಕೊಂಡಿದ್ದಾರೆ. ಐಪಿಎಲ್ ತಡವಾಗಿ ಆರಂಭ ಆದರೆ, ಆರ್ಸಿಬಿ ತಂಡದಿಂದ ಶೆಫರ್ಡ್, ಲಿವಿಂಗ್ಸ್ಟೋನ್, ಜೇಕಬ್ ಬೆಥೆಲ್, ಫಿಲ್ ಸಾಲ್ಟ್ ಹೊರಗುಳಿಯುವುದು ಬಹುತೇಕ ಖಚಿತ ಎಂದು ಹೇಲಾಗುತ್ತಿದೆ.
ಇನ್ನು ಈ ನಾಲ್ವರು ಸ್ಫೋಟಕ ಆಟಗಾರರು ಆರ್ಸಿಬಿ ತಂಡ ತೊರೆದರೆ, ತಂಡದಲ್ಲಿ ವಿದೇಶಿ ಆಟಗಾರರಾಗಿ ಉಳಿಯುವುದು ದಕ್ಷಿಣ ಆಫ್ರಿಕಾದ ಲುಂಗಿ ಎನ್ಗಿಡಿ, ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್, ಟಿಮ್ ಡೇವಿಡ್ ಹಾಗೂ ಶ್ರೀಲಂಕಾದ ನುವಾನ್ ತುಷಾರ ಮಾತ್ರ. ಆದ್ದರಿಂದ ಕೊನೇ ಪಂದ್ಯಗಳಿಗೆ ಆರ್ಸಿಬಿ ನಾಲ್ವರು ಬದಲಿಗೆ ಹೊಸ ಆಟಗಾರರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಇದೆ. ಒಟ್ಟಿನಲ್ಲಿ ಅದೇನೇ ಇರಲಿ ನಮ್ಮ ಇಂಡಿಯನ್ ಆರ್ಮಿ ಮಾಡಿದ ಸಾಹಸಕ್ಕೆ ಇಡೀ ಪ್ರಪಂಚವೇ ಬೆಚ್ಚಿದೆ. ಅಷ್ಟರ ಮಟ್ಟಿಗೆ ಪಾಪಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಕೆಲಸವನ್ನು ಮಾಡಿದೆ. ನರಿ ಬುದ್ಧಿ ಪಾಕ್‌ಗೆ ಇಂದು ಅಂತ್ಯ ಕಾಣಿಸಲು ಕೂಡ ನಿರ್ಧಾರ ಮಾಡಿತ್ತು. ಅಷ್ಟರಲ್ಲಿ ಅಮೇರಿಕ ಮಧ್ಯ ಪ್ರವೇಶ ಮಾಡಿದ್ದು, ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.












Click it and Unblock the Notifications