RCB: ಆರ್‌ಸಿಬಿಗೆ ಹೊಸ ನಾಯಕ

IPL 2025 RCB: ಭಾರತ-ಪಾಕ್‌ ನಡುವೆ ಉದ್ವಿಗ್ನತೆ ಕಾರಣ ಐಪಿಎಲ್‌ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಲಾಗಿತ್ತು. ಆದರೆ, ಇದೀಗ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆ ಉಳಿದ ಪಂದ್ಯಗಳನ್ನು ಆಡಿಸಲು ಬಿಸಿಸಿಐ ನಿರ್ಧರಿಸಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿಯಿದ್ದು, ಈ ಮಧ್ಯೆಯೆ ಆರ್‌ಸಿಬಿ ಆಘಾತವೊಂದು ಎದುರಾಗಿದೆ. ನಾಯಕನ ಬದಲಾಯಿಸುನ ನಿರ್ಧಾರವನ್ನು ತಂಡ ತೆಗೆದುಕೊಂಡಿದೆ. ಹಾಗಾದ್ರೆ ಯಾಕೆ ಹಾಗೂ ಹೊಸ ಕ್ಯಾಪ್ಟನ್‌ ಯಾರಾಗಲಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ವೇಳಾಪಟ್ಟಿಯಂತೆ ಆರ್ಸಿಬಿ ಹಾಗೂ ಲಕ್ನೋ ನಡುವಿನ ಪಂದ್ಯ ಸೇರಿದಂತೆ 4 ಐಪಿಎಲ್ ಪಂದ್ಯಗಳು ಇಷ್ಟೊತ್ತಿಗೆ ಮುಗಿದಿರಬೇಕಿತ್ತು. ಆದರೆ, ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಂತೆ ಮೇ 9ರಂದು ಬಿಸಿಸಿಐ ಐಪಿಎಲ್ 2025 ಅನ್ನು ರದ್ದಪಡಿಸಿ ಒಂದು ವಾರಕ್ಕೆ ಮುಂದೂಡಿತು. ಇದೀಗ ಎರಡೂ ರಾಷ್ಟ್ರಗಳ ನಡುವೆ ಪರಿಸ್ಥಿತಿ ಸುಧಾರಿಸಿದ್ದು, ಟೂರ್ನಿಯ ಉಳಿದ ಪಂದ್ಯಗಳನ್ನು ಮತ್ತೆ ಆರಂಭಿಸುವುದಾಗಿ ಬಿಸಿಸಿಐ ಹೇಳಿದೆ. ಇದರ ಮಧ್ಯೆಯೇ ಆರ್‌ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ.

IPL 2025 New captain for RCB

ಆರ್‌ಸಿಬಿಯಲ್ಲಿ ಒಬ್ಬರಾದ ಬಳಿಕ ಒಬ್ಬರು ಗಾಯದಿಂದ ನರಳಾಡುತ್ತಿದ್ದು, ಅವರು ಹೊರಗುಳಿಯುತ್ತಲೇ ಇದ್ದಾರೆ. ಆದರೂ ಒಬ್ಬರು ಹೊರಗುಳಿದರೆ, ಮತ್ತೊಬ್ಬರು ಕೈಹಿಡಿಯುವ ಆಟಗಾರರು ಆರ್‌ಸಿಬಿ ಬಳಿ ಇದ್ದಾರೆ. ಆದರೆ, ಫಾರ್ಮ್‌ನಲ್ಲಿದ್ದವರೇ ಹೊರಗುಳಿದರೆ ತಂಡಕ್ಕೆ ದೊಡ್ಡ ಹೊಡೆತ ಬಿದ್ದಂತಾಗುತ್ತದೆ.

ಇದೀಗ ನಾಯಕ ರಜತ್ ಪಾಟಿದಾರ್ ಗಾಯದಿಂದ ಬಳಲುತ್ತಿರುವ ಹಿನ್ನೆಲೆ ಇವರ ನಾಯಕತ್ವದ ಸ್ಥಾನವನ್ನು ಜಿತೇಶ್ ಶರ್ಮಾ ಅವರಿಗೆ ನೀಡಿತ್ತು. ಆದರೆ, ದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡ ಕಾರಣ ಐಪಿಎಲ್ ಅನ್ನು ಸ್ಥಗಿತಗೊಳಿಲಾಯತು. ಈ ವಿಚಾರವನ್ನು ಜಿತೇಶ್ ಶರ್ಮಾ ಅವರೇ ಹಂಚಿಕೊಂಡಿದ್ದಾರೆ.

ಅಲ್ಲದೆ, ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸಾಮಾಜಿಕ ಜಾಲಾತಣದಲ್ಲಿ ವೀಡಿಯೊವೊಂದನ್ನು ಶೇರ್ ಮಾಡಿಕೊಂಡಿದ್ದು, ತಂಡದ ಎಲ್ಲಾ ಸದಸ್ಯರು ಐಪಿಎಲ್ ರದ್ದುಗೊಳ್ಳುವವರೆಗೂ ತಮ್ಮ ನೆನಪುಗಳ ಬಗ್ಗೆ ಒಬ್ಬೊಬ್ಬರಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ಜಿತೇಶ್ ಶರ್ಮಾ ಕೂಡ ತಮ್ಮ ಅನಿಸಿಕೆಯನ್ನ ಹಂಚಿಕೊಂಡಿದ್ದಾರೆ.

"ನನಗೆ ಆಡಳಿತ ಮಂಡಳಿಯಿಂದ ನಾಯಕತ್ವದ ಆಫರ್ ಸಿಕ್ಕಿದ್ದು ನನ್ನ ಅದೃಷ್ಟ. ನಾನು ಆರ್‌ಸಿಬಿ ತಂಡದ ನಾಯಕತ್ವ ವಹಿಸಿಕೊಳ್ಳುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ದೊಡ್ಡ ಸಂತಸದ ವಿಚಾರವಾಗಿದೆ. ಒಬ್ಬ ಆಟಗಾರ ಮತ್ತು ನಾಯಕನಾಗಿ, ನಾನು ತಂಡದ ಸಂಯೋಜನೆಯ ಬಗ್ಗೆ ಯೋಚಿಸುತ್ತಿದ್ದೆ. ನಾನು ಎರಡ್ಮೂರು ದಿನಗಳ ಕಾಲ ಕೋಚ್ ಮತ್ತು ಆಟಗಾರರೊಂದಿಗೆ ಮಾತನಾಡಿದ್ದೆ. ಬ್ಯಾಟಿಂಗ್ ಕ್ರಮಾಂಕ, ಪಾಯಿಂಟ್ಸ್‌ ಟೇಬಲ್ ಮತ್ತು ಪ್ಲೇಆಫ್ ಮೇಲೆ ಗಮನಹರಿಸಿದ್ದೆ. ಅಲ್ಲದೆ, ನಾನು ಅದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆ," ಎಂದು ಹೇಳಿ ಗಮನ ಸೆಳೆದಿದ್ದಾರೆ.

ರಜತ್ ಪಟಿದಾರ್ ಗಾಯಗೊಂಡಿದ್ದ ಕಾರಣ ಅವರು ಲಕ್ನೋ ವಿರುದ್ಧದ ಪಂದ್ಯಕ್ಕೆ ಗೈರಾಗಲಿದ್ದರು. ಅಂತಹ ಪರಿಸ್ಥಿತಿಯಲ್ಲಿ, ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಅವಕಾಶವನ್ನು ಆಡಳಿತ ಮಂಡಳಿ ಜಿತೇಶ್‌ಗೆ ನೀಡಿತ್ತು. ಇದೀಗ ಅರ್ಧಕ್ಕೆ ರದ್ದಾಗಿದ್ದ ಐಪಿಎಲ್‌ ಟೂರ್ನಿ ಮತ್ತೆ ಮುಂದುವರೆಯುವ ಮುನ್ಸೂಚನೆ ಇದ್ದು, ಆಗಲೂ ನಾಯಕರಾಗಿ ಜಿತೇಶ್‌ ಶರ್ಮಾ ಅವರು ಮುಂದುವರೆಯಲಿದ್ದಾರಾ ಅಥವಾ ರಜತ್ ಪಟಿದಾರ್ ಮರಳಿ ಮತ್ತೆ ಮರಳಲಿದ್ದಾರೆಯಾ ಎಂದು ಕಾದುನೋಡಬೇಕಿದೆ.

ಆರ್‌ಸಿಬಿಯು ಇದುವರೆಗೂ ಆಡಿರುವ 11 ಪಂದ್ಯಗಳಲ್ಲಿ ಮೂರರಲ್ಲಿ ಸೋತು ಉಳಿದ 8 ಪಂದ್ಯಗಳಲ್ಲಿ ಗೆದ್ದು ಪಾಯಿಂಟ್ಸ್‌ ಟೇಬಲ್‌ನಲ್ಲಿ 16 ಅಂಕಗಳನ್ನು ಪಡೆಯುವ ಮೂಲಕ 2ನೇ ಸ್ಥಾನದಲ್ಲಿದೆ. ಆದರೂ ಪ್ಲೇ ಆಫ್‌ಗೇರಲು ಮೂರರಲ್ಲಿ ಇನ್ನೊಂದು ಪಂದ್ಯವನ್ನು ಗೆಲ್ಲಲ್ಲೇಬೇಕಿದೆ.

ಆರ್‌ಸಿಬಿ ಇದುವರೆಗೂ ಆಡಿರುವ 17 ಸೀಸನ್‌ಗಳಲ್ಲೂ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಹಾಗಂತ ಅಭಿಮಾನಿಗಳ ಸಂಖ್ಯೆಯೇನು ಕಡಿಮೆಯಾಗಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಈ ಮೂಲಕ ಐಪಿಎಲ್‌ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವಾಗಿ ಗುರುತಿಸಿಕೊಂಡಿದೆ. ಈ ಬಾರಿ ಆರ್‌ಸಿಬಿಯು ಬ್ಯಾಟಿಂಗ್‌, ಬೌಲಿಂಗ್‌ ಎರಡೂ ವಿಭಾಗದಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದು, ಕಪ್‌ ಗೆಲ್ಲುವ ಭರವಸೆಯನ್ನು ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+