RCB Vs MI Toss: ವಾಂಖೆಡೆಯಲ್ಲಿ ಆರ್‌ಸಿಬಿ ವಿರುದ್ಧ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್: ಬೌಲಿಂಗ್ ಆಯ್ಕೆ
RCB Vs MI Toss: ಐಪಿಎಲ್ 2025ರ ಆವೃತ್ತಿಯ 20ನೇ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಮುಂಬೈ ಇಂಡಿಯನಸ್ ಕಾದಾಡಲಿವೆ. ವಾಂಖೆಡೆಯಲ್ಲಿ ಟಾಸ್ ಗೆದ್ದ ಎಂಐ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಇಂದಿನ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮುಂಬೈ ಕೇವಲ ಒಂದರಲ್ಲಿ ಮಾತ್ರ ಗೆದ್ದಿದೆ. ಆದ್ದರಿಂದ ಇಂದಿನ ಪಂದ್ಯ ಗೆಲ್ಲಲ್ಲೇಬೇಕಾದ ಅನಿವಾರ್ಯ ಇದ್ದು, ಆರ್‌ಸಿಬಿ ವಿರುದ್ಧ ಮಹತ್ವದ ಬದಲಾವಣೆಗಳನ್ನು ಮಾಡಿದೆ.

ಕಳೆದ ಪಂದ್ಯದಲ್ಲಿ ಬೂಮ್ರಾ ಆಡಿರಲಿಲ್ಲ. ಇನ್ನು ಇಂದು ಆರ್‌ಸಿಬಿ ವಿರುದ್ಧ ಆಡಲು ಸಜ್ಜಾಗಿದ್ದಾರೆ. ಇದೀಗ ಮುಂಬೈ ತಂಡವು ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆಲ್ಲುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಎಂಟನೇ ಸ್ಥಾನದಲ್ಲಿದೆ. ಆದ್ದರಿಂದ ಇಂದಿನ ಪಂದ್ಯದಲ್ಲಿ ಗೆದ್ದು ಮೇಲೇರುವ ತವಕದಲ್ಲಿದೆ.
ಮತ್ತೊಂದೆಡೆ ಆರ್‌ಸಿಬಿಯು ಮೊದಲೆರಡು ಪಂದ್ಯದಲ್ಲಿ ಗೆಲುವು ಸಾಧಿಸಿ ಮೂರನೇ ಪಂದ್ಯದಲ್ಲಿ ಸೋಲನುಭವಿಸಿದೆ. ಆದ್ದರಿಂದ ಮುಂಬೈ ವಿರುದ್ಧ ಗೆಲ್ಲಲ್ಲೇಬೇಕೆನ್ನುವ ಹಠದಲ್ಲಿದೆ. ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದಿರುವ ಆರ್‌ಸಿಬಿ ನಾಲ್ಕು ಅಂಕ ಗಳಿಸುವ ಮೂಲಕ ಪಾಯಿಂಟ್ಸ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ.
ವಾಂಖೆಡೆ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ 117 ಪಂದ್ಯಗಳು ನಡೆದಿವೆ. ಇದರಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಹೆಚ್ಚು ಮೇಲುಗೈ ಸಾಧಿಸಿದ ಉದಾಹರಣೆಗಳಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 54 ಬಾರಿ ಗೆದ್ದರೆ, ಚೇಸಿಂಗ್ ಮಾಡಿದ ತಂಡ 63 ಬಾರಿ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮುಂಬೈ ಬೌಲಿಂಗ್ ಆಯ್ಕೆ: ಇದೀಗ ಇಂದು ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಆರ್‌ಸಿಬಿ ಮೊದಲು ಬ್ಯಾಟ್ ಮಾಡಿಲಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಬೇಂಕೆಂದರೆ ಬೃಹತ್ ರನ್‌ಗಳನ್ನು ಕಲೆಹಾಕುವುದು ಅನಿವಾರ್ಯವಾಗಿದೆ.
ವಾಂಖೆಡೆ ಕ್ರೀಡಾಂಗಣ ಬೌಲರ್‌ಗಳಿಗಿಂತ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಸ್ಪಿನ್ನರ್ಗಳಿಗೂ ಅಹ ಅಷ್ಟೇ ಅನುಕೂಲ ಆಗಲಿದೆ. ಈ ಪಿಚ್‌ನಲ್ಲಿ ಗುರಿಯನ್ನು ಬೆನ್ನತ್ತುವುದೇ ಉತ್ತಮ ನಿರ್ಧಾರ ಎಂದು ಹೇಳಲಾಗುತ್ತದೆ. ಇಬ್ಬನಿ ಸಹ ನಿರ್ಣಾಯ ಪಾತ್ರವಹಿಸುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡವು 200ಕ್ಕಿಂತ ಹೆಚ್ಚು ರನ್‌ಗಳನ್ನು ಗಳಿಸಲೇ ಬೇಕಾಗುತ್ತದೆ. ಇಲ್ಲದಿದ್ದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ತಂಡಕ್ಕೆ ಚೇಸ್ ಮಾಡಲು ಸುಲಭವಾಗಲಿದೆ.
ಇದುವರೆಗೂ ಈ ಎರಡೂ ತಂಡಗಳು 33 ಬಾರಿ ಮುಖಾಮುಖಿ ಆಗಿದ್ದು, ಮುಂಬೈ 19 ಮತ್ತು ಆರ್‌ಸಿಬಿ 14 ಗೆಲುವು ಸಾಧಿಸಿವೆ. ಆರ್‌ಸಿಬಿಯು ಕೂಡ ಕಳೆದ ಪಂದ್ಯದಲ್ಲಿ ಗುಜರಾತ್ ವಿರುದ್ಧ ಎಡವಿದೆ. ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಭಾರೀ ಕಳಪೆ ಪ್ರದರ್ಶನ ಕಂಡುಬಂದಿತ್ತು. ಆದ್ದರಿಂದ ಆರಂಭಿಕರಾದ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಆರಂಭ ನೀಡುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.
ಮೊದಲು ಆಡಿದ ಎರಡು ಪಂದ್ಯಗಳಲ್ಲಿ ಈ ಜೋಡಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ್ ಮಾಡಿದ್ದರು. ಆದರೂ, ಗುಜರಾತ್ ವಿರುದ್ಧ ಉತ್ತಮ ಪ್ರದರ್ಶನ ತೋರುವಲ್ಲಿ ಸಂಪೂರ್ಣ ವಿಫಲರಾದರು. ಮುಂಬೈ ವಿರುದ್ಧದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ್ ಮಾಡುವ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ, ಟಿಮ್ ಡೇವಿಡ್, ಮತ್ತು ಕೃನಾಲ್ ಪಾಂಡ್ಯ ಆಡಲಿದ್ದಾರೆ. ಆರ್‌ಸಿಬಿಗೆ ಇದೀಗ ಟಿಮ್ ಡೇವಿಡ್, ಲಿಯಾಮ್ ಲಿವಿಂಗ್‌ಸ್ಟೋನ್ ಪಾರ್ಮ್‌ನಲ್ಲಿ ಇರುವುದು ಪ್ಲಸ್ ಪಾಯಿಂಡ್ ಆಗಿದೆ ಎಂದರೆ ತಪ್ಪಾಗಲಾರದು.












Click it and Unblock the Notifications