IPL 2025: ಈ ದಿನದಂದು ಐಪಿಎಲ್ ಫೈನಲ್; ಸ್ಥಳ ಕೂಡ ಬದಲಾವಣೆ

ಐಪಿಎಲ್ 2025 ಪಂದ್ಯಾವಳಿ ಮತ್ತೆ ಆರಂಭಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸಿದೆ. ಶೀಘ್ರದಲ್ಲೇ ಉಳಿದ ಪಂದ್ಯಗಳನ್ನು ನಡೆಸುವುದಾಗಿ ಹೇಳಿದ್ದು ಎಲ್ಲಾ ಫ್ರಾಂಚೈಸಿಗಳಿಗೂ ಸಿದ್ಧವಾಗುವಂತೆ ಸೂಚನೆ ಕೊಟ್ಟಿದೆ. ಮೊದಲ ವೇಳಾಪಟ್ಟಿಯಂತೆ ಕೋಲ್ಕತಾದಲ್ಲಿ ಫೈನಲ್ ನಡೆಯಬೇಕಿತ್ತು, ಈಗ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಹೆಚ್ಚಿನ ಉದ್ವಿಗ್ನತೆಯ ಕಾರಣದಿಂದಾಗಿ, ಅಧಿಕಾರಿಗಳು ಪಂದ್ಯಾವಳಿಯನ್ನು ಒಂದು ವಾರ ಸ್ಥಗಿತಗೊಳಿಸಬೇಕಾಯಿತು. ಐಪಿಎಲ್ 2025 ರ ಅಮಾನತು ಬಿಸಿಸಿಐ ತಲೆ ಕೆಡಿಸಿಕೊಳ್ಳುವಂತೆ ಮಾಡಿದೆ. ಈಗ ಐಪಿಎಲ್ 2025 ಅನ್ನು ಆದಷ್ಟು ಬೇಗ ಪುನರಾರಂಭಿಸಲು ಬಿಸಿಸಿಐ ನೋಡುತ್ತಿದೆ ಎಂದು ದೃಢಪಡಿಸಲಾಗಿದೆ. ಐಪಿಎಲ್ ಫೈನಲ್ ಪಂದ್ಯವು ಮೇ 25 ರ ಬದಲಾಗಿ ಮೇ 30 ನಡೆಯುವ ಸಾಧ್ಯತೆ ಇದೆ.

Ipl 2025 final shifted from kolkata to ahmedabad

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೇ 25ರಂದು ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಒಂದು ವಾರ ಪಂದ್ಯಾವಳಿ ಸ್ಥಗಿತಗೊಳಿಸಿದ ಕಾರಣ ಫೈನಲ್ ಪಂದ್ಯವನ್ನು ಮೇ 30ರಂದು ನಡೆಸುವ ಸಾಧ್ಯತೆ ಇದೆ. ಈ ದಿನದಂದು ಕೋಲ್ಕತಾದಲ್ಲಿ ಭಾರಿ ಮಳೆ ಮುನ್ಸೂಚನೆ ಇರುವ ಕಾರಣ, ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸುವ ಸಾಧ್ಯತೆ ಇದೆ.

ಪಿಟಿಐ ವರದಿಯ ಪ್ರಕಾರ, ಕೋಲ್ಕತ್ತಾದಿಂದ ಅಹಮದಾಬಾದ್‌ಗೆ ಫೈನಲ್‌ ಪಂದ್ಯವನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಹವಾಮಾನ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ, ಮೇ 30 ರಂದು ಈಡನ್ ಗಾರ್ಡನ್ಸ್‌ನಲ್ಲಿ ಸುಮಾರು ಶೇ. 65 ರಷ್ಟು ಮಳೆಯಾಗುವ ಸಾಧ್ಯತೆಯಿದೆ.

ಶೀಘ್ರದಲ್ಲೇ ಪರಿಷ್ಕೃತ ವೇಳಾಪಟ್ಟಿ

ಈ ವಾರದಲ್ಲೇ ಐಪಿಎಲ್ ಪಂದ್ಯಗಳು ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಬಿಸಿಸಿಐ ಮೇ 16 ರಂದು ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ - ಮೂರು ಸ್ಥಳಗಳಲ್ಲಿ ಪಂದ್ಯಾವಳಿಯನ್ನು ಪುನರಾರಂಭಿಸಲು ನೋಡುತ್ತಿದೆ. ಭಾನುವಾರ ರಾತ್ರಿಯೇ ಪೂರ್ಣ ಪರಿಷ್ಕೃತ ವೇಳಾಪಟ್ಟಿಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ನಾಲ್ಕು ಪ್ಲೇಆಫ್ ಪಂದ್ಯಗಳು ಸೇರಿದಂತೆ ಒಟ್ಟು 16 ಪಂದ್ಯಗಳು ಉಳಿದಿದ್ದು, ಬಿಸಿಸಿಐಗೆ ಕನಿಷ್ಠ ಎರಡು ವಾರಗಳ ಅಗತ್ಯವಿದೆ, ಹೆಚ್ಚಿನ ದಿನ ನಾವು ಎರಡು ಪಂದ್ಯಗಳನ್ನು ನೋಡುವ ಸಾಧ್ಯತೆ ಇದೆ.

ಆರಂಭಿಕ ವೇಳಾಪಟ್ಟಿಯ ಪ್ರಕಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣವು ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಅನ್ನು ಆಯೋಜಿಸಬೇಕಾಗಿತ್ತು. ಈಡನ್ ಗಾರ್ಡನ್ಸ್ ಕ್ವಾಲಿಫೈಯರ್ 2 ಮತ್ತು ಫೈನಲ್ ನಡೆಯಬೇಕಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+