RCB vs PBKS: ಟಾಸ್ ಗೆದ್ದ ಆರ್‌ಸಿಬಿ ಮ್ಯಾಚ್ ಗೆಲ್ಲುತ್ತಾ?

ಆರ್‌ಸಿಬಿ ತಂಡ ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಬೀಗಿದ್ದು, ಈ ಮೂಲಕ ಶುಭಾರಂಭ ಮಾಡಿದೆ. ಹಿಂದಿನ ಪಂದ್ಯದಲ್ಲಿ ಚೆನ್ನೈ ತಂಡದ ಎದುರು ಆರ್‌ಸಿಬಿ ಸೋಲು ಕಂಡಿತ್ತು. ಈಗ 2ನೇ ಪಂದ್ಯ ಆರಂಭವಾಗಿದ್ದು, ಗೆಲ್ಲುವ ನಿರೀಕ್ಷೆಯಲ್ಲಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾದ್ರೆ ಆರ್‌ಸಿಬಿ ಈ ಪಂದ್ಯ ಗೆಲ್ಲುತ್ತಾ? ಪಂಜಾಬ್ ತಂಡದ ಆರಂಭ ಹೇಗಿತ್ತು? ಮುಂದೆ ಓದಿ.

ಆರ್‌ಸಿಬಿ ತಂಡದಲ್ಲಿ ಅತ್ಯುತ್ತಮ ಆಟಗಾರರು ಇದ್ದರೂ ಈವರೆಗೂ ಕಪ್ ಗೆದ್ದಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಆರ್‌ಸಿಬಿ ಕಪ್ ಗೆಲ್ಲಬೇಕು ಅಂತಾ ಕಾಯುತ್ತಿದ್ದಾರೆ. ಆದರೆ ಈ ಆಸೆ ಇನ್ನೂ ಈಡೇರಿಲ್ಲ. ಹೀಗಾಗಿ ಅಭಿಮಾನಿಗಳು ಕೂಡ ಕಳೆದ 16 ವರ್ಷದಿಂದ ಕಾಯುತ್ತಿದ್ದು ಪ್ರತಿ ವರ್ಷ ಕೂಡ ಬೇಸರ ಕಾಡುತ್ತಿದೆ. ಆದರೆ ಈ ಬಾರಿ ಆರ್‌ಸಿಬಿ ಮಹಿಳೆಯರ ತಂಡ ಭಾರಿ ದೊಡ್ಡ ಅಂತರದಲ್ಲಿ ಕಪ್ ಗೆದ್ದು ಬೀಗಿದೆ. ಹೀಗಾಗಿ ಆರ್‌ಸಿಬಿ ಹುಡುಗರ ತಂಡ ಕೂಡ ಈ ಬಾರಿ ಕಪ್ ಗೆಲ್ಲುತ್ತೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ ಅಭಿಮಾನಿಗಳು.

IPL 2024 RCB Have Won The Toss Against Punjab Kings

ಪಂಜಾಬ್ ತಂಡಕ್ಕೆ ಆರಂಭಿಕ ಆಘಾತ!

ಈಗ ಆರ್‌ಸಿಬಿ ತಂಡ ಟಾಸ್ ಗೆದ್ದು, ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿದೆ. ಒಂದು ಕಡೆ ಟಾಸ್ ಸೋತಿರುವ ತಂಡ ಈಗ ತನ್ನ ಮೊದಲ ವಿಕೆಟ್ ಕೂಡ ಕಳೆದುಕೊಂಡಿದೆ. ಜಾನಿ ಬೇರ್ಸ್ಟೋವ್ 6 ಬಾಲ್‌ಗಳಲ್ಲಿ ಕೇವಲ 8 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿದ್ದಾರೆ. 2 ಬೌಂಡರಿ ಸಿಡಿಸಿ ಗಮನವನ್ನು ಸೆಳೆದಿದ್ದ ಜಾನಿ ಬೇರ್ಸ್ಟೋವ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‌ನಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಹಾದಿ ಹಿಡಿದರು.

ಶಿಖರ್ ಧವನ್ ಬಲ ನೀಡುತ್ತಾರಾ?

ಹೀಗೆ ಜಾನಿ ಬೇರ್ಸ್ಟೋವ್ 8 ರನ್ ಗಳಿಸಿ ಪೆವಿಲಿಯನ್ ಗೂಡು ಸೇರಿದ ನಂತರ ಶಿಖರ್ ಧವನ್ ಅವರು 20 ರನ್ ಗಳಿಸಿ ಆಡುತ್ತಿದ್ದು 3 ಬೌಂಡರಿ ಬಾರಿಸಿದ್ದಾರೆ. ಹಾಗೇ ಈ ಜೋಡಿಯನ್ನ ಬೇರೆ ಮಾಡಲು ಆರ್‌ಸಿಬಿ ತಂಡ ಕೂಡ ಬೌಲಿಂಗ್ ಅಖಾಡದಲ್ಲಿ ಬದಲಾವಣೆ ಮಾಡಿದೆ. ಹೀಗೆ ಮುಂದುವರಿದರೆ ಪಂಜಾಬ್ ತಂಡ ಆರ್‌ಸಿಬಿಗೆ ಸವಾಲಿನ ಮೊತ್ತ ಕೊಡುವುದು ಕೂಡ ಕಷ್ಟ ಆಗಲಿದೆ. ಹೀಗಾಗಿ ಆರ್‌ಸಿಬಿ ಆಟಗಾರರು ಪಂಜಾಬ್ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್‌ಗೆ ಕಾದು ಕುಳಿತಿದ್ದಾರೆ.

ಒಟ್ನಲ್ಲಿ ಏನೇ ಆಗಲಿ ಆರ್‌ಸಿಬಿ ಕಪ್ ಗೆಲ್ಲಲಿ, ಈ ಬಾರಿ ಹುಡುಗರ ತಂಡ ಕೂಡ ಕಪ್‌ನ ಗೆದ್ದು ಬೀಗಲಿ ಅನ್ನೋದೆ ಆರ್‌ಸಿಬಿ ಅಭಿಮಾನಿಗಳ ಆಶಯ. ಇದೇ ಕಾರಣಕ್ಕೆ ಆರ್‌ಸಿಬಿಯ ಆಟಗಾರರು ಕೂಡ ಭರ್ಜರಿಯಾಗಿ ಗೇಮ್ ಪ್ಲ್ಯಾನ್ ಮಾಡಿಕೊಂಡಿದ್ದು, ಇದೆಲ್ಲಾ ಯಾವ ರೀತಿ ವರ್ಕೌಟ್ ಆಗುತ್ತೆ ಅಂತಾ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+