ಗೆದ್ದರೂ ಸೋತರೂ ಆರ್‌ಸಿಬಿ.. ಆರ್‌ಸಿಬಿ..! ಇದು ಅಭಿಮಾನಿಗಳ ಮಾತು!

ಬಹುಶಃ ಈ ಜಗತ್ತಿನಲ್ಲಿ ಆರ್‌ಸಿಬಿ ತಂಡಕ್ಕೆ ಸಿಕ್ಕಷ್ಟು ನಿಷ್ಠಾವಂತ ಅಭಿಮಾನಿಗಳು ಯಾವುದೇ ತಂಡಕ್ಕೂ ಸಿಕ್ಕಿಲ್ಲ, ಸಿಕ್ಕೋದಿಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಸೋತರೂ, ಗೆದ್ದರೂ ಜನ ಆರ್‌ಸಿಬಿ ತಂಡಕ್ಕೆ ಹೆಚ್ಚಾಗಿ ಬೆಂಬಲ ನೀಡುತ್ತಾರೆ. ಈಗ ಪಂಜಾಬ್ ತಂಡದ ವಿರುದ್ಧ ಕೂಡ ಆರ್‌ಸಿಬಿ ಟೀಂಗೆ ಅಭಿಮಾನಿಗಳು ಇದೇ ರೀತಿ ಬೆಂಬಲ ನೀಡುತ್ತಿದ್ದಾರೆ. ಗೆದ್ದರೂ ಸೋತರೂ ಆರ್‌ಸಿಬಿ.. ಆರ್‌ಸಿಬಿ..! ಅಂತಿದ್ದಾರೆ ಫ್ಯಾನ್ಸ್.

ಬೆಂಗಳೂರು ತಂಡಕ್ಕೆ ಯಾವಾಗಲೂ, ಆರ್‌ಸಿಬಿ ಫ್ಯಾನ್ಸ್ ಬೆಂಬಲ ನೀಡುತ್ತಾ ಬಂದಿದ್ದಾರೆ. ಸೋತರೂ ಅಥವಾ ಗೆದ್ದರೂ ಆರ್‌ಸಿಬಿ ನಮ್ಮ ತಂಡ ಅನ್ನೋದು ಕನ್ನಡಿಗರ ಮಾತಾಗಿದೆ. ಇನ್ನು ಕಳೆದ 16 ವರ್ಷಗಳಿಂದ ಇದೇ ರೀತಿ ಬೆಂಬಲ ನೀಡುತ್ತಾ ಬಂದಿರುವ ಆರ್‌ಸಿಬಿಯ ಫ್ಯಾನ್ಸ್, ಇಂದು ಕೂಡ ಬೆಂಗಳೂರು ತಂಡಕ್ಕೆ ಬೆಂಬಲ ನೀಡಿ ಕ್ರೀಡಾಂಗಣಕ್ಕೆ ನುಗ್ಗಿದ್ದರು. ಆದರೆ ಆರ್‌ಸಿಬಿ ತಂಡಕ್ಕೆ ಗೆಲುವು ಅಷ್ಟು ಸುಲಭವಾಗಿ ಇರಲಿಲ್ಲ. ಆದರೂ ಆರ್‌ಸಿಬಿ ಟೀಂ ಫ್ಯಾನ್ಸ್ ತಮ್ಮ ತಂಡವನ್ನು ಬಿಟ್ಟುಕೊಡಲೇ ಇಲ್ಲ.

IPL 2024 RCB Fans Saying This About RCB VS Punjab Kings Match

ಸೋಲು & ಗೆಲುವಿನಲ್ಲೂ ಸಾಥ್ ಸಾಥ್!

ಆರ್‌ಸಿಬಿ ಅಭಿಮಾನಿಗಳನ್ನು ನೋಡಿದರೆ ಯಾವುದೇ ಕಾರಣಕ್ಕೂ ಬೆಂಗಳೂರು ತಂಡವನ್ನ ಅವರು ಕೈಬಿಡುವ ಲಕ್ಷಣ ಕಾಣುವುದಿಲ್ಲ. ಅದ್ರಲ್ಲೂ ಆರ್‌ಸಿಬಿ ಸಂಕಷ್ಟಕ್ಕೆ ಸಿಲುಕಿರುವಾಗ ಫ್ಯಾನ್ಸ್ ಮಾತ್ರ ಜೊತೆ ನಿಂತು ಬೆಂಬಲ ನೀಡುತ್ತಾರೆ. ಅದೇ ರೀತಿ ಇಂದು ಕೂಡ ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡಕ್ಕೆ ಭರ್ಜರಿಯಾಗಿ ಬೆಂಬಲ ನೀಡಿ, ಗೆದ್ದರೂ ಸೋತರೂ ಆರ್‌ಸಿಬಿ ಆರ್‌ಸಿಬಿ ಅಂತಾ ಕೂಗಿದ್ದಾರೆ. ಈ ಮೂಲಕ ಆರ್‌ಸಿಬಿ ಗೆದ್ದು ಬೀಗುವಲ್ಲಿ ಪ್ರಮುಖವಾದ, ಪಾತ್ರವನ್ನು ಕೂಡ ಆರ್‌ಸಿಬಿ ಫ್ಯಾನ್ಸ್ ವಹಿಸಿದ್ದಾರೆ.

RCB ಅಭಿಮಾನಿಗಳು ಕಳೆದ 16 ವರ್ಷದಿಂದ ಕಪ್‌ಗೆ ಕಾಯುತ್ತಿದ್ದು, ಪ್ರತಿ ವರ್ಷ ಕೂಡ ಬೇಸರ ಕಾಡುತ್ತಿದೆ. ಆದ್ರೆ ಈ ಬಾರಿ ಆರ್‌ಸಿಬಿ ಪಕ್ಕಾ ಕಪ್ ಗೆಲ್ಲುತ್ತೆ ಅನ್ನೋ ಆಸೆ ಮೂಡಿದೆ. ಹೀಗಿದ್ದಾಗ ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡ ಸೋಲು ಕಂಡಿತ್ತು. ಈ ಸೋಲಿನ ನಡುವೆ ಇಂದು ಪಂಜಾಬ್ ವಿರುದ್ಧ ಗೆಲುವು ಸಾಧಿಸುತ್ತೆ ಆರ್‌ಸಿಬಿ ಅಂತಾ ಫ್ಯಾನ್ಸ್ ಕಾಯುತ್ತಿದ್ದರು. ಆದರೆ ಅವರ ಆಸೆಗೆ ಮ್ಯಾಚ್ ಮಧ್ಯದಲ್ಲಿ ದೊಡ್ಡ ಆಘಾತ ಎದುರಾಗಿತ್ತು.

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಆರ್‌ಸಿಬಿ!

ಆರ್‌ಸಿಬಿ ತಂಡ ಟಾಸ್ ಗೆದ್ದು, ಮೊದಲಿಗೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಂತರ ಪಂಜಾಬ್ ತಂಡಕ್ಕೆ ಆರಂಭದಲ್ಲೇ ಆಘಾತ ಸಿಕ್ಕಿತ್ತು. ಟಾಸ್ ಸೋತಿದ್ದ ಪಂಜಾಬ್, ಮೊದಲ ವಿಕೆಟ್ ಬೇಗ ಕಳೆದುಕೊಂಡಿತ್ತು. ಆದರೆ ಆ ನಂತರ ಶಿಖರ್ ಧವನ್ ಕೊಂಚ ಚೇತರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆ ನಡುವೆ, ಪಂಜಾಬ್ ತಂಡ ಕಂಬ್ಯಾಕ್ ಮಾಡಿತ್ತು. ಅಂತೂ, ಇಂತೂ ಈ ತಂಡ ಭರ್ಜರಿ 176 ರನ್ ಗಳಿಸಿತ್ತು. ಹೀಗೆ 177 ರನ್ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡಕ್ಕೆ, ಗೆಲುವು ಸುಲಭವಾಗಿ ಸಿಗಲೇ ಇಲ್ಲ.

ಕೊಹ್ಲಿ ಅದ್ಭುತ ಅರ್ಧ ಶತಕ

177 ರನ್ ಗುರಿ ಬೆನ್ನತ್ತಿದ್ದ ಆರ್‌ಸಿಬಿ ತಂಡ 26 ರನ್‌ಗೆ ಮೊದಲ ವಿಕೆಟ್, 43 ರನ್‌ಗೆ ತಮ್ಮ 2ನೇ ವಿಕೆಟ್, 86 ರನ್‌ಗೆ 3ನೇ ವಿಕೆಟ್ ಕಳೆದುಕೊಂಡಿತ್ತು. ಆದ್ರೆ ಈ ಎಲ್ಲಾ ಹಂತದಲ್ಲೂ ಗಟ್ಟಿಯಾಗಿ ನಿಂತು ಆಟವಾಡಿದ ವಿರಾಟ್ ಕೊಹ್ಲಿ ಅವರು, ಭರ್ಜರಿ 77 ರನ್ ಗಳಿಸಿದರು. 11 ಬೌಂಡರಿ ಸೇರಿದಂತೆ 2 ಸಿಕ್ಸ್ ಬಾರಿಸಿದ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡಕ್ಕೆ ಗೆಲುವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹೀಗೆ ಆರ್‌ಸಿಬಿ ತಂಡ 2024ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿ ಹೊಸ ಹುಮ್ಮಸ್ಸು ತುಂಬಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+