CSK vs GT: ಶುಭ್‌ಮನ್ ಗಿಲ್, ಸಾಯಿ ಸುದರ್ಶನ್ 'ಸೂಪರ್' ಶತಕ: ಸಿಎಸ್‌ಕೆಗೆ ಬಿಗ್ ಚಾಲೆಂಜ್ ನೀಡಿದ ಟೈಟನ್ಸ್
ಅಹಮದಾಬಾದ್ ನರೇಂದ್ರ ಮೋದಿ ಅಂಗಳದಲ್ಲಿ ಶುಕ್ರವಾರ ಗುಜರಾತ್ ಬ್ಯಾಟ್ಸ್‌ಮನ್‌ಗಳ ಹಾವಳಿ ಜೋರಾಗಿತ್ತು. ಗುಜರಾತ್ ಆರಂಭಿಕರ ಆಟಕ್ಕೆ ಕಡಿವಾಣ ಹಾಕಲು ಚೆನ್ನೈ ಸೂಪರ್ ಕಿಂಗ್ಸ್ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಜಿಟಿ ತಂಡದ ಆರಂಭಿಕ ಆಟಗಾರರು ಶತಕದ ಅಬ್ಬರಕ್ಕೆ ಚೆನ್ನೈ ಬೌಲರ್ಸ್‌ಗಳು ಕಕ್ಕಾಬಿಕ್ಕಿಯಾದರು.
ಟೂರ್ನಿಯುದ್ದಕ್ಕು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಗುಜರಾತ್ ಟೈಟನ್ಸ್ ಟೂರ್ನಿಯ ಕೊನೆಯಲ್ಲಿ ಲಯ ಕಂಡುಕೊಂಡಿತು. ಚೆನ್ನೈ ಸೂಪರ್ ಕಿಂಗ್ಸ್ ಮಾಡಿಕೊಂಡ ಪ್ಲ್ಯಾನ್ ಎಲ್ಲ ಉಲ್ಟಾ ಹೊಡೆಯಿತು. ಹಂತ ಹಂತವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಗುಜರಾತ್ ಆರ್ಭಟಕ್ಕೆ ಚೆನ್ನೈ ಬೌಲರ್ಸ್ ಸ್ಟನ್ ಆದರು.

ಪವರ್ ಫುಲ್ ಬ್ಯಾಟಿಂಗ್
ಆರಂಭದಲ್ಲಿ ರನ್ ಕಲೆ ಹಾಕುವಲ್ಲಿ ಕೊಂಚ ಹಿನ್ನಡೆ ಅನುಭವಿಸಿದರೂ, ಸ್ಥಿರವಾಗಿ ಸ್ಟ್ರೈಕ್ ರೋಟೆಟ್ ಮಾಡುತ್ತಾ ಸಾಗಿದ ಗುಜರಾತ್ ಟೈಟನ್ಸ್ ಜೋಡಿ ಮನಮೋಹಕ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ಪವರ್ ಪ್ಲೇನಲ್ಲಿ ಅಮೋಘ ಬ್ಯಾಟ್ ಮಾಡಿದ ಜೋಡಿ 58 ರನ್ ಕಲೆ ಹಾಕಿತು. ಇಲ್ಲಿಂದ ಜಿಟಿ ಬ್ಯಾಟರ್ಸ್ ಹಿಂತಿರುಗಿ ನೋಡಲೇ ಇಲ್ಲ. ಇದೇ ಬ್ಯಾಟಿಂಗ್ ಧಾಟಿಯಿಂದ ಅಬ್ಬರಿಸಿದ ಸಾಯಿ ಹಾಗೂ ಶುಭ್‌ಮನ್ ಗಿಲ್ 10ನೇ ಓವರ್‌ನಲ್ಲಿ ತಂಡದ ಮೊತ್ತವನ್ನು 100 ರನ್ ಗಡಿ ದಾಟಿಸುವಲ್ಲಿ ಸಫಲರಾದರು.
ಮಿಡ್ಲ್ ಓವರ್‌ಗಳಲ್ಲೂ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಿದ ಜೋಡಿ ಸ್ಪೋಟಿಸಿತು. 11 ರಿಂದ 16 ಓವರ್‌ಗಳ ಮಧ್ಯದಲ್ಲಿ ಈ ಜೋಡಿ 90ಕ್ಕೂ ಹೆಚ್ಚು ರನ್ ಸೇರಿಸಿ ತಂಡ ಸವಾಲಿನ ಮೊತ್ತ ಕಲೆ ಹಾಕುವತ್ತ ದಾಪು ಗಾಲು ಇಡಲು ನೆರವಾಯಿತು.
ದ್ವೀಶತಕದ ಜೊತೆಯಾಟ
ಸಾಯಿ, ಗಿಲ್ ಜೋಡಿಯನ್ನು ಬೇರ್ಪಡಿಸಲು ಸಿಎಸ್‌ಕೆ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಈ ಹಂತದಲ್ಲಿ ಗುಜರಾತ್ ತಂಡದ ಆರಂಭಿಕ ಜೋಡಿ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿತು. ಅಲ್ಲದೆ ಐಪಿಎಲ್‌ನಲ್ಲಿ ಆರಂಭಿಕರಿಬ್ಬರು ಶತಕ ಬಾರಿಸಿದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿಕೊಂಡಿತು.

ಸಾಯಿ ಸುದರ್ಶನ್ ಕೇವಲ 51 ಎಸೆತಗಳಲ್ಲಿ 5 ಬೌಂಡರಿ, 7 ಸಿಕ್ಸರ್ ಸಹಾಯದಿಂದ 103 ರನ್ ಬಾರಿಸಿ ಔಟ್ ಆದರು. ಇವರ ಸ್ಟ್ರೈಕ್ ರೇಟ್ 201.96 ಆಗಿತ್ತು. ಇನ್ನು ನಾಯಕ ಶುಭ್‌ಮನ್ ಗಿಲ್ ಸಹ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 55 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್ ಸಹಾಯದಿಂದ 104 ರನ್ ಬಾರಿಸಿದರು.
ಐಪಿಎಲ್ 59ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 231 ರನ್ ಸೇರಿಸಿತು. ಈ ಮೂಲಕ ಸಿಎಸ್‌ಕೆ ಗೆಲುವಿಗೆ ಸವಾಲಿನ ಗುರಿ ನೀಡಿದೆ.












Click it and Unblock the Notifications