IPL 2024: ಆರ್‌ಸಿಬಿ ತಂಡದ ಈ ಆಟಗಾರ ಬೆಂಗಳೂರಿನ ಗಲ್ಲಿಗಳಲ್ಲಿ ಕ್ರಿಕೆಟ್ ಆಡಿದ್ದು ಏಕೆ?
ಇನ್ನೇನು ಕೆಲವೇ ದಿನದಲ್ಲಿ ಐಪಿಎಲ್ (IPL) ಹವಾ ಶುರುವಾಗಲಿದೆ, ಅದ್ರಲ್ಲೂ ಈ ಬಾರಿ ಆರ್‌ಸಿಬಿ ತಂಡದ ಅಭಿಮಾನಿ ಬಳಗಕ್ಕೆ ಡಬಲ್ ಧಮಾಕ ಸಿಗುತ್ತಿದ್ದು. ಐಪಿಎಲ್ 2024 ರಲ್ಲಿ ಮೊದಲನೇ ಪಂದ್ಯದಲ್ಲೇ ನಮ್ಮ ಬೆಂಗಳೂರು ತಂಡ ಆಡುತ್ತಿದೆ. ಹೀಗಿದ್ದಾಗ ಆರ್‌ಸಿಬಿ ಟೀಂ ಆಟಗಾರ ನೇರವಾಗಿ ಬೆಂಗಳೂರಿನ ಬೀದಿಯಲ್ಲಿ ಕ್ರಿಕೆಟ್ ಆಡಿದ್ದಾರೆ. ಹಾಗಾದರೆ ಯಾರದು? ಆರ್‌ಸಿಬಿ ಆಟಗಾರ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಅಭ್ಯಾಸ ಮಾಡಿದ್ದೇಕೆ? ಅದರ ವಿಡಿಯೋ ನೋಡಲು ಮುಂದೆ ಓದಿ.
ಐಪಿಎಲ್ ಶುರುವಾಯ್ತು ಅಂದ್ರೆ ಭಾರತದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾದಂತೆ. ಹೀಗಾಗಿ ಫ್ಯಾನ್ಸ್ ಕೂಡ ಸಖತ್ ಸೆಲೆಬ್ರೇಷನ್ ಮಾಡುತ್ತಾರೆ. ಅದ್ರಲ್ಲೂ ಬೆಂಗಳೂರು ಅಭಿಮಾನಿಗಳ ಪಾಲಿಗೆ ಐಪಿಎಲ್ ಒಂದು ದೊಡ್ಡ ಸಂಭ್ರಮವೇ ಸರಿ. ಹೀಗಿದ್ದಾಗ ಉದ್ಘಾಟನೆಯ ಪಂದ್ಯ ಕೂಡ ಬೆಂಗಳೂರು ತಂಡದ ಮೂಲಕವೇ ಆಗುತ್ತಿದೆ. ಬೆಂಗಳೂರು ಜನ ಹಾಗೂ ಕನ್ನಡಿಗರಿಗೆ ಆರ್‌ಸಿಬಿ ತಂಡ ಕಣ ಕಣದಲ್ಲೂ ಬೆರೆತು ಹೋಗಿದೆ. ಹೀಗಿದ್ದರೂ ಆರ್‌ಸಿಬಿ ತಂಡ ಮಾತ್ರ ಕಳೆದ 16 ವರ್ಷ ಕಪ್ ಗೆದ್ದೇ ಇಲ್ಲ. ಇದೇ ಕಾರಣಕ್ಕೆ 2024ರಲ್ಲಿ ಬೆಂಗಳೂರು ಟೀಂ ಕಪ್ ಗೆಲ್ಲುತ್ತದೆ ಎಂಬ ಆಸೆ ಅಭಿಮಾನಿಗಳಲ್ಲಿ ಇರುವಾಗಲೇ. ಬೆಂಗಳೂರು ತಂಡದ ಈ ಆಟಗಾರ ಸೀದಾ, ಸೀದಾ ಬೆಂಗಳೂರಿನ ಗಲ್ಲಿಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಯಾರದು ಗಲ್ಲಿಯಲ್ಲಿ ಕ್ರಿಕೆಟ್ ಆಡಿದ್ದು?
ಆರ್‌ಸಿಬಿ ತಂಡ ಅಂದ್ರೆ ಸುಮ್ನೆ ಅಲ್ಲ ಇಡೀ ಜಗತ್ತಿನಲ್ಲೇ ಅತ್ಯಂತ ನಿಯತ್ತಾದ ಅಭಿಮಾನಿ ಬಳಗವನ್ನು ಹೊಂದಿರುವ ಏಕೈಕ ತಂಡ ಆರ್‌ಸಿಬಿ ಅಂತಾರೆ ಫ್ಯಾನ್ಸ್. ಈ ಸಮಯದಲ್ಲೇ, ಆರ್‌ಸಿಬಿ ತಂಡದ ಕ್ಯಾಪ್ಟನ್ ಆಗಿರುವ ಫಾಫ್ ಡು ಪ್ಲೆಸಿಸ್ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿಯೂ ರೌಂಡಿಂಗ್ಸ್ ಹಾಕಿದ್ದಾರೆ. ಬೆಂಗಳೂರಿನ ಗಲ್ಲಿಗಳಲ್ಲಿ ಅಭಿಮಾನಿಗಳ ಜೊತೆಗೆ ಡು ಪ್ಲೆಸಿಸ್ ಕ್ರಿಕೆಟ್ ಆಡಿದ್ದಾರೆ. ಫಾಫ್ ರೋಡ್‌ನಲ್ಲಿ ಕ್ರಿಕೆಟ್ ಆಡುತ್ತಿರುವ ವಿಡಿಯೋ ಒಂದನ್ನು ಸ್ಟಾರ್ ಸ್ಪೋರ್ಟ್ಸ್ ಕನ್ನಡ ಹಂಚಿಕೊಂಡಿದೆ. ಇಲ್ಲೂ ಆರ್‌ಸಿಬಿ ಅಭಿಮಾನಿಗಳು ಅಬ್ಬರಿಸಿದ್ದಾರೆ.
ಬೆಂಗಳೂರು ತಂಡ ಹೀಗಿದೆ ನೋಡಿ
ಆರ್‌ಸಿಬಿ ತಂಡಕ್ಕೆ ಫಾಫ್ ಡು ಪ್ಲೆಸಿಸ್ ಜೊತೆ ಗ್ಲೆನ್ ಮ್ಯಾಕ್ಸ್ವೆಲ್, ವಿಕ್ ಜಾಕ್ಸ್, ಆಕಾಶ್ ದೀಪ್, ರೀಸ್ ಟೋಪ್ಲಿ, ದಿನೇಶ್ ಕಾರ್ತಿಕ್, ಯಶ್ ದಯಾಳ್, ಅನೂಜ್ ರಾವತ್ ಮತ್ತು ಮಹಿಪಾಲ್ ಲೊಮ್ರೊರ್ ಸೇರಿ ಕೋಚ್ ಮತ್ತಿತರರು ಬಂದು ಸೇರಿದ್ದಾರೆ. ಆದರೆ ಇನ್ನೂ ಅನೇಕ ಪ್ರಮುಖ ಆಟಗಾರರು ಇದೀಗ ಆರ್‌ಸಿಬಿ ತಂಡಕ್ಕೆ ಬಂದು ಸೇರಬೇಕಿದೆ. ಹೀಗಾಗಿ ಅಭಿಮಾನಿಗಳು ಈ ಸಮಯದಲ್ಲಿ ಅವರಿಗಾಗಿ ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನದಲ್ಲಿ ಆರ್‌ಸಿಬಿ ಟೀಂ ಹೆಸರು ಕೂಡ ಬದಲಾಗುವ ಸಾಧ್ಯತೆ ದಟ್ಟವಾಗಿದ್ದು, ಭಾರಿ ಕುತೂಹಲ ಮೂಡಿದೆ.

ಒಟ್ನಲ್ಲಿ ಈಗ ನಮ್ಮ ಕನ್ನಡ ನಾಡಿನ ಹೆಮ್ಮೆಯ ತಂಡ ಆರ್‌ಸಿಬಿ ತನ್ನ ಐಪಿಎಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ. ಹಾಗೇ ಇದೇ ಸಮಯದಲ್ಲಿ ಆರ್‌ಸಿಬಿ ತಂಡದ ಕ್ಯಾಪ್ಟನ್ ಸೀದಾ ಬೆಂಗಳೂರು ತಂಡದ ಅಭಿಮಾನಿಗಳ ಮನೆ ಬಾಗಿಲಿಗೆ ಹೋಗಿ ಕ್ರಿಕೆಟ್ ಆಡಿದ್ದಾರೆ. ಈ ಮೂಲಕ ಐಪಿಎಲ್ ಹವಾ ಮತ್ತಷ್ಟು ಜೋರಾಗಿದ್ದು ಈ ಬಾರಿ ನಮ್ಮ ಆರ್‌ಸಿಬಿ ಕಪ್ ಗೆದ್ದೇ ಗೆಲ್ಲುತ್ತೆ ಅಂತಿದ್ದಾರೆ ಅಭಿಮಾನಿಗಳು.












Click it and Unblock the Notifications