MS Dhoni: ಐಪಿಎಲ್‌ನಿಂದ ನಿವೃತ್ತಿಯ ಬಗ್ಗೆ ಪ್ರಶ್ನೆಗೆ ಧೋನಿ ಉತ್ತರ ಏನು ಗೊತ್ತಾ?: ವಿಡಿಯೋ

ಕಿಂಗ್ಸ ತಂಡದ ನಾಯಕ ಎಂಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿ ಮೂರು ವರ್ಷಗಳಾಗಿದೆ. ಆದರೆ ಮಾಹಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಸಕ್ರಿಯವಾಗಿದ್ದಾರೆ. ಆದರೆ ಈ ಬಾರಿಯ ಐಪಿಎಲ್ ಆವೃತ್ತಿ ಎಂಎಸ್ ಧೋನಿಯ ಅಂತಿಮ ಆವೃತ್ತಿ ಎಂದು ಹೇಳಲಾಗುತ್ತಿದೆಯಾದರೂ ಆ ಬಗ್ಗೆ ಮಾಹಿ ಯಾವುದೇ ಸುಳಿವು ನೀಡಿಲ್ಲ. ಅಲ್ಲದೆ ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನಲ್ಲಿ ಧೋನಿ ಅದ್ಭುತ ಲಯದಲ್ಲಿರುವ ಕಾರಣ ಎಂಎಸ್ ಧೋನಿಯ ಅಭಿಮಾನಿಗಳು ಮುಂದಿನ ಆವೃತ್ತಿಯಲ್ಲಿಯೂ ಆಡಲಿದ್ದಾರಾ ಎಂಬ ಕಾತುರದಲ್ಲಿದ್ದಾರೆ.

ಆದರೆ ಮುಂದಿನ ಐಪಿಎಲ್‌ನಲ್ಲಿ ಎಂಎಸ್ ಧೋನಿ ಆಡುತ್ತಾರಾ ಎಂಬುದು ಸದ್ಯದ ಮಟ್ಟಿಗೆ ಅತ್ಯಂತ ಕುತೂಹಲದ ಪ್ರಶ್ನೆಯಾಗಿದೆ. ಸಾಮಾಜಿಕ ಜಾಲತಾಣಗಳು ಸೇರಿದಂತೆ ಅನೇಕ ವೇದಿಕೆಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇದೆ. ಈ ವಿಚಾರವಾಗಿ ಸ್ವತಃ ಎಂಎಸ್ ಧೋನಿಗೂ ಪ್ರಶ್ನೆ ಎದುರಾಯಿತು. ಆದರೆ ಈ ಸಂದರ್ಭದಲ್ಲಿ ಮಾಹಿ ಜಾಣತನದ ಉತ್ತರವನ್ನು ನೀಡುವ ಮೂಲಕ ತಮಾಷೆ ಮಾಡಿದ್ದಾರೆ.

IPL 2023: MS Dhoni reacted funny way for question on his retirement from IPL

ಅಭಿಮಾನಿಯಿಂದ ಎದುರಾಯಿತು ಪ್ರಶ್ನೆ

ಎಂಎಸ್ ಧೋನಿ ಇತ್ತೀಚೆಗೆ ಪ್ರಮೋಷನಲ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದಾಗ ಅಭಿಮಾಣಿಯೊಬ್ಬರು ಐಪಿಎಲ್‌ನಿಂದ ನಿವೃತ್ತಿಯ ಯೋಜನೆಯ ಬಗ್ಗೆ ಪ್ರಶ್ನೆ ಮುಂದಿಟ್ಟರು. ಈ ಸಂದರ್ಭದಲ್ಲಿ ಎಂಎಸ್ ಧೋನಿ ತಮ್ಮದೇ ಶೈಲಿಯಲ್ಲಿ ತಮಾಷೆಯ ಪ್ರತಿಕ್ರಿಯ ನೀಡಿದರಾದರೂ ತಮ್ಮ ನಿವೃತ್ತಿಯ ವಿಚಾರವಾಗಿ ಯಾವುದೇ ಸುಳಿವು ಬಿಟ್ಟುಕೊಡಲಿಲ್ಲ.

IPL 2023 RCB Vs CSK: ಧೋನಿ-ವಿರಾಟ್ ಕೊನೆ ಮುಖಾಮುಖಿ? ಭಾವುಕರಾದ ಅಭಿಮಾನಿಗಳು

ಧೋನಿಯ ಉತ್ತರ ಹೀಗಿತ್ತು!

"ನಿಮೃತ್ತಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಇನ್ನೂ ಸಾಕಷ್ಟು ಸಮಯ ಇದೆ. ಸದ್ಯ ನಮ್ಮ ಮುಂದೆ ಇನ್ನು ಕೂಡ ಸಾಕಷ್ಟು ಪಂದ್ಯಗಳು ಇವೆ. ಇಲ್ಲಿ ನಾನೇನಾದರೂ ಹೇಳಿದರೆ ನಮ್ಮ ಕೋಚ್ ಮೇಲೆ ಒತ್ತಡ ಬೀಳುತ್ತದೆ" ಎಂದು ಎಂಎಸ್ ಧೋನಿ ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ಧೋನಿ ನೀಡಿದ ಈ ಉತ್ತರಕ್ಕೆ ನೆರೆದಿದ್ದ ಅಭಿಮಾನಿಗಳು ಕೂಡ ನಗುವಿನ ಅಲೆಯಲ್ಲಿ ತೇಲಿದರು.

ಕಳೆದ ಎರಡು ಆವೃತ್ತಿಗಳಲ್ಲಿ ಮಂಕಾಗಿದ್ದ ಧೋನಿ

ಎಂಎಸ್ ಧೋನಿ 2019ರ ಏಕದಿನ ವಿಶ್ವಕಪ್‌ನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಮದ ದೂರವುಳಿದರು. 2020ರ ಆಗಸ್ಟ್ 15ರಂದು ಅಂತಾರಾಷ್ಟ್ತೀಯ ಕ್ರಿಕೆಟ್‌ಗೆ ಅವರು ನಿವೃತ್ತಿಯನ್ನು ಕೂಡ ಘೋಷಿಸಿದ್ದರು. ಆದರೆ ಐಪಿಎಲ್‌ನಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಲೇ ಬಂದಿದ್ದಾರೆ. ಆದರೆ ಈ ಹಿಂದಿನ ಎರಡು ಆವೃತ್ತಿಗಳಲ್ಲಿಯೂ ಎಂಎಸ್ ಧೋನಿ ಬ್ಯಾಟಿಂಗ್‌ನಲ್ಲಿ ಮಂಕಾಗಿ ಕಾಣಿಸಿದ್ದರು. ನಿರೀಕ್ಷಿತ ಪ್ರದರ್ಶನ ಬಂದಿರಲಿಲ್ಲ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮಾಹಿ ಅದ್ಭುತವಾಗಿ ಕಾಣಿಸುತ್ತಿದ್ದು ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಸಿಕ್ಸರ್ ಬಾರಿಸಿ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

ಬೆಂಗಳೂರಿನಲ್ಲಿ ಆರ್‌ಸಿಬಿ vs ಸಿಎಸ್‌ಕೆ ಬಹುನಿರೀಕ್ಷಿತ ಪಂದ್ಯ

ಇನ್ನು ಐಪಿಎಲ್‌ನ ಬದ್ಧ ಎದುರಾಳಿಗಳು ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿದೆ. ಈ ಬಾರಿಯ ಐಪಿಎಲ್‌ನಲ್ಲಿ ಈ ಎರಡು ತಂಡಗಳು ಇದೊಂದೇ ಬಾರಿ ಮುಖಾಮುಖಿಯಾಗುತ್ತಿರುವ ಕಾರಣ ಕುತೂಹಲ ಗರಿಗೆದರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+