IPL 2023: ವಿರಾಟ್ ಕೊಹ್ಲಿ ಏನು ಬಾಬರ್ ಅಜಮ್ ಅಲ್ಲ: ಸೈಮನ್‌ ಡೌಲ್‌ಗೆ ಚಳಿ ಬಿಡಿಸಿದ ಅಭಿಮಾನಿಗಳು

ಬಾಬರ್ ಅಜಮ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ಖ್ಯಾತ ವಿವರಣೆಗಾರ ಸೈಮನ್ ಡೌಲ್ ವಿರಾಟ್ ಕೊಹ್ಲಿ ಕುರಿತಂತೆ ಆಡಿರುವ ಮಾತು ಅಭಿಮಾನಿಗಳನ್ನು ಕೆರಳಿಸಿದೆ. ಸೋಮವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) ನಡುವಿನ ಪಂದ್ಯದಲ್ಲಿ ಸೈಮನ್ ಡೌಲ್ ನೀಡಿದ ಹೇಳಿಕೆ ವಿವಾದವಾಗಿದೆ.

ಎಲ್‌ಎಸ್‌ಜಿ ವಿರುದ್ಧ ವಿರಾಟ್ ಕೊಹ್ಲಿ ಅಮೋಘ ಅರ್ಧಶತಕ ಗಳಿಸಿ ಮಿಂಚಿದರು. ಆದರೆ, ಅವರು ಅರ್ಧಶತಕ ಗಳಿಸಲು ಹೆಚ್ಚಿನ ಎಸೆತಗಳನ್ನು ತೆಗೆದುಕೊಂಡರು ಎಂದು ಸೈಮನ್ ಡೌಲ್ ಹೇಳಿದ್ದಾರೆ. "ಕೊಹ್ಲಿ ಉತ್ತಮವಾಗಿ ಪ್ರಾರಂಭಿಸಿದರು, 42 ರನ್‌ಗಳಿಂದ 50 ರನ್‌ ಗಳಿಸಲು 10 ಎಸೆತಗಳನ್ನು ತೆಗೆದುಕೊಂಡರು. ಅವರು ವೈಯಕ್ತಿಕ ದಾಖಲೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರು. ಇನ್ನು ಮುಂದೆ ಈ ಆಟದಲ್ಲಿ ಅದಕ್ಕೆ ಅವಕಾಶವಿಲ್ಲ ಎಂದು ನಾನು ಭಾವಿಸುತ್ತೇನೆ. ಕೈಯಲ್ಲಿ ವಿಕೆಟ್‌ಗಳು ಇದ್ದಾಗ ವೇಗವಾಗಿ ಆಡಬೇಕು" ಎಂದು ಹೇಳಿದರು.

Fans slam Simon Doull

ಸೈಮನ್ ಡೌಲ್ ವಿರಾಟ್ ಕೊಹ್ಲಿ ಈ ರೀತಿ ಕಾಮೆಂಟ್ ಮಾಡಿದ್ದು ಅಭಿಮಾನಿಗಳನ್ನು ಕೆರಳಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗರನ್ನು ಹಿಗ್ಗಾ ಮಗ್ಗಾ ಜಾಡಿಸಿದ್ದಾರೆ. ಕೊಹ್ಲಿ ಎಂದಿಗೂ ತಮ್ಮ ವೈಯಕ್ತಿಕ ದಾಖಲೆಗಾಗಿ ಆಡಿಲ್ಲ ಎಂದು ಹಲವು ಉದಾಹರಣೆಗಳ ಮೂಲಕ ತಿರುಗೇಟು ನೀಡಿದ್ದಾರೆ.

ವಿರಾಟ್ ಕೊಹ್ಲಿ ತಂಡಕ್ಕಾಗಿ ಆಡುವ ಆಟಗಾರ

ಸೈಮನ್ ಅವರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಅಭಿಮಾನಿಯೊಬ್ಬರು, "ವಿರಾಟ್ ಕೊಹ್ಲಿ ಎಂದಿಗೂ ತಮ್ಮ ವೈಯಕ್ತಿಕ ದಾಖಲೆಗಾಗಿ ಕ್ರಿಕೆಟ್ ಆಡುವುದಿಲ್ಲ, ಅವರು ತಂಡಕ್ಕಾಗಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ, ಅವರು ತಮ್ಮ ವಿಕೆಟ್ ಬಿದ್ದ ನಂತರ ಬ್ಯಾಟಿಂಗ್ ಕುಸಿಯುವ ಭಯ ಹೊಂದಿದ್ದರು, ಅಲ್ಲದೆ ಸ್ಪಿನ್ನರ್ ಗಳ ವಿರುದ್ಧ ಅವರು ಎಚ್ಚರಿಕೆಯಿಂದ ಆಡುತ್ತಾರೆ" ಎಂದು ಸಮರ್ಥನೆ ನೀಡಿದ್ದಾರೆ.

"ಅವರು ಆ ಹಂತದಲ್ಲಿ ನಿಧಾನವಾಗಿ ರನ್ ಗಳಿಸಿದರು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಈಗಾಗಲೇ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ತಮ್ಮದೇ ಹಲವು ದಾಖಲೆಗಳನ್ನು ಬರೆದಿರುವ ಅವರು, ವೈಯಕ್ತಿಕ ದಾಖಲೆಗಾಗಿ ಆಡುತ್ತಾರೆ ಎನ್ನುವುದನ್ನು ಒಪ್ಪುವುದಿಲ್ಲ, ಅವರು ಲೆಜೆಂಡ್ ಆಟಗಾರ" ಎಂದು ಮತ್ತೊಬ್ಬ ಅಭಿಮಾನಿ ಕೊಹ್ಲಿಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

"ವಿರಾಟ್ ಕೊಹ್ಲಿ ಸ್ಪಿನ್ ವಿರುದ್ಧ ಆಡಲು ಪರದಾಡುತ್ತಾರೆ ಎನ್ನುವುದನ್ನು ಒಪ್ಪುತ್ತೇನೆ. ಆದರೆ ಅವರು ವೈಯಕ್ತಿಕ ದಾಖಲೆಗಾಗಿ ನಿಧಾನವಾಗಿ ಆಡಿದರು ಎನ್ನುವುದು ನಿಮ್ಮ ಮುಠ್ಠಾಳತನ" ಎಂದು ಹೇಳಿದ್ದಾರೆ. ಸೈಮನ್ ಡೌಲ್ ಸುಮ್ಮನೆ ವಿವಾದ ಮಾಡುತ್ತಿದ್ದಾರೆ. ಪವರ್ ಪ್ಲೇ ಮುಗಿದ ನಂತರ ಸ್ಪಿನ್ನರ್ ಗಳು ಬೌಲಿಂಗ್‌ಗೆ ಬಂದಾಗ ವಿರಾಟ್ ಕೊಹ್ಲಿ ಎಚ್ಚರಿಕೆಯಿಂದ ಆಡಬೇಕಾಯಿತು, ವೈಯಕ್ತಿಕ ದಾಖಲೆಗಾಗಿ ಅಲ್ಲ ಎಂದು ಹೇಳಿದ್ದಾರೆ.

ಈ ಮೊದಲು ಕೂಡ ಸೈಮನ್ ಡೌಲ್ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ವಿರುದ್ಧ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. 2023ರ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಅವರು ಕಡಿಮೆ ಸ್ಟ್ರೈಕ್ ರೇಟ್ ಹೊಂದಿದ್ದಕ್ಕಾಗಿ ಟೀಕೆ ಮಾಡಿದ್ದರು. ಬಾಬರ್ ಅಜಮ್ ತಂಡಕ್ಕಿಂತ ಹೆಚ್ಚಾಗಿ ವೈಯಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದು ಹೇಳುವ ಮೂಲಕ ವಿವಾದ ಮಾಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+