IPL 2023: ಇಂಪಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಅಪಸ್ವರವೆತ್ತಿದ ಡಿಸಿ ನಾಯಕ ಡೇವಿಡ್ ವಾರ್ನರ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಕೆಲ ಮಹತ್ವದ ನಿಮಗಳನ್ನು ಸೇರ್ಪಡೆಗೊಳಿಸಲಾಗಿದೆ. ಅದರಲ್ಲಿ ಮುಖ್ಯವಾಗಿದ್ದು ಇಂಪಾಕ್ಟ್ ಪ್ಲೇಯರ್ ನಿಯಮ. ಫುಟ್ಬಾಲ್‌ನಲ್ಲಿ ಇರವುಂತೆಯೇ ಪ್ರಾರಂಭಿಕ ಆಡುವ ಬಳಗದ ಆಟಗಾರನೊಬ್ಬನ ಬದಲಿಗೆ ಸಬ್ಸ್ಟಟ್ಯೂಟ್ ಆಗಿ 12ನೇ ಆಟಗಾರನಿಗೆ ಆಡುವ ಅವಕಾಶ ಈ ನಿಯಮದಲ್ಲಿ ದೊರೆಯುತ್ತದೆ. ಈ ಹೊಸ ನಿಯಮದ ಬಗ್ಗೆ ಬಹುತೇಕರು ಸಕಾರಾತ್ಮಕವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಆದರೆ ಈ ಇಂಪಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿ ಅಚ್ಚರಿ ಮೂಡಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದ ಟಾಸ್ ಸಂದರ್ಭದಲ್ಲಿ ಮಾತನಾಡಿದ ಡೆಲ್ಲಿ ಕ್ಯಾಪಟಿಲ್ಸ್ ನಾಯಕ ಈ ನಿಯಮ ಗೊಂದಲಕಾರಿ ಹಾಗೂ ಒತ್ತಡವನ್ನುಂಟು ಮಾಡುವ ನಿಯಮ ಎಂದು ಪ್ರತಿಕ್ರಿಯಿಸಿದ್ದಾರೆ. ಇದರ ಜೊತೆಗೆ ಅವರು ಇಂಥಾ ಟೂರ್ನಿಗೆ ಇದು ಸ್ವಾಗತಾರ್ಹ ಎಂದಿದ್ದಾರೆ.

ಟಾಸ್ ಸಂದರ್ಭದಲ್ಲಿ ಡೇಚಿಡ್ ವಾರ್ನರ್ ಬಳಿ ಇಂಪಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಅಭಿಪ್ರಾಯವನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಡೇವಿಡ್ ವಾರ್ನರ್, "ಇದು ಸ್ವಲ್ಪ ಗೊಂದಲಕಾರಿಯಾಗಬಹುದು. ಅಲ್ಲದೆ ಕೆಲ ಸಂದರ್ಭದಲ್ಲಿ ಒತ್ತಡವನ್ನುಂಡು ಮಾಡಲೂ ಬಹುದು. ಆದರೆ ಈ ಟೂರ್ನಿಗೆ ಈ ಸೇರ್ಪಡೆಯನ್ನು ಸ್ವಾಗತಿಸಬೇಕು. ಇಲ್ಲಿ ಹೆಚ್ಚುವರಿಯಾಗಿ ಬ್ಯಾಟರ್ ಅಥವಾ ಬೌಲರ್ ದೊರೆಯುತ್ತಾರೆ" ಎಂದಿದ್ದಾರೆ ಡೇವಿಡ್ ವಾರ್ನರ್.
ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡ ಆರಂಭದಲ್ಲಿ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಈ ಸವಾಲಿನ ಪಿಚ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ತಂಡಕ್ಕೆ ಸವಾಲಿನ ಗುರಿಯನ್ನು ನಿಗದಿಪಡಿಸುವಲ್ಲಿ ಯಶಸ್ವಿಯಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ಮಾರ್ಕಸ್ ಸ್ಟೊಯಿನಿಸ್, ದೀಪಕ್ ಹೂಡಾ, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಆಯುಷ್ ಬಡೋನಿ, ಮಾರ್ಕ್ ವುಡ್, ಜಯದೇವ್ ಉನದ್ಕತ್, ರವಿ ಬಿಷ್ಣೋಯ್, ಅವೇಶ್ ಖಾನ್
ಬೆಂಚ್: ಪ್ರೇರಕ್ ಮಂಕಡ್, ಕೃಷ್ಣಪ್ಪ ಗೌತಮ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯಶ್ ಠಾಕೂರ್, ಡೇನಿಯಲ್ ಸಾಮ್ಸ್, ರೊಮಾರಿಯೋ ಶೆಫರ್ಡ್, ಯುದ್ವೀರ್ ಸಿಂಗ್ ಚರಕ್, ಕರಣ್ ಶರ್ಮಾ, ಮಯಾಂಕ್ ಯಾದವ್, ಅಮಿತ್ ಮಿಶ್ರಾ, ಮನನ್ ವೋಹ್ರಾ
ಡೆಲ್ಲಿ ಕ್ಯಾಪಿಟಲ್ಸ್ ಆಡುವ ಬಳಗ: ಡೇವಿಡ್ ವಾರ್ನರ್ (ನಾಯಕ), ಪೃಥ್ವಿ ಶಾ, ಮಿಚೆಲ್ ಮಾರ್ಷ್, ರಿಲೀ ರೊಸೊವ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಚೇತನ್ ಸಕರಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್
ಬೆಂಚ್: ಫಿಲಿಪ್ ಸಾಲ್ಟ್, ಅಮನ್ ಹಕೀಮ್ ಖಾನ್, ಇಶಾಂತ್ ಶರ್ಮಾ, ಮನೀಶ್ ಪಾಂಡೆ, ಪ್ರವೀಣ್ ದುಬೆ, ಕಮಲೇಶ್ ನಾಗರಕೋಟಿ, ಲಲಿತ್ ಯಾದವ್, ರಿಪಾಲ್ ಪಟೇಲ್, ಯಶ್ ಧುಲ್, ವಿಕ್ಕಿ ಓಸ್ತ್ವಾಲ್, ಅಭಿಷೇಕ್ ಪೊರೆಲ್












Click it and Unblock the Notifications