IPL 2023: ಕ್ವಾಲಿಫಯರ್ 2, ಫೈನಲ್ ಟಿಕೆಟ್‌ಗಾಗಿ ನೂಕಾಟ, ಕಾಲ್ತುಳಿತ!

ಕಳೆದ ಮಾರ್ಚ್ ತಿಂಗಳ ಅಂತ್ಯದಲ್ಲಿ ಆರಂಭಗೊಂಡ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಭಾನುವಾರ ನಡೆಯಲಿರುವ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ.
ಒಂದನೇ ಕ್ವಾಲಿಫಯರ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಫೈನಲ್ ಪ್ರವೇಶಿಸಿದ್ದು, ಈ ಪಂದ್ಯದಲ್ಲಿ ಸೋತ ಗುಜರಾತ್ ಟೈಟನ್ಸ್ ಸದ್ಯ ಎರಡನೇ ಕ್ವಾಲಿಫಯರ್ ಪಂದ್ಯವನ್ನಾಡಲು ಸಜ್ಜಾಗಿದೆ.
ಎರಡನೆ ಕ್ವಾಲಿಫಯರ್ ಪಂದ್ಯ ಇಂದು ( ಮೇ 26 ) ಗುಜರಾತ್‌ನ ಅಹ್ಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ 81 ರನ್‌ಗಳ ಅಂತರದ ಸೋಲನ್ನು ಉಣಿಸಿದ್ದ ಮುಂಬೈ ಇಂಡಿಯನ್ಸ್ ಕಣಕ್ಕಿಳಿಯಲಿದೆ.
ಈ ಎರಡು ಬಲಿಷ್ಟ ತಂಡಗಳ ಕಾದಾಟದಲ್ಲಿ ಗೆಲ್ಲಲಿರುವ ತಂಡ ಫೈನಲ್ ಪ್ರವೇಶಿಸಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಟ್ರೋಫಿಗಾಗಿ ಸೆಣಸಾಡಲಿವೆ. ಹೀಗೆ ಈ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಬಲಿಷ್ಟ ತಂಡವೊಂದು ಸೆಣಸಾಡುವುದು ಖಚಿತವಾಗಿದ್ದು, ಪಂದ್ಯದ ಕ್ರೇಜ್ ಹೆಚ್ಚಿದೆ.
ಇನ್ನು ಈ ಫೈನಲ್ ಪಂದ್ಯಕ್ಕೆ ಇಂದು ನಡೆಯಲಿರುವ ಪಂದ್ಯದಲ್ಲಿ ಯಾವ ತಂಡ ಗೆದ್ದು ಅರ್ಹತೆಯನ್ನು ಗಿಟ್ಟಿಸಿಕೊಳ್ಳಬಹುದು ಎಂಬ ಚರ್ಚೆಗಳು ಒಂದೆಡೆಯಾದರೆ, ಮತ್ತೊಂದೆಡೆ ಅಹ್ಮದಾಬಾದ್‌ನ ಕ್ರಿಕೆಟ್ ಪ್ರಿಯರು ಟಿಕೆಟ್‌ಗಾಗಿ ಸ್ಟೇಡಿಯಂ ಕ್ರಿಕೆಟ್ ಕೌಂಟರ್ ಮುಂದೆ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿ ಕೆಲ ಕ್ರಿಕೆಟ್ ಪ್ರೇಮಿಗಳು ಕಾಲ್ತುಳಿತಕ್ಕೆ ಒಳಗಾದ ಘಟನೆ ನಡೆದಿದೆ.
Poor management by BCCI for Tickets at Ahmedabad. In the digital age is it right to make ticket buyers who are paying thousands of rupees suffer for physical tickets?🤔#IPL #ahmedabad #IPL2023 #TataIPL #MI #CSK #GT pic.twitter.com/7gYqo48EAZ
— CricketGully (@thecricketgully) May 25, 2023
ಟಿಕೆಟ್ ಖರೀದಿಗಾಗಿ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾದ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪ್ರಾಣಕ್ಕಿಂತ ಐಪಿಎಲ್ ಟಿಕೆಟ್ ಮುಖ್ಯವಾಯಿತಾ ಎಂದೆಲ್ಲಾ ಕಾಮೆಂಟ್‌ಗಳು ಈ ವಿಡಿಯೊಗೆ ಬರತೊಡಗಿವೆ. ಇನ್ನು ಇಂತಹ ಪರಿಸ್ಥಿತಿಗೆ ಕಾರಣವಾದ ಆಫ್‌ಲೈನ್ ಟಿಕೆಟ್ ಮಾರಾಟ ವ್ಯವಸ್ಥೆಯ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.
ಇಂದಿನ ಡಿಜಿಟಲ್ ಯುಗದಲ್ಲಿಯೂ ಸಹ ಈ ರೀತಿ ಆಫ್‌ಲೈನ್‌ನಲ್ಲಿ ಟಿಕೆಟ್‌ಗಳನ್ನು ಮಾರಾಟ ಮಾಡುವ ಅಗತ್ಯವಿದೆಯಾ ಎಂದು ಬಿಸಿಸಿಐ ಹಾಗೂ ಸ್ಟೇಡಿಯಂ ವಿರುದ್ಧ ಬರಹಗಳನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.












Click it and Unblock the Notifications