ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IPL 2022 Final : ಮೋದಿ ಸ್ಟೇಡಿಯಂ ತುಂಬಿದ ಪ್ರೇಕ್ಷಕರು, ಹೊಸ ದಾಖಲೆ

|
Google Oneindia Kannada News

ಅಹ್ಮದಾಬಾದ್, ಮೇ 30: ನಿನ್ನೆ ಭಾನುವಾರ ನಡೆದ 2022ರ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಲು ಕ್ರೀಡಾಂಗಣಕ್ಕೆ ದಾಖಲೆ ಸಂಖ್ಯೆಯಲ್ಲಿ ಪ್ರೇಕ್ಷಕರು ನೆರೆದಿದ್ದರು. ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂ ಹೆಚ್ಚೂಕಡಿಮೆ ಭರ್ತಿಯಾಗಿತ್ತು. ಟೂರ್ನಿ ಸಂಘಟಕರು ನೀಡಿದ ಅಧಿಕೃತ ಲೆಕ್ಕದ ಪ್ರಕಾರ 1,04,859 ಮಂದಿ ಪ್ರೇಕ್ಷಕರು ಫೈನಲ್ ಪಂದ್ಯವನ್ನು ಕ್ರೀಡಾಂಗಣದಲ್ಲೇ ವೀಕ್ಷಿಸಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲೇ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಇದಾಗಿದೆ.

ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣ ಕೆಲ ವರ್ಷಗಳ ಹಿಂದಿನವರೆಗೂ ದೊಡ್ಡ ಸ್ಟೇಡಿಯಂ ಎನಿಸಿತ್ತು. ಅಲ್ಲಿ ಲಕ್ಷ ಮಂದಿ ಪ್ರೇಕ್ಷಕರಿಗೆ ಪಂದ್ಯ ವೀಕ್ಷಿಸುವ ಅವಕಾಶ ಇತ್ತು. ತೊಂಬತ್ತರ ದಶಕದಲ್ಲಿ ಅಲ್ಲಿ ಒಂದು ಲಕ್ಷ ಮಂದಿ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ್ದರು ಎಂಬ ಮಾಹಿತಿ ಇದೆ. ಅದರೆ, ಅಧಿಕೃತ ಲೆಕ್ಕ ಇಡಲಾಗಿಲ್ಲ.

ಐಪಿಎಲ್ 2022 ಫೈನಲ್: ರಾಜಸ್ಥಾನ ರಾಯಲ್ಸ್ ಮಣಿಸಿ ಚಾಂಪಿಯನ್ ಆದ ಗುಜರಾತ್ ಟೈಟನ್ಸ್

ಆದರೆ, ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ 1992ರ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯವನ್ನು 87,812 ಮಂದಿ ಪ್ರೇಕಷರು ವೀಕ್ಷಿಸಿದ್ದು ಈವರೆಗಿನ ಅಧಿಕೃತ ದಾಖಲೆಯಾಗಿತ್ತು. ಈಗ ಈ ವರ್ಷದ ಐಪಿಎಲ್ ಫೈನಲ್ ಪಂದ್ಯ ಹೊಸ ದಾಖಲೆ ಬರೆದಿದೆ. 50 ಓವರ್‌ಗಳ ಕ್ರಿಕೆಟ್ ದಾಖಲೆಗಳಲ್ಲಿ 1992ರ ವಿಶ್ವಕಪ್ ಫೈನಲ್ ಪಂದ್ಯದ ಆ ದಾಖಲೆ ಹಾಗೇ ಮುಂದುವರಿಯುತ್ತದೆ. ಆದರೆ, ಒಟ್ಟಾರೆ ಸೀಮಿತ ಓವರ್‌ಗಳ ಕ್ರಿಕೆಟ್ ಪರಿಗಣಿಸಿದಾಗ 2022ರ ಐಪಿಎಲ್ ಫೈನಲ್ ಹೊಸ ದಾಖಲೆ ಬರೆದಿದೆ.

IPL 2022 Final Match: Record Number of People at Ahmadabad Stadium

ಅಹ್ಮದಾಬಾದ್‌ನ ಮೊಟೆರಾದಲ್ಲಿರುವ ಈ ಸ್ಟೇಡಿಯಂ ಹಿಂದೆ ಮೊಟೇರಾ ಸ್ಟೇಡಿಯಂ ಎಂದೇ ಚಿರಪರಿಚಿತವಾಗಿತ್ತು. ಇದರ ನವೀಕರಣವಾಗಿ 2020ರಲ್ಲಿ ಹೊಸ ಅವತಾರ ಪಡೆದ ಕ್ರೀಡಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರು ಇಡಲಾಗಿತ್ತು. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಇದೂ ಒಂದೆನಿಸಿದೆ. ಇದರಲ್ಲಿ 1.32 ಲಕ್ಷ ಮಂದಿ ಪ್ರೇಕ್ಷಕರ ಕೂತು ಪಂದ್ಯ ವೀಕ್ಷಿಸುವ ವ್ಯವಸ್ಥೆ ಇದೆ. ಕೋವಿಡ್ ಕಾರಣಕ್ಕೆ ಇಷ್ಟು ದಿನ ಇಲ್ಲಿ ನಡೆಯುವ ಯಾವುದೇ ಪಂದ್ಯಕ್ಕೂ ಪೂರ್ಣ ಸಂಖ್ಯೆಯಲ್ಲಿ ಪ್ರೇಕ್ಷಕರಿಗೆ ಅನುಮತಿ ನೀಡಲಾಗಿರಲಿಲ್ಲ. ಐಪಿಎಲ್ ಫೈನಲ್‌ಗೆ ಈ ಅವಕಾಶ ನೀಡಲಾಗಿತ್ತು.

ಗುಜರಾತ್ ತಂಡವೇ ವಿಜಯಶಾಲಿ:
ಅಹ್ಮದಾಬಾದ್‌ನಲ್ಲಿ ನಡೆದ ಐಪಿಎಲ್ ಫೈನಲ್‌ನಲ್ಲಿ ಲೋಕಲ್ ಫೇವರಿಟ್ ಗುಜರಾತ್ ಟೈಟಾನ್ಸ್ ತಂಡವೇ ಪ್ರಶಸ್ತಿ ಗೆದ್ದು ಬೀಗಿತು. ಗುಜರಾತ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜತಾರ್ ಟೈಟನ್ಸ್ ತಂಡ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು. ಈ ವರ್ಷವಷ್ಟೇ ಆರಂಭಗೊಂಡ ಗುಜರಾತ್ ಫ್ರಾಂಚೈಸಿಯ ತಂಡ ತನ್ನ ಚೊಚ್ಚಲ ಸೀಸನ್‌ನಲ್ಲೇ ಪ್ರಶಸ್ತಿ ಗೆದ್ದಿದೆ.

IPL 2022 Final Match: Record Number of People at Ahmadabad Stadium

ಹಾರ್ದಿಕ್ ಪಾಂಡ್ಯ ಅವರೂ ಇದೇ ಮೊದಲ ಬಾರಿಗೆ ಐಪಿಎಲ್ ತಂಡದ ನಾಯಕತ್ವದ ವಹಿಸಿದ್ದು. ತಮ್ಮ ಆಲ್‌ರೌಂಡ್ ಆಟದ ಜೊತೆಗೆ ನಾಯಕತ್ವ ಕೌಶಲ್ಯವನ್ನೂ ಹಾರ್ದಿಪ್ ಪಾಂಡ್ಯ ತೋರ್ಪಡಿಸಿದ್ದಾರೆ.

Recommended Video

IPL ಫೈನಲ್ ಪಂದ್ಯದಲ್ಲಿ Hardik Pandya ಗೆ ಶರಣಾದ Sanju Samson ಪಡೆ |#cricket | Oneindia Kannada

(ಒನ್ಇಂಡಿಯಾ ಸುದ್ದಿ)

English summary
IPL 2022 final between Gujarat Titans and Rajasthan Royals in Ahmadabad set a new record attendance for a cricket match, attracting a crowd of 104,859.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X