Get Updates
Get notified of breaking news, exclusive insights, and must-see stories!

Inter-State Hockey Cup 2025: ಇಂದಿನಿಂದ ಬೆಂಗಳೂರಿನಲ್ಲಿ 'ಚೈರೋಸ್ ಭೀಮಯ್ಯ ಹಾಕಿ ಕಪ್ 2025' ಪಂದ್ಯಾವಳಿ, ಟೀಂ ವಿವರ

ಬೆಂಗಳೂರು, ಜನವರಿ 10: ರಾಜಧಾನಿ ಬೆಂಗಳೂರಿನ ಹಾಕಿ ಕ್ರೀಡಾಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ನಗರದಲ್ಲಿ ಇಂದಿನಿಂದ ಮಾರ್ಷಲ್ ಕೆ.ಎಂ. ಕರಿಯಪ್ಪ ಹಾಕಿ ಅರೆನಾನಲ್ಲಿ ಬಹು ನಿರೀಕ್ಷಿತ 6ನೇ ಆವೃತ್ತಿಯ 'ಚೈರೋಸ್ ಭೀಮಯ್ಯ ಹಾಕಿ ಕಪ್ 2025' ಪಂದ್ಯಾವಳಿಗಳು ನಡೆಯಲಿವೆ. ವೀಕೆಂಡ್ ನಲ್ಲಿ ಮೋಜು, ಮಸ್ತಿಗೆ ಬೇರೆ ಬೇರೆ ಸ್ಥಳಗಳಿಗೆ ಹೋಗುವವರಿಗೆ ಈ ಬಾರಿ ಹಾಕಿ ಕಣ್ತುಂಬಿಕೊಳ್ಳುವ ಅವಕಾಶ ದೊರೆತಿದೆ.

ಕರ್ನಾಟಕ ಹಾಕಿ ಅಸೋಸಿಯೇಷನ್‌ ಹಾಗೂ ಕೂರ್ಗ್ ಚಾಲೆಂಜರ್ಸ್ ಚಿಕ್‌ಪೆಟ್ ಅಸೋಸಿಯೇಷನ್ (CCCA) ಸಹಯೋಗದಲ್ಲಿ ಈ ಅಂತರ್‌-ರಾಜ್ಯ ಪಂದ್ಯಾವಳಿ 5-ಎ-ಸೈಡ್ ಮಾದರಿಯಲ್ಲಿ ಭಾರತೀಯ ಹಾಕಿ ಪ್ರದರ್ಶನ ನಡೆಯಲಿದೆ ಎಂದು ಸಿಸಿಸಿಎ ಶುಕ್ರವಾರ ಮಾಹಿತಿ ನೀಡಿದೆ.

Inter-State Hockey Cup 2025 Kicks Off in Bengaluru with 20 Teams See More

ಹಾಕಿ ಕಪ್‌ ಪಂದ್ಯಾವಳಿಯಲ್ಲಿ ಒಟ್ಟು 180 ಆಟಗಾರರನ್ನೊಳಗೊಂಡ ಒಟ್ಟು 20 ತಂಡಗಳು ಭಾಗವಹಿಸಲಿದ್ದಾರೆ.

ಇಂದಿನಿಂದ ಜನವರಿ 12 ರವರೆಗೆ ಪಂದ್ಯಾವಳಿ ನಡೆಯಲಿದೆ. ಭಾನುವಾರ ವಿಜೇತರನ್ನು ಘೋಷಿಸಲಾಗುತ್ತದೆ ಎಂದು ಸಂಘದ ಮುಖ್ಯಸ್ಥರ ತುಳಿಸಿದ್ದಾರೆ.

ಈ ಪ್ರಮುಖ ಪಂದ್ಯಾವಳಿಗಳಲ್ಲಿ ಮಾಜಿ ಭಾರತೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ವಿ.ಎಸ್. ವಿನಯ, ಅಮರ್ ಐಯಮ್ಮ, ನಿತಿನ್ ತಿಮ್ಮಯ್ಯ ಮತ್ತು ನಿಕ್ಕಿನ್ ತಿಮ್ಮಯ್ಯ ಅವರು ಸಹ ಭಾಗವಹಿಸಲಿದ್ದಾರೆ. ಜನವರಿ 12 ರಂದು ನಡೆಯುವ ಅಂತಿಮ ಸುತ್ತು ನಡೆಯಲಿದೆ.

ಅಂತಿಮ ಸುತ್ತಿನ ಬಳಿಕೆ ಹಾಕಿ ಪಂದ್ಯಾವಳಿಗಳ ವಿಜೇತ ತಂಡ ಪದ್ಮಶ್ರೀ ಮತ್ತು ಮಾಜಿ ಭಾರತೀಯ ಹಾಕಿ ಆಟಗಾರ ಎಂ.ಪಿ. ಗಣೇಶ್ ಹಾಗೂ ಧನರಾಜ್‌ ಪಿಳ್ಳೈ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ.

ಸಂಘಟಕರನ್ನು ಪ್ರತಿನಿಧಿಸಿದ ಸಿಸಿಸಿಎ ಅಧ್ಯಕ್ಷ ಕೆ.ಡಿ. ಗಣಪತಿ ಅವರು ಮಾತನಾಡಿ, ಜನವರಿ 10 ರಿಂದ 12 ರವರೆಗೆ ಬೆಂಗಳೂರಿನಲ್ಲಿ 5-ಎ-ಸೈಡ್ ಚೇರೋಸ್ ಭೀಮಯ್ಯ ಹಾಕಿ ಕಪ್‌ನ 6 ನೇ ಆವೃತ್ತಿ ಘೋಷಿಸಲಾಗಿದೆ, ಇದಕ್ಕೆ ಕ್ಯೂನೆಟ್‌ ಅವರ ಪ್ರಾಯೋಜಕ್ವ ನೀಡಿದ್ದು, ಸ್ಪರ್ಧೆ ನಡೆಸಲು ಉತ್ಸಾಹ ಹೆಚ್ಚಿದೆ ಎಂದರು.

ಪ್ರತಿಭೆಗಳ ಪ್ರದರ್ಶನಕ್ಕೆ ವೇದಿಕೆ

ಈ ಪಂದ್ಯಾವಳಿಯು ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಬೆಂಬಲಿಸಲು ಮತ್ತು ಭಾರತದಾದ್ಯಂತದ ಆಟಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ನಮ್ಮ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಜೊತೆಗೆ ಈ ಅದ್ಭುತ ಕ್ರೀಡೆಯ ಬೆಳವಣಿಗೆ ಮತ್ತು ಗುರುತಿಸುವಿಕೆ ಉತ್ತೇಜಿಸುತ್ತದೆ ಎಂದು ಹೇಳಿದರು.

ಕ್ಯೂನೆಟ್ ಇಂಡಿಯಾ ವಲಯದ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಸಿ.ನಿಶ್ಚಲ್ ಅವರು ಮಾತನಾಡಿ, ಭಾರತೀಯ ನೆಲದ ದೇಸಿ ಆಟವಾದ ಹಾಕಿ ಆಟವನ್ನು ಬೆಳೆಸುವ ಅಗತ್ಯವಿದೆ. ಹೀಗಾಗಿ ಹಾಕಿ ಆಟಕ್ಕೆ ನಮ್ಮ ಪ್ರಾಯೋಜಿಕ್ವತ ಸದಾ ಇರಲಿದೆ. ಹಾಕಿ ಆಟವನ್ನು ಜಾಗತಿಕವಾಗಿ ಪ್ರಸಿದ್ಧಿ ಆಟವನ್ನಾಗಿ ಮಾಡುವತ್ತ ಎಲ್ಲರ ಸಹಕಾರ ಅಗತ್ಯವಿದೆ ಎಂದು ಕೋರಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+