Paris Olympics: ಶುಕ್ರವಾರ ಭಾರತೀಯ ಕ್ರೀಡಾಪಟುಗಳ ಭಾಗವಹಿಸುವ ಕ್ರೀಡೆಗಳ ವಿವರ, ಸಮಯ
ಭಾರತ ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಸೊಗಸಾದ ಪ್ರದರ್ಶನವನ್ನು ನೀಡುತ್ತಿದೆ. ಯುವ ಕ್ರೀಡಾಪಟುಗಳು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುತ್ತಿದ್ದಾರೆ. ಕೆಲವು ಅನುಭವಿ ಆಟಗಾರರು ಹಿನ್ನಡೆಯನ್ನು ಅನುಭವಿಸಿದ್ದಾರೆ. ಶುಕ್ರವಾರ ಭಾರತ ಯಾವೆಲ್ಲಾ ಪಂದ್ಯಗಳಲ್ಲಿ ಭಾಗವಹಿಸಲಿದೆ ಎಂಬ ವೇಳಾ ಪಟ್ಟಿ ಇಲ್ಲಿದೆ.
ಗುರುವಾರ 50 ಮೀಟರ್ ರೈಫಲ್ ತ್ರಿ ಪೋಜಿಷನ್‌ನಲ್ಲಿ ಭಾರತದ ಸ್ವಪ್ನಿಲ್ ಅಮೋಘ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿದ್ದರು. ಇನ್ನು ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್‌ನಲ್ಲಿ ಲಕ್ಷ್ಯ ಸೇನ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುಂಪು ಹಂತದ ಪುರುಷರ ಹಾಕಿಯಲ್ಲಿ ಹಾಗೂ ಮಹಿಳೆಯರ ಸಿಂಗಲ್ಸ್ ಪ್ರಿ ಕ್ವಾರ್ಟರ್ ಫೈನಲ್ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಆಟಗಾರರು ನಿರಾಸೆ ಅನುಭವಿಸಿದ್ದಾರೆ.

ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದು ಸಾಧನೆ ಮಾಡಿರುವ ಭಾರತದ ಯುವ ಶೂಟರ್ ಮನು ಭಾಕರ್ ಮತ್ತೊಮ್ಮೆ ಅಂಗಳಕ್ಕೆ ಪ್ರವೇಶಿಸಲಿದ್ದಾರೆ. ಇಂದು ಮಧ್ಯಾಹ್ನ 12.30ಕ್ಕೆ ಇವರು ಮಹಿಳೆಯರ 25 ಮೀಟರ್ ಪಿಸ್ತೂಲ್ ವಿಭಾಗದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಇವರು ಭಾಗವಹಿಸಲಿದ್ದು, ಎಲ್ಲರ ಚಿತ್ತ ಕದ್ದಿದೆ.
ಭಾರತದ ಕ್ರೀಡಾ ಪಟುಗಳು ಭಾಗವಹಿಸುವ ಕ್ರೀಡೆಗಳ ವಿವರ
12.30 PM, ಗಾಲ್ಫ್, ಶುಭಾಂಕರ್ ಶರ್ಮಾ, ಗಗನ್‌ಜೀತ್
12.30 PM, ಮಹಿಳೆಯರ 25 ಮೀಟರ್ ಪಿಸ್ತೂಲ್ ಅರ್ಹತಾ ಸುತ್ತು
1.00 PM, ಪುರುಷರ ಸ್ಕೀಟ್ ಅರ್ಹತೆ
1.20 PM, ಆರ್ಚರಿ, ರಿಕರ್ವ್ ಮಿಕ್ಸ್ ಈವೆಂಟ್
1.30 PM, ಜುಡೋ, ಮಹಿಳೆಯರ 78 ಕೆಜಿ ವಿಭಾಗ
1.50 PM, ಪುರುಷರ ಸ್ಕಲ್ ಫೈನಲ್
3.30 PM, ಮಹಿಳೆಯರ 25 ಮೀಟರ್ ಪಿಸ್ತೂಲ್ ರೆಪಿಡ್ ಅರ್ಹತಾ ಸುತ್ತು
3.45 PM, ಮಹಿಳೆಯರ ಸಿಲೀಂಗ್
4.45 PM, ಹಾಕಿ, ಭಾರತ ಹಾಗೂ ಆಸ್ಟ್ರೇಲಿಯಾ
6.30 PM, ಪುರುಷರು ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್
9.40 PM, ಮಹಿಳೆಯರ 5000 ಮೀ ಹೀಟ್ 1
10.06 PM, ಮಹಿಳೆಯರ 5000 ಮೀ ಹೀಟ್ 2
11.40 PM, ಪುರುಷರ ಶಾಟ್ ಪುಟ್ ಕ್ವಾಲಿಫಿಕೇಷನ್












Click it and Unblock the Notifications