ಶ್ರೀಲಂಕಾ ಪ್ರವಾಸಕ್ಕೆ ಇಂದು ತಂಡ ಪ್ರಕಟ? ಕನ್ನಡಿಗನಿಗೆ ಸಿಗುತ್ತಾ ನಾಯಕತ್ವ?
ಅಮೆರಿಕ ಹಾಗೂ ವೆಸ್ಟ್ ಇಂಡೀಸ್‌ನಲ್ಲಿ ನಡೆದ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿರುವ ಟೀಮ್ ಇಂಡಿಯಾ, ಜಿಂಬಾಬ್ವೆ ಪ್ರವಾಸದಲ್ಲೂ ಭರ್ಜರಿ ಪ್ರದರ್ಶನ ನೀಡಿದೆ. ಈಗ ಬ್ಲ್ಯೂ ಬಾಯ್ಸ್ ಮತ್ತೊಂದು ಸವಾಲಿಗೆ ಸಿದ್ಧರಾಗುತ್ತಿದ್ದಾರೆ. ಭಾರತ ತಂಡ ಶ್ರೀಲಂಕಾ ಪ್ರವಾಸ ಬೆಳೆಸಲಿದ್ದು, ಜುಲೈ 27 ರಿಂದ ಪಂದ್ಯಗಳು ಆರಂಭವಾಗುತ್ತವೆ.
ಭಾರತ ತಂಡ ಶ್ರೀಲಂಕಾ ಪ್ರವಾಸದಲ್ಲಿ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಇದರಲ್ಲಿ ಮೂರು ಪಂದ್ಯಗಳ ಟಿ-20 ಮತ್ತು ಮೂರು ಪಂದ್ಯಗಳ ಏಕದಿನ ಪಂದ್ಯಗಳ ಸರಣಿಗಳು ಸೇರಿವೆ. ಶ್ರೀಲಂಕಾ ಪ್ರವಾಸಕ್ಕೆ ಟೀಂ ಇಂಡಿಯಾ ತಂಡವನ್ನು ಇಂದು ಪ್ರಕಟಿಸುವ ಸಾಧ್ಯತೆ ಇದ್ದು, ಯಾರೆಲ್ಲಾ ಕಮ್‌ಬ್ಯಾಕ್ ಮಾಡಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ಜೋರಾಗಿವೆ.

ಕ್ರಿಕ್‌ನೆಕ್ಷಟ್‌ನ ಸುದ್ದಿಗಳ ಪ್ರಕಾರ, ಭಾರತೀಯ ತಂಡದ ತಂಡದ ಅಧಿಕೃತ ಘೋಷಣೆ ಮಂಗಳವಾರ ಆಗುವ ಸಾಧ್ಯತೆ ಇದೆ. ಈ ಪ್ರವಾಸದ ಮೂಲಕ ಹೆಡ್ ಮಾಸ್ಟರ್ ರೂಪದಲ್ಲಿ ಗೌತಮ್ ಗಂಭೀರ್ ತಮ್ಮ ಕಾರ್ಯವನ್ನು ಆರಂಭಿಸಲಿದ್ದಾರೆ. ಈ ಸರಣಿಯಿಂದ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿದ್ದರಿಂದ ಯಾವ ಯುವ ಆಟಗಾರರಿಗೆ ಅವಕಾಶ ಸಿಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.
ಇಬ್ಬರು ನಾಯಕರು?
ಶ್ರೀಲಂಕಾ ಪ್ರವಾಸದ ವೇಳೆ ಟೀಮ್ ಇಂಡಿಯಾಕ್ಕೆ ಇಬ್ಬರು ನಾಯಕರು ಸಿಗುವ ಸಾಧ್ಯತೆ ಇದೆ. ಟಿ-20 ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಿದರೆ, ಏಕದಿನ ತಂಡದ ನಾಯಕರಾಗಿ ಕನ್ನಡಿಗ ಕೆಎಲ್ ರಾಹುಲ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಜಿಂಬಾಬ್ವೆ ಸರಣಿಯಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿರುವ ಸಂಜು ಸ್ಯಾಮ್ಸನ್ ಎರಡೂ ಮಾದರಿಗಳಲ್ಲಿ ತಂಡವನ್ನು ಸೇರಿಕೊಳ್ಳಬಹುದು. ಜಿಂಬಾಬ್ವೆ ವಿರುದ್ಧ ಸ್ಥಿರ ಪ್ರದರ್ಶನ ನೀಡಿದ್ದರಿಂದ ತಂಡದಲ್ಲಿ ಸ್ಥಾನ ಸಿಗಬಹುದು.
ಒಂದೇ ಸ್ಥಾನಕ್ಕೆ ಇಬ್ಬರ ಫೈಟ್
ವರದಿಗಳ ಪ್ರಕಾರ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಂಡಕ್ಕೆ ಮರಳಿಲಿದ್ದು, ಬಲ ಹೆಚ್ಚಿಸಲಿದ್ದಾರೆ. ವಾಷಿಂಗ್ಟನ್ ಸುಂದರ್ ಹಾಗೂ ಶಿವಂ ದುಬೆ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.

ವಾಶಿಂಗ್ಟನ್ ಹಾಗೂ ಶಿವಂ ದುಬೆ ಇಬ್ಬರೂ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಭಾಗವಹಿಸಿದ್ದರು. ಟಿ20 ವಿಶ್ವಕಪ್ ತಂಡದ ಭಾಗವಾಗಿದ್ದ, ಶಿವಂ ದುಬೆ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ರಿಯಾನ್ ಪರಾಗ್, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾ ಅವಕಾಶ ವಂಚಿರಾಗಬಹುದು.
ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ನಡುವಣ ಪಂದ್ಯದ ವಿವರ:
3 ಟಿ20 ಪಂದ್ಯಗಳ ವೇಳಾ ಪಟ್ಟಿ
| ಕ್ರಮ ಸಂಖ್ಯೆ | ದಿನಾಂಕ | ಸ್ಥಳ & ಸಮಯ |
| 1 | ಜುಲೈ 27 | ಪಲ್ಲೆಕೆಲೆ, ರಾತ್ರಿ 7ಕ್ಕೆ |
| 2 | ಜುಲೈ 28 | ಪಲ್ಲೆಕೆಲೆ, ರಾತ್ರಿ 7ಕ್ಕೆ |
| 3 | ಜುಲೈ 30 | ಪಲ್ಲೆಕೆಲೆ, ರಾತ್ರಿ 7ಕ್ಕೆ |
3 ಏಕದಿನ ಪಂದ್ಯಗಳ ವೇಳಾ ಪಟ್ಟಿ
| ಕ್ರಮ ಸಂಖ್ಯೆ | ದಿನಾಂಕ | ಸ್ಥಳ & ಸಮಯ |
| 1 | ಆಗಸ್ಟ್ 2 | ಕೋಲಂಬೊ, ಮಧ್ಯಾಹ್ನಾ 2.30ಕ್ಕೆ |
| 2 | ಆಗಸ್ಟ್ 4 | ಕೋಲಂಬೊ, ಮಧ್ಯಾಹ್ನಾ 2.30ಕ್ಕೆ |
| 3 | ಆಗಸ್ಟ್ 7 | ಕೋಲಂಬೊ, ಮಧ್ಯಾಹ್ನಾ 2.30ಕ್ಕೆ |












Click it and Unblock the Notifications