SAFF ಚಾಂಪಿಯನ್‌ಶಿಪ್: ಇತಿಹಾಸ ಬರೆದ ಭಾರತ ತಂಡ- ಕ್ರೀಡಾಂಗಣದಲ್ಲಿ ಮೊಳಗಿದ 'ವಂದೇ ಮಾತರಂ' ಘೋಷ
ಬೆಂಗಳೂರು ಜುಲೈ 5: ಬೆಂಗಳೂರಿನ ಕಂಠೀರವಾ ಕ್ರೀಡಾಂಗಣದಲ್ಲಿ ಮಂಗಳವಾರ (ಜುಲೈ 4) 2023ನೇ ಸಾಲಿನ ಸ್ಯಾಫ್ ಫುಟ್ಬಾಲ್ ಫೈನಲ್ ಪಂದ್ಯದ ರೋಚಕ ಹಣಾಹಣಿಯಲ್ಲಿ 5-4ರಿಂದ ಪೆನಾಲ್ಟಿ ಶೂಟೌಟ್ ಜಯಿಸಿದ ಭಾರತ ತಂಡ ಚಾಂಪಿಯನ್ ಪಟ್ಟವನ್ನು ತಮ್ಮಲೇ ಉಳಿಸಿಕೊಂಡು ಸಂಭ್ರಮಿಸಿದೆ. ಮಾತ್ರವಲ್ಲದೆ ಇತಿಹಾಸದಲ್ಲಿ 9ನೇ ಬಾರಿ ಟ್ರೋಫಿ ಗೆದ್ದು ದಾಖಲೆ ನಿರ್ಮಿಸಿದೆ. ಈ ವೇಳೆ ಕ್ರೀಡಾಂಗಣದಲ್ಲಿ 'ವಂದೇ ಮಾತರಂ' ಮೊಳಗಿತು.
The Bengaluru crowd singing 'Vande Mataram' after India became SAFF Champions. pic.twitter.com/uufTHpciqO
— Mufaddal Vohra (@mufaddal_vohra) July 4, 2023
ದಕ್ಷಿಣ ಏಷ್ಯಾ ಫುಟ್ಬಾಲ್ ಕಾನ್ಫೆಡರೇಷನ್ ಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ-ಕುವೈತ್ ಮುಖಾಮುಖಿಯಾಗಿದ್ದವು. ಬೆಂಗಳೂರಿನಲ್ಲಿ ನಡೆದ ಈ ಪಂದ್ಯದಲ್ಲಿ ಸುನಿಲ್ ಛೆಟ್ರಿ ನೇತೃತ್ವದ ಭಾರತ ತಂಡ ಬಲಿಷ್ಠ ಕುವೈತ್ ವಿರುದ್ಧ ಜಯ ಸಾಧಿಸಿದೆ. ಇದರೊಂದಿಗೆ ಭಾರತ 9ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಇದಕ್ಕೂ ಮುನ್ನ 26 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಕ್ರೀಡಾಂಗಣದಲ್ಲಿ ವಂದೇ ಮಾತರಂ ಹಾಡಿದರು.

ಈ ರೋಚಕ ಆಟದಲ್ಲಿ ಉಭಯ ತಂಡಗಳು ತಲಾ 1 ಗೋಲಿನಿಂದ ಸಮಬಲ ಸಾಧಿಸಿದ್ದವು. ಪಂದ್ಯ ಮೊದಲ ಕ್ಷಣದಿಂದಲೂ ರೋಚಕತೆಯಿಂದ ಕೂಡಿದ ಪರಿಣಾಮವಾಗಿ ಪೂರ್ಣ ಅವಧಿ ಅಂತ್ಯಕ್ಕೆ 1-1ರಿಂದ ಸಮಬಲಗೊಂಡಿತು. ಪೆನಾಲ್ಟಿ ಶೂಟೌಟ್ ನಲ್ಲಿ ಫಲಿತಾಂಶ ನಿರ್ಧಾರಗೊಂಡ ಪಂದ್ಯದಲ್ಲಿ ಗೋಲ್ ಕೀಪರ್ ಗುರುಪ್ರೀತ್ ಸಂಧು ಅವರ ಚಮತ್ಕಾರದ ಪ್ರದರ್ಶನದಿಂದ ಸುನೀಲ್ ಛೇಟ್ರಿ ಬಳಗ 5-4 ರಿಂದ ಜಯಿಸಿ ಟ್ರೋಫಿ ಗೆದ್ದು ಸಂಭ್ರಮಿಸಿದರೆ, ಚೊಚ್ಚಲ ಚಾಂಪಿಯನ್ ಮುಕುಟ ಗೆಲ್ಲಬೇಕೆಂಬ ಕುವೈತ್ ಕನಸು ಕನಸಾಗಿಯೇ ಉಳಿಯಿತು.
Hero Tri-Nation Cup ✅
— Indian Football Team (@IndianFootball) July 4, 2023
Hero Intercontinental Cup ✅
Bangabandhu SAFF Championship ✅
Hat-trick of championships for 🇮🇳 🤩#KUWIND ⚔️ #IndianFootball ⚽️ pic.twitter.com/AaXq26vXik
ಪಂದ್ಯವನ್ನು ಭಾರತ 5-4 ಅಂತರದಿಂದ ಗೆದ್ದುಕೊಂಡಿತು. ಇದಕ್ಕೂ ಮುನ್ನ ಭಾರತ 1993, 1997, 1999, 2005, 2009, 2011, 2021, 2015ರಲ್ಲಿ ಚಾಂಪಿಯನ್ ಆಗಿತ್ತು. ಚಾಂಪಿಯನ್ ಪಟ್ಟ ಗೆದ್ದ ಭಾರತ ತಂಡಕ್ಕೆ ಸುಮಾರು 41 ಲಕ್ಷ ರೂಪಾಯಿ ಹಾಗೂ ರನ್ನರ್ ಅಪ್ ತಂಡ ಕುವೈತ್‌ಗೆ ಸುಮಾರು 20.5 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.
ಪ್ರಮುಖ ಕ್ರೀಡಾ ಪಟುಗಳು ಮತ್ತು ಕೇಂದ್ರ ಸಚಿವ ಕಿರಣ್ ರಿಜಿಜ್ ಅವರು ವಿಜೇತ ಭಾರತ ತಂಡವನ್ನು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಭಿನಂದಿಸಿದ್ದಾರೆ. ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಷನ್ ಚಾಂಪಿಯನ್ ಷಿಪ್ (ಸ್ಯಾಫ್) 2023ರಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆ ಕಂಠೀರವಾ ಕ್ರೀಡಾಂಗಣದಲ್ಲಿ ನೆರೆದಿದ್ದ ಭಾರತೀಯ ಫುಟ್ಬಾಲ್ ಪ್ರೇಮಿಗಳು ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮ ಆಚರಿಸಿದ್ದಲ್ಲದೆ ವಂದೇ ಮಾತರಂ ಗೀತೆ ಹಾಡುವ ಮೂಲಕ ದೇಶ ಪ್ರೇಮ ವ್ಯಕ್ತಪಡಿಸಿದರು.












Click it and Unblock the Notifications