ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನ್ ವಿರುದ್ಧ 'ವಿರಾಟ್' ರೂಪ ತೋರಿದ ಕೊಹ್ಲಿ ಸೆಂಚೂರಿ ಯಾರಿಗೆ ಅರ್ಪಣೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 8: ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ವಿರಾಟ್ ರೂಪ ತೋರಿದ ಕೊಹ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಏಷ್ಯಾ ಕಪ್ 2022ರ ಸೂಪರ್ ಫೋರ್ ಮುಖಾಮುಖಿಯಲ್ಲಿ ವಿರಾಟ್ ಕೊಹ್ಲಿ ಅಫ್ಘಾನಿಸ್ತಾನದ ವಿರುದ್ಧ ತಮ್ಮ 71ನೇ ಶತಕ ಸಿಡಿಸಿದ್ದು, ಟೀಮ್ ಇಂಡಿಯಾಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.

83 ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ ಬರೋಬ್ಬರ 1020 ದಿನಗಳ ನಂತರದಲ್ಲಿ ಮೊದಲ ಬಾರಿಗೆ ಭರ್ಜರಿಯಾಗಿ ಬ್ಯಾಟ್ ಬೀಸಿದ್ದು, 100 ಗಡಿ ದಾಟಿದ್ದಾರೆ. ಶತಕದ ಜೊತೆಗೆ ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ, ತನ್ನ ಶತಕವನ್ನು ಪತ್ನಿ ಅನುಷ್ಕಾ ಶರ್ಮಾ ಹಾಗೂ ಪುತ್ರಿ ವಾಮಿಕಾಗೆ ಅರ್ಪಿಸಿದ್ದಾರೆ.

3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ3 ವರ್ಷಗಳ ಬಳಿಕ ಶತಕ ಸಿಡಿಸಿದ ಕೊಹ್ಲಿ, ಮುಗಿಲು ಮುಟ್ಟಿದ ಹರ್ಷ

Indian Cricketer Virat Kohli Dedicates His 71st Century To his wife and dauther

ನಾನು ಈ ಶತಕವನ್ನು ನನ್ನ ಹೆಂಡತಿ ಮತ್ತು ನನ್ನ ಮಗಳಿಗೆ ಅರ್ಪಿಸುತ್ತೇನೆ ಎಂದು ಖಾಸಗಿ ವಾಹನಿಗೆ ನೀಡಿದ ಸಂದರ್ಶನದಲ್ಲಿ ವಿರಾಟ್ ಕೊಹ್ಲಿ ಹೇಳಿಕೆ ನೀಡಿದ್ದಾರೆ. ಇನ್ನೊಂದು ಕಡೆ ವಿರಾಟ್ ಆಟಕ್ಕೆ ಭೇಷ್ ಭೇಷ್ ಎನ್ನುತ್ತಿರುವ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ.

ಭಾರತಕ್ಕೆ ಭರ್ಜರಿ ಓಪನಿಂಗ್:
ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಭರ್ಜರಿ ಆರಂಭ ಒದಗಿಸಿಕೊಟ್ಟರು. ಕೊನೆಯವರೂ ಕ್ರೀಡಾಂಗಣದಲ್ಲಿ ಬಿರುಗಾಳಿಯಂತೆ ಅಬ್ಬರಿಸಿದ ಕಿಂಗ್ ಕೊಹ್ಲಿ, ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು. ನಿಗದಿತ 20 ಓವರ್ ಗಳಲ್ಲಿ ಭಾರತವು 2 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು. ಇದರಲ್ಲಿ 61 ಎಸೆತವನ್ನು ಎದುರಿಸಿದ ವಿರಾಟ್ ಕೊಹ್ಲಿ 6 ಸಿಕ್ಸರ್, 12 ಬೌಂಡರಿ ಸೇರಿದಂತೆ ಒಟ್ಟು 122 ರನ್ ಬಾರಿಸಿದರು. ನಾಯಕ ಕೆಎಲ್ ರಾಹುಲ್ 62 ರನ್ ಗಳಿಸಿದರೆ, ರಿಷಬ್ ಪಂತ್ ಅಜೇಯ 20 ರನ್ ಬಾರಿಸಿದರು.

ಭಾರತದ ಎದುರು ವೈಫಲ್ಯ ಅನುಭವಿಸಿದ ಅಫ್ಘಾನಿಸ್ತಾನ:
ಇತ್ತೀಚಿಗೆ ಪಾಕಿಸ್ತಾನ್ ಎದುರಿನ ಪಂದ್ಯದಲ್ಲಿ ಬೊಂಬಾಟ್ ಪ್ರದರ್ಶನ ತೋರಿದ ಅಫ್ಘಾನಿಸ್ತಾನದ ಆಟಗಾರರು ಭಾರತದ ಎದುರು ಮುಗ್ಗರಿಸಿದರು. ಬೌಲಿಂಗ್ ವಿಭಾಗದಲ್ಲಿ ಎಡವಿಡ ತಂಡವು ಬ್ಯಾಟಿಂಗ್ ನಲ್ಲೂ ಅಷ್ಟಾಗಿ ಮಿಂಚಲಿಲ್ಲ. 20 ಓವರ್ ಆಡಿದ ಅಫ್ಘಾನಿಸ್ತಾನದ ಆಟಗಾರರು ಒಟ್ಟಾಗಿ ಗಳಿಸಲು ಸಾಧ್ಯವಾಗಿದ್ದು ಮಾತ್ರ 111 ರನ್. ಅಷ್ಟರಲ್ಲೇ 8 ವಿಕೆಟ್ ಕಳೆದುಕೊಂಡ ತಂಡವು ಭಾರತದ ಎದುರು ಸೋಲೊಪ್ಪಿಕೊಂಡಿತು. ಅಫ್ಘಾನಿಸ್ತಾನದ ಪರವಾಗಿ ಇಬ್ರಾಹಿಂ ಜದ್ರಾನ್ 64 ರನ್ ಗಳಿಸಿದರೆ, ರಶೀದ್ ಖಾನ್ 15, ಮಜೀಬ್ 18 ರನ್ ಬಾರಿಸಿದರು. ಇದರ ಹೊರತಾಗಿ ಯಾವೊಬ್ಬ ಆಟಗಾರರು ಎರಡಂಕಿ ರನ್ ಗಳಿಸಲಿಲ್ಲ.

English summary
Indian Cricketer Virat Kohli Dedicates His 71st Century To his wife Anushka Sharma and dauther Vamika. Here Read India Afghanistan T-20 Match Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X