ಕೂ ಆಪ್ ಸೇರಿದ ಭಾರತೀಯ ಕ್ರಿಕೆಟ್ ದಿಗ್ಗಜ ವೀರೇಂದ್ರ ಸೆಹ್ವಾಗ್
ಬೆಂಗಳೂರು, ಅಕ್ಟೋಬರ್ 5: ಕ್ರಿಕೆಟ್ ಲೋಕದ ದಿಗ್ಗಜ ವೀರೇಂದ್ರ ಸೆಹ್ವಾಗ್ ಭಾರತದ ಅತಿದೊಡ್ಡ ಬಹುಭಾಷಾ ಮೈಕ್ರೋ ಬ್ಲಾಗಿಂಗ್ ಆಪ್ - ಕೂ ಸೇರಿದ್ದಾರೆ.
@VirenderSehwag ಹ್ಯಾಂಡಲ್ ಬಳಸಿ ತಮ್ಮಆಗಮನದ ಬಗ್ಗೆ ಮೊದಲ ಕೂನಲ್ಲಿ ಹಂಚಿಕೊಂಡರು. 'ಹೇಗೆ ಐಪಿಎಲ್ 2021ರಲ್ಲಿ ಬೆಂಗಳೂರು, ದೆಹಲಿ ಮತ್ತು ಚೆನ್ನೈ ಪ್ಲೇಆಫ್ ಪ್ರವೇಶಿಸಿವೆ ಹಾಗೆ ನಾನೂ ಕೂ ಕ್ರೀಡಾಂಗಣವನ್ನು ಪ್ರವೇಶಿಸಿದ್ದೇನೆ' ಎಂದು ಸೆಹ್ವಾಗ್ ಕೂ ಮಾಡಿದ್ದಾರೆ.
ಐಪಿಎಲ್ ಪಂದ್ಯಗಳನ್ನು ವಿಮರ್ಶಿಸುವ ಆನ್ಲೈನ್ ಸರಣಿಯಾದ #DejaViru ಬಗ್ಗೆ ತಮ್ಮ ಕೂ ವಿನಲ್ಲಿ ಉಲ್ಲೇಖಿಸಿದ್ದಾರೆ. ಸೆಹ್ವಾಗ್ ಅವರ ಕೂ ಪ್ರವೇಶವು ಬಳಕೆದಾರರಿಗೆ ಭಾರತೀಯ ಭಾಷೆಗಳಲ್ಲಿ ಲೈವ್ ಆಕ್ಷನ್ ಮತ್ತು ಮ್ಯಾಚ್ ಕಾಮೆಂಟರಿಯನ್ನು ತಿಳಿಯುವುದಕ್ಕೆ ಉತ್ಸಾಹ ತರುತ್ತದೆ.

ಯುಎಇ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17 ರಿಂದ ಟಿ 20 ವಿಶ್ವಕಪ್ ಆರಂಭವಾಗಲಿದ್ದು, ಈ ಸಂದರ್ಭದಲ್ಲಿ ಸೆಹ್ವಾಗ್ ಕೂ ಸೇರಿರುವುದು ಕ್ರಿಕೆಟ್ ಪ್ರೇಮಿಗಳಿಗೆ ದುಪ್ಪಟ್ಟು ಸಂಭ್ರಮ ದೊರೆಯಲಿದೆ. ಕೂ ಸೇರಿದ ಕೆಲವೇ ಗಂಟೆಗಳಲ್ಲಿ ಕ್ರಿಕೆಟ್ ಮತ್ತು ಟ್ರೆಂಡಿಂಗ್ ವಿಷಯಗಳ ಬಗ್ಗೆ ಚುರುಕಾದ ಪ್ರತಿಕ್ರಿಯೆಗಳು ಮತ್ತು ಚಮತ್ಕಾರಿ ಕಾಮೆಂಟ್‌ಗಳಿಗೆ ಹೆಸರುವಾಸಿಯಾದ ಸೆಹ್ವಾಗ್ ಅಭಿಮಾನಿಗಳಿಂದ ಅದ್ಭುತ ಪ್ರತಿಕ್ರಿಯೆ ಪಡೆದರು!
ವೇದಿಕೆಗೆ ಸೆಹ್ವಾಗ್ ಅವರನ್ನು ಸ್ವಾಗತಿಸಿದ ಕೂ ವಕ್ತಾರರು,''ಕ್ರಿಕೆಟ್ ಕೇವಲ ಒಂದು ಆಟವಲ್ಲ - ಭಾರತೀಯರ ಬದುಕು ಮತ್ತು ಉಸಿರಿನ ಜೊತೆಯಲ್ಲಿ ಬೆರೆತ ಭಾವ. ನಮ್ಮ ಸಾಂಸ್ಕೃತಿಕ ಮತ್ತು ಭಾಷಾ ವೈವಿದ್ಯತೆಗಳನ್ನು ಮೀರಿ ನಮ್ಮೆಲ್ಲರನ್ನು ಒಟ್ಟಿಗೆ ಬಂಧಿಸುವ ಅಭಿವ್ಯಕ್ತಿ. ಹಾಗೆಯೇ, ಕೂ ಬಹುಭಾಷೆಯ ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಆಗಿದ್ದು, ಭಾರತೀಯರು ತಮ್ಮ ಸ್ಥಳೀಯ ಭಾಷೆಗಳಲ್ಲಿ ತಮ್ಮನ್ನು ತಾವು
ಅಭಿವ್ಯಕ್ತಪಡಿಸಲು ಶಕ್ತಿಯಾಗುವ ಉದ್ದೇಶ ಹೊಂದಿದೆ. ಟಿ 20 ವಿಶ್ವಕಪ್ ಮುಂಚಿತವಾಗಿ ವೀರೇಂದ್ರ ಸೆಹ್ವಾಗ್ ಅವರ ಕೂ ಪ್ರವೇಶವು ಬಳಕೆದಾರರು ಮತ್ತು ಕ್ರಿಕೆಟ್ ಅಭಿಮಾನಿಗಳಿಗೆ ಅದ್ಭುತವಾದ ಉತ್ಸಾಹವನ್ನು ಕೆರಳಿಸಿದೆ'' ಎಂದು ಹೇಳಿದರು.
ಕೂ ಬಗ್ಗೆ: ಕೂ ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ, ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ ಕೂ ಒಂದು ವೇದಿಕೆಯನ್ನು ಒದಗಿಸುತ್ತದೆ.

ಟ್ವಿಟರ್ ಮಾದರಿಯಲ್ಲಿಯೇ ಪೋಸ್ಟ್, ವೀಡಿಯೋ, ಪೋಟೋ ಕೂ ಆಪ್‌ನಲ್ಲಿ ಬಳಕೆದಾರರು ಮಾಡಬಹುದಾಗಿದೆ. ಕೂ ಆಪ್ ಅನ್ನು ಕ್ರಿಕೆಟಿಗ ಜಾವಗಲ್ ಶ್ರೀನಾಥ್, ಅನಿಲ್‌ಕುಂಬ್ಳೆ, ಸ್ಯಾಂಡಲ್ ವುಡ್ ನಟರು, ರಾಜಕೀಯ ಮುಖಂಡರು ಇನ್ಸ್ಟಾಲ್ ಮಾಡಿಕೊಂಡು ಬಳಕೆ ಮಾಡುತ್ತಿದ್ದಾರೆ. ಇವರನ್ನು ಅನೇಕ ಅವರ ಅಭಿಮಾನಿಗಳು ಫಾಲೋ ಕೂಡ ಮಾಡುತ್ತಿದ್ದಾರೆ.
ಟ್ವಿಟರ್‌ನಲ್ಲಿ ಕೇವಲ 2 ನಿಮಿಷಗಳ ವರೆಗೆ ಮಾತ್ರ ವೀಡಿಯೋ ಅಪ್ ಲೋಡ್ ಮಾಡಬಹುದಾದರೇ, ಕೂ ಆಪ್ ನಲ್ಲಿ 10 ನಿಮಿಷದವರೆಗಿನ ವೀಡಿಯೋವನ್ನು ಅಪ್ ಲೋಡ್ ಮಾಡಬಹುದಾಗಿದೆ. 2020 ರ ಭಾರತದ ಅತ್ಯುತ್ತಮ ದೈನಂದಿನ ಅಗತ್ಯವಿರುವ ಅಪ್ಲಿಕೇಶನ್ ವಿಭಾಗದಲ್ಲಿ ಕೂ ಆ್ಯಪ್ ಪ್ರಶಸ್ತಿ ಗೆದ್ದಿದೆ.
ಕೂ ಭಾರತದ ಭಾಷೆ ಮಾತನಾಡುವವರಿಗೆ ತಮ್ಮ ಮಾತೃಭಾಷೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ವ್ಯಕ್ತಪಡಿಸಲು ಮತ್ತು ಇತರರ ಆಲೋಚನೆಗಳನ್ನು ತಮ್ಮ ಆದ್ಯತೆಯ ಭಾಷೆಯಲ್ಲಿ ವ್ಯಕ್ತಪಡಿಸಲು ವೇದಿಕೆಯನ್ನು ನೀಡುತ್ತದೆ. ಕೂನಲ್ಲಿ ಬಳಕೆದಾರರು ಭಾರತೀಯ ಭಾಷೆಯಲ್ಲಿ ಪಡೆಯುವ ವಿಶೇಷ ಅನುಭವವು ಬೇರೆ ಯಾವುದೇ ಮೈಕ್ರೋಬ್ಲಾಗ್‌ನಲ್ಲಿ ಲಭ್ಯವಿರುವುದಿಲ್ಲಎಂದು ಸ್ಥಾಪಕರಲ್ಲಿ ಒಬ್ಬರಾದ ಅಪ್ರಮೇಯ ರಾಧಾಕೃಷ್ಣ ಹೇಳಿದ್ದಾರೆ.
ಎಲ್ಲಾ ಹಂತದ ವೃತ್ತಿಯ ಹಾಗೂ ವಿಭಾಗದ ಜನರು ಕೂನಲ್ಲಿದ್ದಾರೆ - ರಾಜಕಾರಣಿಗಳು, ಕನ್ನಡ ಚಲನಚಿತ್ರೋದ್ಯಮಿಗಳು, ಕ್ರೀಡಾ ತಾರೆಗಳು, ಲೇಖಕರು, ಬರಹಗಾರರು, ಕವಿಗಳು, ಗಾಯಕರು, ಸಂಗೀತ ಸಂಯೋಜಕರು, ಪತ್ರಕರ್ತರು, ಸಂಪಾದಕರು ಮತ್ತು ಲಕ್ಷಾಂತರ ಬಳಕೆದಾರರು 1000 ಕ್ಕೂ ವಿವಿಧ ವೃತ್ತಿಗಳಲ್ಲಿರುವ ಜನರಿದ್ದಾರೆ. ರೈತರು, ಚಾಲಕರು, ಬಡಗಿಗಳು ಮತ್ತು ಎಲ್ಲೂ ಕೇಳದ ಸಮಾಜದ ಕೆಲವು ವರ್ಗಗಳಿಂದ ಕೂ ವೇದಿಕೆ ಧ್ವನಿಯಾಗಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications