ಭಾರತ ಗೆಲ್ಲುವುದು ಗ್ಯಾರಂಟಿ: ‘ಸೆಡೆ’ ಆಂಗ್ಲರಿಗೆ ‘ವಡೆ’ ರೆಡಿ!
ಭಾರತ ಕ್ರಿಕೆಟ್ ತಂಡ ಇಂದು ಇಂಗ್ಲೆಂಡ್ ವಿರುದ್ಧ ಸೇಡಿನ ಪಂದ್ಯ ಆಡಲು ಸಜ್ಜಾಗಿದೆ. 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೂಡ ಭಾರತ & ಇಂಗ್ಲೆಂಡ್ ತಂಡಗಳು ಸೆಮಿ ಫೈನಲ್ ಮ್ಯಾಚ್ ಆಡಿದ್ದವು. ಆದರೆ ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದು ಬೀಗಿತ್ತು, ಈ ಕಾರಣಕ್ಕೆ ಇಂದು ಸೇಡಿನ ಪಂದ್ಯ ನಡೆಯಲಿದೆ ಅಂತಿದ್ದಾರೆ ಅಭಿಮಾನಿಗಳು. ಹಾಗಿದ್ರೆ ಇಂದು ಗೆಲ್ಲುವುದು ಯಾರು? ಮಳೆ ಬಂದರೆ ಕಥೆ ಏನು? ಮುಂದೆ ಓದಿ.
ಭಾರತ ಇಂದು ಆಂಗ್ಲರ ತಂಡಕ್ಕೆ ಕ್ರಿಕೆಟ್ ಪಾಠ ಕಲಿಸಲು ಸಜ್ಜಾಗಿದೆ. ಯಾಕಂದ್ರೆ ಈ ಮ್ಯಾಚ್ ಭಾರತಕ್ಕೆ ಪ್ರತಿಷ್ಠೆಯ ಪಂದ್ಯವಾಗಿದೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದು ಮನೆಗೆ ಕಳಿಸಿರುವ ಭಾರತ ಇದೀಗ ಇಂಗ್ಲೆಂಡ್ ತಂಡಕ್ಕೂ ಮನೆಯ ದಾರಿ ತೋರಿಸಲಿದೆ ಎಂಬ ವಿಶ್ವಾಸ ಅಭಿಮಾನಿ ದೇವರುಗಳದ್ದು. ಹೀಗಿದ್ದಾಗಲೇ ಮ್ಯಾಚ್ ನಡೆಯಲಿರುವ ಜಾಗಕ್ಕೆ ಮಳೆಯ ಭೀತಿ ಕಾಡುತ್ತಿದೆ. ಹಾಗಾದ್ರೆ ಮಳೆ ಬಂದರೆ ಭಾರತಕ್ಕೆ ಏನಾದರೂ ಸಮಸ್ಯೆ ಆಗುತ್ತಾ? ಮುಂದೆ ಓದಿ.

ಮಳೆ ಭಯದಲ್ಲಿ ಮ್ಯಾಚ್!
ಭಾರತ & ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆಯ ಭೀತಿಯು ಕಾಡುತ್ತಿದೆ. ಯಾಕಂದ್ರೆ ಗಯಾನಾದಲ್ಲಿ ಸತತ 12 ಗಂಟೆಗಳ ಕಾಲ ಮಳೆ ಬಿದ್ದು ಈಗ ಕೂಡ ಮೋಡ ಮುಸುಕಿದ ವಾತಾವರಣವೇ ಇದೆ. ಅಕಸ್ಮಾತ್ ಮಳೆ ಬಂದು ಈ ಪಂದ್ಯಕ್ಕೆ ಅಡ್ಡಿಯಾದರೆ ಭಾರತದ ಪರಿಸ್ಥಿತಿ ಏನಾಗಲಿದೆ? ಮುಂದಿನ ಹಂತಕ್ಕೆ ಅಂದ್ರೆ ಫೈನಲ್ ಪಂದ್ಯಕ್ಕೆ ಎಂಟ್ರಿ ಕೊಡುವ ಟೀಂ ಯಾವುದು? ಭಾರತ ತಂಡಕ್ಕೆ ರನ್‌ರೇಟ್ ಸಹಾಯ ಮಾಡುತ್ತಾ? ಮುಂದೆ ಓದಿ.
ಮಳೆ ಬರುವುದು ಗ್ಯಾರಂಟಿ ಗುರೂ!
ಈಗಿನ ಪರಿಸ್ಥಿತಿ ನೋಡುತ್ತಿದ್ದರೆ ಮಳೆ ಬರುವುದು ಬಹುತೇಕ ಗ್ಯಾರಂಟಿ. ಹೀಗಿದ್ದರೂ, ಪಂದ್ಯಕ್ಕೆ 250 ನಿಮಿಷಗಳ ಹೆಚ್ಚುವರಿ ಸಮಯ ಇದೆ. 5 ಓವರ್ ಅಥವಾ ಸೂಪರ್ ಓವರ್ ಆಡಲು ಅವಕಾಶ ಸಿಕ್ಕರೂ ಮ್ಯಾಚ್ ನಡೆಯಲಿದೆ. ಆದರೆ ಭಾರತ & ಇಂಗ್ಲೆಂಡ್ ಪಂದ್ಯಕ್ಕೆ ಮೀಸಲು ದಿನ ಇಲ್ಲ. ಹೀಗಾಗಿ ಸೆಮಿಫೈನಲ್ ಪಂದ್ಯ ಕ್ಯಾನ್ಸಲ್ ಆಗೋದರೆ ಸೂಪರ್-8 ಗ್ರೂಪ್-1 ರಲ್ಲಿ ಮೊದಲ ಸ್ಥಾನ ಪಡೆದಿದ್ದ ಭಾರತ ನೇರವಾಗಿ ಫೈನಲ್‌ಗೆ ಹೋಗಲಿದೆ. ಹಾಗೇ ಇಂಗ್ಲೆಂಡ್ ತಂಡಕ್ಕೆ ಮನೆಯ ದಾರಿ ತೋರಿಸಲಾಗುವುದು. ಇದೇ ಕಾರಣಕ್ಕೆ ಈ ಸಮಯದಲ್ಲಿ ಮಳೆ ಬಂದರೂ ಭಾರತಕ್ಕೆ ಒಳ್ಳೆಯದು ಎನ್ನಲಾಗುತ್ತಿದೆ.
ಭಾರತಕ್ಕೆ ಸೇಡಿನ ಪಂದ್ಯ!
ಇಂಗ್ಲೆಂಡ್ ತಂಡಕ್ಕೆ ಬುದ್ಧಿ ಕಲಿಸಲು ಭಾರತ ತಂಡಕ್ಕೆ ಮತ್ತೊಂದು ಅವಕಾಶ ಇದೀಗ ಸಿಕ್ಕಿದೆ. ಯಾಕಂದ್ರೆ ಈ ಹಿಂದಿನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಂದ್ರೆ 2022ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿತ್ತು ಇದೇ ಕಾರಣಕ್ಕೆ ಈಗ ಸೇಡಿನ ಸಮಯ ಬಂದಿದೆ.
2022 ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವೇ ಮೊದಲು ಬ್ಯಾಟಿಂಗ್ ಮಾಡಿ 6 ವಿಕೆಟ್ ಕಳೆದುಕೊಂಡು 168 ರನ್ ಗಳಿಸಿತ್ತು. ಆದರೂ ಇಂಗ್ಲೆಂಡ್ ತಂಡ ಈ ಗುರಿಯನ್ನ ಕೇವಲ 16 ಓವರ್‌ಗೆ ತಲುಪಿತ್ತು. ಯಾವುದೇ ವಿಕೆಟ್ ನಷ್ಟವಿಲ್ಲದೆ 16 ಓವರ್‌ನಲ್ಲಿ ಇಂಗ್ಲೆಂಡ್ 170 ರನ್ ಗಳಿಸಿತ್ತು. ಈ ಮೂಲಕ ಭಾರತ ವಿರುದ್ಧ ಇಂಗ್ಲೆಂಡ್ 10 ವಿಕೆಟ್ ಗೆಲುವು ದಾಖಲಿಸಿತ್ತು. ಇದೀಗ ಆ ಸೋಲಿನ ಸೇಡು ಗ್ಯಾರಂಟಿ ಅನ್ನೋದು ಭಾರತೀಯರ ಮಾತು.












Click it and Unblock the Notifications