India Vs Sri Lanka: ಫೈನಲ್ ಪಂದ್ಯಕ್ಕೆ ಮುನ್ನವೇ ಗಾಯಗೊಂಡ ಶ್ರೀಲಂಕಾದ ಪ್ರಮುಖ ಸ್ಪಿನ್ನರ್!
ಗುರುವಾರ ನಡೆದ ರೋಚಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ ತಂಡ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಶ್ರೀಲಂಕಾ ಮುಖಾಮುಖಿಯಾಗಲಿವೆ.
ಫೈನಲ್ ಪಂದ್ಯಕ್ಕೆ ಮುನ್ನವೇ ಶ್ರೀಲಂಕಾದ ಪ್ರಮುಖ ಸ್ಪಿನ್ನರ್ ಗಾಯಗೊಂಡಿದ್ದು ತಂಡಕ್ಕೆ ಹಿನ್ನಡೆಯಾಗಿದೆ. ಲಂಕಾದ ಸ್ಟಾರ್ ಸ್ಪಿನ್ನರ್ ಮಹೇಶ್ ತೀಕ್ಷಣ ಗುರುವಾರ ಪಾಕ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದಾರೆ. ಬಲ ಮಂಡಿರಜ್ಜು ಸಮಸ್ಯೆಯಿಂದ ಬಳಲುತ್ತಿದ್ದು, ಭಾನುವಾರ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

"ಶ್ರೀಲಂಕಾ-ಪಾಕಿಸ್ತಾನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಮಹೇಶ್ ತೀಕ್ಷಣ ಗಾಯಗೊಂಡರು. ಆಟಗಾರನ ಸ್ಥಿತಿಯನ್ನು ಸಂಪೂರ್ಣವಾಗಿ ಪರೀಕ್ಷಿಸಲು, ನಾಳೆ ಸ್ಕ್ಯಾನ್ ಮಾಡಲಾಗುತ್ತದೆ," ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಮೈದಾನದಿಂದ ಹೊರನಡೆದ ತೀಕ್ಷಣ
ಮಹೇಶ್ ತೀಕ್ಷಣ ಏಷ್ಯಾಕಪ್ ಫೈನಲ್‌ನಲ್ಲಿ ಆಡದಿರುವ ಸಾಧ್ಯತೆಯಿದೆ
ಗುರುವಾರ, ಶ್ರೀಲಂಕಾ ಪರ ಬೌಲಿಂಗ್ ಮಾಡಿದ ಮಹೇಶ್ ತೀಕ್ಷಣ ತಮ್ಮ ಮೊದಲ ಐದು ಓವರ್‌ಗಳಲ್ಲಿ ಕೇವಲ 14 ರನ್‌ಗಳನ್ನು ಬಿಟ್ಟುಕೊಟ್ಟರು.
28ನೇ ಓವರ್‌ನಲ್ಲಿ ಅವರು ಬೌಲಿಂಗ್‌ಗೆ ಮರಳಿದರು ಮೊಹಮ್ಮದ್ ನವಾಜ್ ಅವರ ವಿಕೆಟ್ ಪಡೆದರು. 35 ನೇ ಓವರ್‌ನಲ್ಲಿ ಮತ್ತೊಂದು ಸ್ಪೆಲ್‌ಗೆ ಹಿಂದಿರುಗಿದಾಗ, ಅವರು ನೋವಿನಿಂದ ನರಳುತ್ತಿದ್ದರು. ಅವರ ಮಂಡಿರಜ್ಜು ಗಾಯಗೊಂಡಂತೆ ಕಂಡುಬಂದಿತು. 39ನೇ ಓವರ್‌ನ ಆರಂಭದಲ್ಲಿ ತೀಕ್ಷಣ ಸಹಾಯಕ ಸಿಬ್ಬಂದಿ ಸಹಾಯದೊಂದಿಗೆ ಮೈದಾನದಿಂದ ಹೊರನಡೆದರು, ಅವರು ಮತ್ತೆ ಮೈದಾನಕ್ಕೆ ಹಿಂದಿರುಗಲಿಲ್ಲ.
ಭಾನುವಾರ ನಡೆಯಲಿರುವ ಭಾರತ ವಿರುದ್ಧ ಏಷ್ಯಾಕಪ್ ಫೈನಲ್‌ನಲ್ಲಿ ಮಹೇಶ್ ತೀಕ್ಷಣ ಆಡುವ ಸಾಧ್ಯತೆ ತೀರಾ ಕಡಿಮೆ. ಈಗಾಗಲೇ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಲಂಕಾ ತಂಡಕ್ಕೆ ಇದು ಭಾರಿ ಹಿನ್ನಡೆಯಾಗಿದೆ. ಅಕ್ಟೋಬರ್ 5ರಿಂದ ಏಕದಿನ ವಿಶ್ವಕಪ್ ಆರಂಭವಾಗುವ ಕಾರಣ ಆಟಗಾರರ ಫಿಟ್‌ನೆಸ್ ಬಗ್ಗೆ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೆಚ್ಚಿನ ಜಾಗೃತಿ ವಹಿಸಲಿದೆ.
ಮಹೀಶ್ ತೀಕ್ಷಣ ಶ್ರೀಲಂಕಾ ಪರ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. 15 ಏಕದಿನ ಪಂದ್ಯಗಳಲ್ಲಿ 17.45 ಸರಾಸರಿಯಲ್ಲಿ 31 ವಿಕೆಟ್ ಪಡೆದಿದ್ದಾರೆ. ಹಲವು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪಂದ್ಯ ಗೆಲ್ಲಿಸಿದ್ದಾರೆ.
ತೀಕ್ಷಣ ಆರೋಗ್ಯವಂತರಾಗಿದ್ದರೆ, 2023 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ನಿರ್ಣಾಯಕ ಅಂಶವಾಗಿರಲಿದ್ದಾರೆ. ಸೆಪ್ಟೆಂಬರ್ 28 ರೊಳಗೆ ತಂಡಗಳು ಎಲ್ಲಾ ರಾಷ್ಟ್ರಗಳು ತಂಡವನ್ನು ಪ್ರಕಟಿಸಬೇಕಾಗಿದೆ.
ಭಾರತ ಶ್ರೀಲಂಕಾ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಸ್ಪಿನ್ನರ್ ಗಳ ವಿರುದ್ಧ ಕೆಟ್ಟ ಪ್ರದರ್ಶನ ನೀಡಿದ್ದರು. ವೆಲ್ಲಾಲಗೆ 5 ವಿಕೆಟ್ ಪಡೆದು ಭಾರತ ತಂಡದ ಬ್ಯಾಟಿಂಗ್ ಅನ್ನು ಕಟ್ಟಿಹಾಕಿದ್ದರು. ಭಾನುವಾರ ಕೂಡ ಶ್ರೀಲಂಕಾದ ಸ್ಪಿನ್ ಅಸ್ತ್ರವನ್ನು ಹೇಗೆ ಎದುರಿಸುತ್ತಾರೆ ಎಂದು ನೋಡಬೇಕಿದೆ.












Click it and Unblock the Notifications