ಹುಲಿ & ಸಿಂಹಗಳ ಭೀಕರ ಕಾದಾಟದಲ್ಲಿ 203 ರನ್ ಗುರಿ, ಅಬ್ಬಬ್ಬಾ ಏನ್ ಮ್ಯಾಚ್ ಗುರೂ! Asia Cup
ಭಾರತ ಕ್ರಿಕೆಟ್ ತಂಡ ಈ ಬಾರಿಯ ಏಷ್ಯಾ ಕಪ್ ಟೂರ್ನಿಯಲ್ಲಿ ತನ್ನ ಶಕ್ತಿ ಏನು ಅನ್ನೋದನ್ನ ಇಡೀ ಜಗತ್ತಿಗೇ ತೋರಿಸಿದೆ. ಭಾರತ ಕ್ರಿಕೆಟ್ ತಂಡದ ಅಬ್ಬರದ ಎದುರು ಪಾಪಿ ಪಾಕಿಸ್ತಾನ, ಬಾಂಗ್ಲಾದೇಶ ಸೇರಿ ಹಲವು ಕ್ರಿಕೆಟ್ ತಂಡಗಳು ಉಡೀಸ್ ಆಗಿ ಹೋಗಿವೆ. ಅದರಲ್ಲೂ ಭಾರತದ ಬೌಲಿಂಗ್ ದಾಳಿಯಿಂದ ಹೆದರಿ ಹೋಗಿತ್ತು ಪಾಕಿಸ್ತಾನ & ಬಾಂಗ್ಲಾದೇಶ. ಇದೇ ಕಾರಣಕ್ಕೆ ಅದ್ಧೂರಿಯಾಗಿ ಫೈನಲ್ ಪ್ರವೇಶಿಸಿ ಅಬ್ಬರಿಸಿದೆ ಭಾರತ ತಂಡ. ಹೀಗಿದ್ದಾಗ ಶ್ರೀಲಂಕಾ ಜೊತೆಗೂ ಇಂದು ಭಾರತ ತಂಡದ ಭರ್ಜರಿ ಮ್ಯಾಚ್ ನಡೆದಿತ್ತು...
ಹೌದು, ಭಾರತ & ಶ್ರೀಲಂಕಾ ತಂಡಗಳ ನಡುವೆ ಇಂದು ಭರ್ಜರಿಯಾದ ಮ್ಯಾಚ್ ನಡೆಯಿತು. ಈ ಪಂದ್ಯ ನೋಡಲು ಜಗತ್ತೇ ಕಾದು ಕುಳಿತಿತ್ತು. ಯಾಕಂದ್ರೆ ಏಷ್ಯಾಕಪ್ ಟೂರ್ನಿ 2025ರ ಅಖಾಡದಲ್ಲಿ ಭಾರತ ತಂಡ ಒಂದೇ ಒಂದು ಮ್ಯಾಚ್ ಕೂಡ ಸೋತಿಲ್ಲ. ಹೀಗೆ ಒಂದು ಪಂದ್ಯವನ್ನೂ ಸೋಲದ, ಫೈನಲ್ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಭಾರತ ತಂಡ ಶ್ರೀಲಂಕಾ ತಂಡಕ್ಕೂ ಸುಲಭವಾಗಿ ಬುದ್ಧಿ ಕಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಭರ್ಜರಿ 202 ರನ್ ಗಳಿಸಿದ್ದರೂ ಭಾರತ ತಂಡ ತೀವ್ರವಾಗಿ ಪರದಾಡಿಬಿಟ್ಟಿತು. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ದೊಡ್ಡ ನಿರಾಸೆ ತರಿಸಿತ್ತು...

ಅಂತಿಮವಾಗಿ ಭಾರತಕ್ಕೆ ಭರ್ಜರಿ ಗೆಲುವು!
ಈ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಮೇಲುಗೈ ಸಾಧಿಸಿದ್ದರೂ, ಆ ನಂತರ ಪಂದ್ಯ ಕೈಬಿಟ್ಟು ಕೂರುವ ಪರಿಸ್ಥಿತಿ ಎದುರಾಗಿತ್ತು. ಆದರೆ ಭಾರತ ನೀಡಿದ್ದ ಗುರಿ ಬೆನ್ನುಹತ್ತಿದ್ದ ಶ್ರೀಲಂಕಾ ಕೂಡ ಉತ್ತಮ ಸ್ಕೋರ್ ಮಾಡಿ ಕೊನೆಗೂ ಸೂಪರ್ ಓವರ್ ತನಕ ಮ್ಯಾಚ್ ಬರುವಂತೆ ಮಾಡಿತ್ತು. ಅಂತಿಮವಾಗಿ ಭಾರತ ತಂಡ ಸೂಪರ್ ಓವರ್ ಅಖಾಡದಲ್ಲಿ ಗೆದ್ದು ಬೀಗಿದೆ.
ಭಾರತ ತಂಡದ ಅಬ್ಬರ ಜೋರು
ಭಾರತ ಕ್ರಿಕೆಟ್ ತಂಡ ಮತ್ತೊಮ್ಮೆ ತಾನೇ ಏಷ್ಯಾದ ಕ್ರಿಕೆಟ್ ಕಿಂಗ್ ಅನ್ನೋದನ್ನು ಜಗತ್ತಿಗೆ ಸಾರಿ ಹೇಳಿದೆ. ಭಾರತದ ವಿರುದ್ಧ ಯಾವುದೇ ತಂಡ ಇದ್ದರೂ ಸೋಲಿಸುವುದು ನಾವೇ ಅನ್ನೋದನ್ನು ಕೂಡ ಭಾರತದ ಆಟಗಾರರು ಮತ್ತೊಮ್ಮೆ ಮನವರಿಕೆ ಮಾಡಿದ್ದಾರೆ. ಹಾಗೇ ಭಾರತ ತಂಡದ ಆಟವನ್ನು ನೋಡಿ ಇಡೀ ಕ್ರಿಕೆಟ್ ಜಗತ್ತು ಇದೀಗ ಎದ್ದು ನಿಂತು ಸಲಾಂ ಹೊಡೆದಿದ್ದು, ಶತಕೋಟಿ ಅಭಿಮಾನಿಗಳು ಕೂಡ ಫಿದಾ ಆಗಿದ್ದಾರೆ. ಈ ಮೂಲಕ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡ ಮಿಂಚು ಹರಿಸಿದೆ.












Click it and Unblock the Notifications