3,3,2,1.. 55.. ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲಿಗೆ ಕಾರಣರ್ತರಾದವರು ಇವರೇ ನೋಡಿ

INDW vs PAKW: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ (ಸೆಪ್ಟೆಂಬರ್ 5) ನಡೆದ ಮಹಿಳಾ ಟಿ20 ಏಷ್ಯಾಕಪ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾ ವಿರುದ್ಧ ಪಾಕಿಸ್ತಾನ ಹೀನಾಯ ಸೋಲು ಕಂಡಿತು. ಭಾರತದ ಭರ್ಜರಿ ಗೆಲುವಿಗೆ ಪ್ರಮುಖ ಕಾರಣಕರ್ತರು ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್‌ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್‌ ಮಾಡಲು ನಿರ್ಧರಿಸಿತು. ಆದರೆ ಟೀಮ್‌ ಇಂಡಿಯಾ ಬೌಲರ್‌ಗಳ ದಾಳಿಗೆ ತತ್ತರಿಸಿದ ಪಾಕ್‌ 18.1 ಓವರ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಆಲ್‌ಔಟ್‌ ಆಗುವ ಮೂಲಕ ಕೇವಲ 55 ರನ್‌ಗಳ ಸಾಧಾರಣ ಮೊತ್ತವನ್ನು ಪೇರಿಸಿತು. ಬಳಿಕ ಬ್ಯಾಟ್‌ ಬೀಸಿದ ಭಾರತ 57 ರನ್‌ಗಳ ಸಾಧಾರಣ ಗುರಿಯನ್ನು ಕೇವಲ 8.4 ಓವರ್‌ಗಳಗೆ ಮುಗಿಸಿ ಭರ್ಜರಿ ಗೆಲುವು ಸಾಧಿಸಿತು. ಇನ್ನು ಈ ಹೀನಾಯ ಸೋಲಿಂದ ಪಾಕ್‌ ಭಾರಿ ಮುಖಭಂಗ ಅನುಭವಿಸಿತು.

India vs Pakistan Women s Asia Cup 2026 4 Bowlers Behind India Win in Dubai Inaternational Stadium

ಉಲ್ಟಾ ಹೊಡೆದ ಪಾಕಿಸ್ತಾನದ ನಿರ್ಧಾರ

ದುಬೈನಲ್ಲಿ ಶನಿವಾರ ನಡೆದ ಮಹಿಳೆಯರ ಏಷ್ಯಾ ಕಪ್ 2026ರ ಗ್ರೂಪ್ 'ಎ' ಪಂದ್ಯದಲ್ಲಿ, ಭಾರತ ತಂಡವು ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿತು. ಈ ಮೂಲಕ ಪಾಕಿಸ್ತಾನದ ನಾಯಕಿ ಫಾತಿಮಾ ಸನಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಉಲ್ಟಾ ಹೊಡೆಯಿತು. ಟೀಮ್ ಇಂಡಿಯಾ ಸ್ಪಿನ್ನರ್‌ಗಳು ಎದುರಾಳಿ ಬ್ಯಾಟರ್‌ಗಳನ್ನು ಧೂಳೀಪಟ ಮಾಡಿದರು.

ಪಾಕ್ ಯೋಜನೆ ತಲೆಕೆಳಗಾಗಿಸಿದ ಟೀಮ್ ಇಂಡಿಯಾ

ಭಾರತದ ಪರ ಬೌಲಿಂಗ್ ಮಾಡಿದ ಶ್ರೀ ಚರಣಿ ಮತ್ತು ಪ್ರೇಮಾ ರಾವತ್ ತಲಾ ಮೂರು ವಿಕೆಟ್ ಪಡೆದರೆ, ದೀಪ್ತಿ ಶರ್ಮಾ ಎರಡು ಹಾಗೂ ಶಫಾಲಿ ವರ್ಮಾ ಒಂದು ವಿಕೆಟ್ ಉರುಳಿಸಿ ಪಾಕಿಸ್ತಾನದ ಯೋಜನೆಯನ್ನೇ ತಲೆಕೆಳಗಾಗಿಸಿದರು. ಪಾಕ್‌ ಪರ ಬ್ಯಾಟ್‌ ಬೀಸಿದ ಶವ್ವಾಲ್ ಜುಲ್ಫಿಕರ್ ಅವರು 14 ರನ್‌, ಮುನೀಬಾ ಅಲಿ 13 ರನ್‌ ಗಳಿಸಿದರೆ ಉಳಿದವರು ಒಂದಂಕಿಯನ್ನು ದಾಟದೇ ವಿಕೆಟ್‌ ಒಪ್ಪಿಸಿ ಪೆವಿಲಿಯನ್ ಕಡೆ ನಡೆದರು.

ಸುಲಭವಾಗಿ ಗುರಿ ತಲುಪಿದ ಭಾರತ

ಬಳಿಕ ಬ್ಯಾಟ್‌ ಬೀಸಿದ ಭಾರತ ಇನ್ನೂ 68 ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿ ಸತತ ಮೂರನೇ ಗೆಲುವಿನೊಂದಿಗೆ ಗ್ರೂಪ್‌ನಲ್ಲಿ ಅಗ್ರಸ್ಥಾನಕ್ಕೇರಿತು. ಈ ಪಂದ್ಯದೊಂದಿಗೆ ಭಾರತದ ನಾಯಕಿ ಹರ್ಮನ್‌ಪ್ರೀತ್ ಕೌರ್, ಪುರುಷ ಅಥವಾ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ 150 ಟಿ20ಐ ಪಂದ್ಯಗಳಲ್ಲಿ ನಾಯಕತ್ವ ವಹಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಕೀರ್ತಿಗೆ ಪಾತ್ರರಾದರು.

ಭಾರತದ ಗೆಲುವಿಗೆ ಪ್ರಮುಖ ಕಾರಣ ಇವರೇ ನೋಡಿ

ಒಟ್ಟಿನಲ್ಲಿ ಶನಿವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ ಪ್ರಮುಖ ಕಾರಣರಾಗಿದ್ದೇ ಶ್ರೀ ಚರಣಿ, ಪ್ರೇಮಾ ರಾವತ್, ದೀಪ್ತಿ ಶರ್ಮಾ, ಶಫಾಲಿ ವರ್ಮಾ. ಇವರ ಮಾರಕ ಬೌಲಿಂಗ್‌ ದಾಳಿಕೆ ತತ್ತರಿಸಿದ ಪಾಕಿಸ್ತಾನ ಮೂರಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಮತ್ತೊಂಡೆಗೆ ಈ ಬೌಲರ್‌ಗಳು ತಂಡದ ಬ್ಯಾಟರ್‌ಗಳ ಮೇಲೆ ಒತ್ತಡ ಬೀರದಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು.

ಭಾರತ ಹಾಗೂ ಪಾಕಿಸ್ತಾನ ಪ್ಲೇಯಿಂಗ್ 11

ಭಾರತ ಪ್ಲೇಯಿಂಗ್ 11: ಶಫಾಲಿ ವರ್ಮಾ, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನಾ (ಉಪನಾಯಕಿ), ಪ್ರತಿಕಾ ರಾವಲ್, ಭಾರತಿ ಫುಲ್ಮಾಲಿ, ರಿಚಾ ಘೋಷ್ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಪ್ರೇಮಾ ರಾವತ್, ನಂದಿನಿ ಶರ್ಮಾ, ಶ್ರೀ ಚರಣಿ, ಕ್ರಾಂತಿ ಗೌಡ್.

ಪಾಕಿಸ್ತಾನ ಪ್ಲೇಯಿಂಗ್ 11: ಫಾತಿಮಾ ಸನಾ (ನಾಯಕಿ), ಮುನೀಬಾ ಅಲಿ (ವಿಕೆಟ್ ಕೀಪರ್), ಶವ್ವಾಲ್ ಜುಲ್ಫಿಕರ್, ಗುಲ್ ಫಿರೋಜಾ, ಆಯೆಷಾ ಜಾಫರ್, ಸದಾಫ್ ಶಮಾಸ್, ಉಮ್-ಎ-ಹಾನಿ, ತುಬಾ ಹಸನ್, ನಶ್ರಾ ಸುಂಧು, ಸಾದಿಯಾ ಇಕ್ಬಾಲ್, ಐಮನ್ ಫಾತಿಮಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+