Asia Cup 2025: ಭಾರತ-ಪಾಕಿಸ್ತಾನ ಹೈವೋಲ್ಟೇಜ್‌ ಕ್ರಿಕೆಟ್ ಪಂದ್ಯದ ಸಮಯ, ನೇರಪ್ರಸಾರದ ಬಗ್ಗೆ ಮಾಹಿತಿ

Ind Vs Pak: ಭಾರತ-ಪಾಕಿಸ್ತಾನ ನಡುವಿವ ಕ್ರಿಕೆಟ್‌ ಪಂದ್ಯ ಯಾವಾಗಲೂ ಹೈವೋಲ್ಟೇಜ್‌ ಆಗಿರುತ್ತದೆ. ಹಾಗೆಯೇ ಇಂದು (ಸೆಪ್ಟೆಂಬರ್ 14) ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್‌ ಟೂರ್ನಿಯಲ್ಲಿ ಈ ಎರಡು ತಂಡಗಳು ಮುಖಾಮುಖಿ ಆಗಲಿವೆ. ಹಾಗಾದ್ರೆ ಸಮಯ, ಉಚಿತವಾಗಿ ವೀಕ್ಷಣೆ ಮಾಡುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಭಾರತ-ಪಾಕಿಸ್ತಾನ ಕ್ರಿಕೆಟ್ ತಂಡಗಳು ಮುಖಾಮುಖಿಯಾದ ವೇಳೆ ಬರೀ ಭಾರತ ಅಷ್ಟೇ ಅಲ್ಲದೆ, ಇಡೀ ವಿಶ್ವಾದ್ಯಂತ ಪಂದ್ಯ ವೀಕ್ಷಣೆ ಮಾಡಲು ಕಾತರದಿಂದ ಕಾಯುತ್ತಿದ್ದರು. ಆದರೆ, ಇಂದು ನಡೆಯುವ ಏಷ್ಯಾ ಕಪ್‌ನಲ್ಲಿ ಈ ಎರಡು ತಂಡಗಳ ಮ್ಯಾಚ್‌ ವೀಕ್ಷಿಸುವವರ ಸಂಖ್ಯೆ ಕಡಿಮೆಯಾಗಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಇಲ್ಲಿನ ಅರ್ಧದಷ್ಟು ಸೀಟ್‌ಗಳ ಟಿಕೆಟ್‌ಗಳು ಮಾತ್ರ ಬುಕ್‌ ಆಗಿವೆ. ಇನ್ನುಳಿದಂತೆ ಖಾಲಿ ಹೊಡೆಯುತ್ತಿದೆ.

India vs Pakistan Asia Cup 2025 Date Time amp amp Live Stream Info

ಕಳೆದ ಏಪ್ರಿಲ್‌ನಲ್ಲಿ ಪಹಲ್ಗಾಂನಲ್ಲಿ ಉಗ್ರ ದಾಳಿ ಬಳಿಕ ಭಾರತ ತಂಡವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಆಡುವ ಬಗ್ಗೆ ಭಾರೀ ಚರ್ಚೆ ಆಗಿತ್ತು. ಪಾಕ್ ಜೊತೆಗಿನ ಎಲ್ಲಾ ರೀತಿ ಸಂಬಂಧ ಕಡಿತಗೊಳಿಸಲು ಕೊನೆಗೊಳಿಸಲು ಒತ್ತಾಯಗಳು ಕೇಳಿಬಂದಿದ್ದವು. ಅಲ್ಲದೆ, ಇದೀಗ ಪಂದ್ಯ ಬಹಿಷ್ಕಾರ ಮಾಡುವಂತೆಯೂ ಕೂಗುಗಳು ಕೇಳಿಬರುತ್ತಿವೆ. ಈ ನಡುವೆಯೂ ಪಾಕಿಸ್ತಾನದ ವಿರುದ್ಧ ಭಾರತ ಪಂದ್ಯವಾಡಲು ಸಜ್ಜಾಗಿದೆ.

ಆಕ್ರೋಗಳ ನಡುವೆಯೂ ಎರಡೂ ತಂಡಗಳು ಏಷ್ಯಾ ಕಪ್‌ನಲ್ಲಿ ಮುಖಾಮುಖಿ ಆಗಲು ಸಜ್ಜಾಗಿದ್ದು, ಇದು ಕುತೂಹಲ ಹುಟ್ಟುಹಾಕಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನದ ಪ್ರಕಾರ, ರಾತ್ರಿ 8 ಗಂಟೆಗೆ ಪಂದ್ಯ ಆರಂಭ ಆಗಲಿದೆ. ಇದಕ್ಕೂ ಮುಂಚಿತವಾಗಿ 7.30ಕ್ಕೆ ಟಾಸ್ ಪ್ರಕ್ರಿಯೆ ಆಗಲಿದೆ. ಈ ಹೈವೋಲ್ಟೇಜ್‌ ಪಂದ್ಯವನ್ನು ನೇರಪ್ರಸಾರದಲ್ಲಿ ಟಿವಿ, ಸ್ಟ್ರೀಮಿಂಗ್ ಮೂಲಕ ವೀಕ್ಷಣೆ ಮಾಡಬಹುದು.

ನೇರಪ್ರಸಾರದ ವಿವರ: ಭಾರತದಲ್ಲಿ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಆಗಲಿವೆ. ಸೋನಿಲಿವ್ ಮತ್ತು ಫ್ಯಾನ್‌ಕೋಡ್‌ನಲ್ಲಿ ನೇರಪ್ರಸಾರ ವೀಕ್ಷಣೆ ಮಾಡಬಹುದು. ದೂರದರ್ಶನ ಮತ್ತು ಜಿಯೋ ಟಿವಿಯಲ್ಲಿ ಪಂದ್ಯಗಳನ್ನು ಉಚಿತವಾಗಿ ವೀಕ್ಷಣೆ ಮಾಡುವ ಅವಕಾಶ ಕಲ್ಪಿಸಿಕೊಡಲಾಗಿದೆ. ಅಲ್ಲದೆ, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕವೂ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಬಹುದಾಗಿದೆ.

ಟಿವಿಗಳಲ್ಲಿ ಭಾರತ-ಪಾಕ್ ಪಂದ್ಯದ ನೇರಪ್ರಸಾರ

* ಸೋನಿ ಸ್ಪೋರ್ಟ್ಸ್ ಟೆನ್ 1
* ಸೋನಿ ಸ್ಪೋರ್ಟ್ಸ್ ಟೆನ್ 1 HD
* ಸೋನಿ ಸ್ಪೋರ್ಟ್ಸ್ ಟೆನ್ 5
* ಸೋನಿ ಸ್ಪೋರ್ಟ್ಸ್ ಟೆನ್ 5 HD

ಟೀಮ್ ಇಂಡಿಯಾ: ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಶುಭ್‌ಮನ್ ಗಿಲ್, ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಕುಲ್‌ದೀಪ್‌ ಯಾದವ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಶ್​ದೀಪ್ ಸಿಂಗ್.

ಪಾಕ್‌ ತಂಡ: ಸಲ್ಮಾನ್ ಆಘಾ (ನಾಯಕ), ಮೊಹಮ್ಮದ್ ಹ್ಯಾರಿಸ್ (ವಿ.ಕೀ.), ಸೈಮ್ ಅಯೂಬ್, ಸಾಹಿಬ್‌ಜಾದಾ ಫರ್ಹಾನ್, ಫಖರ್ ಜಮಾನ್, ಹಸನ್ ನವಾಜ್, ಫಹೀಮ್ ಅಶ್ರಫ್, ಶಾಹೀನ್ ಅಫ್ರೀದಿ, ಸುಫಿಯಾನ್ ಮುಖೀಮ್, ಅಬ್ರಾರ್ ಅಹ್ಮದ್, ಹುಸೇನ್ ತಲಾತ್, ಹಸನ್ ಅಲಿ, ಹ್ಯಾರಿಸ್ ರೌಫ್, ಮೊಹಮ್ಮದ್ ಸಲ್ಮಾನ್ ಮಿರ್ಜಾ.

ಪಂದ್ಯದ ಸಮರ, ಸ್ಥಳದ ವಿವರ

ಆರಂಭ: ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8 ಗಂಟೆಗೆ
ಸ್ಥಳ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+